ಲಕ್ಷಾಂತರ ಹಣ ಕರ್ಚು ಮಾಡಿ ಮದುವೆ ಮಾಡೋ ಕಾಲದಲ್ಲಿ ಬಿಜೆಪಿ ಶಾಸಕರೊಬ್ಬರು ಸಾಮೂಹಿಕ ಲಗ್ನದಲ್ಲಿ ಮಗನ ಮದುವೆ ಮಾಡಿ ಮಾದರಿಯಾದರ??

0
548

ಈಗಿನ ಕಾಲದಲ್ಲಿ ಸಂಪ್ರದಾಯ ಬದ್ದ ಮದುವೆಗಳು ಅದ್ದೂರಿಯಾಗಿ ನಡೆಯುದು ಹೆಚ್ಚಾಗಿದೆ. ಎಂತಹ ಬಡವರು ಇದ್ದರು ಬರ್ಜರಿ ಭೋಜನ, ಸಕ್ಕತ್ ಬಾಡೂಟ ಇರುವುದು ಸಾಮಾನ್ಯವಾಗಿದೆ. ಅದರಲ್ಲಿ ರಾಜಕೀಯ ನಾಯಕರ ಮಕ್ಕಳ ಮದುವೆ ಎಂದರೆ ಮುಗಿತು. ಇಡಿ ಸುತ್ತ ಮುತ್ತಲ ಊರಿನ ಜನರು ಮದುವೆಯಲ್ಲಿರುವುದು ನೋಡಿರುತ್ತಿರಾ. ಇಂತಹ ಮದುವೆಗೆಂದೆ ಕೋಟಿ ಕೋಟಿ ಹಣ ಕರ್ಚು ಮಾಡಿ ಮದುವೆ ಮಾಡಿದ ರಾಜಕೀಯ ನಾಯಕರು ಇದ್ದಾರೆ. ಉದಾಹರೆಣೆ ಜನಾರ್ಧನ್ ರೆಡಿ, ಹೀಗೆ ಹಲವು ನಾಯಕರು ಲಕ್ಷ- ಲಕ್ಷ ಹಣ ಸುರಿದು ಮದುವೆ ಮಾಡುತ್ತಾರೆ. ಆದರೆ ಇಲ್ಲೊಬ್ಬರು ಬಿಜೆಪಿ ಶಾಸಕರು ತಮ್ಮ ಮಗನ ಮದುವೆ ಮಾಡಿದ್ದು ನೋಡಿದರೆ ಇದೊಂದು ಮಾದರಿ ಮದುವೆ ಅನಿಸುತ್ತೆ.

Also read: ಸರ್ಕಾರದ ಕೆಲಸ ದೇವರ ಕೆಲಸ”, ಒಂದು ಬಾರಿ ಕೆಲಸವನ್ನು ಗಿಟ್ಟಿಸಿಕೊಂಡರೆ ಸಾಕು ದೇವರು ಬಂದು ಹೇಳುವತನಕ ಕೆಲಸ ಮಾಡಲ್ಲ ಎನ್ನವವರ ಮಧ್ಯೆ ಈ ಅಧಿಕಾರಿ ಏನು ಮಾಡಿದರು ಗೊತ್ತೇ?

ತೀರ್ಥಹಳ್ಳಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಪುತ್ರ ಅಭಿನಂದನ್, ಬಿಜೆಪಿ ಯುವ ನಾಯಕ ಕುಕ್ಕೆ ಪ್ರಶಾಂತ್ ಸೇರಿದಂತೆ ಐದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ಜ್ಞಾನೇಂದ್ರ ತಮ್ಮ ಪುತ್ರನ ಮದುವೆಯನ್ನು ಕ್ಷೇತ್ರದ ಜನತೆಯ ಮುಂದೆ ಅದು ಸಾಮೂಹಿಕ ವಿವಾಹದಲ್ಲಿ ನೆರವೇರಿಸಿದ್ದಾರೆ. ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಸರಳವಾಗಿ ಐದು ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆಯನ್ನೂ ಮಾಡಿಸಿ ಸರಳತೆ ಮೆರೆದಿದ್ದಾರೆ.

ಕ್ರೀಡಾಂಗಣದಲ್ಲಿ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ದಂಪತಿಗೆ ಆಶೀರ್ವಾದ ಮಾಡಲು ಸಹ ಸಾರ್ವಜನಿಕರು ಸೇರಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿತ್ತು. ನೀತಿ ಸಂಹಿತೆ ಹಿನ್ನೆಲೆ ಎಲ್ಲೂ ಫೋಟೋ, ಫ್ಲೆಕ್ಸ್ ಅಬ್ಬರ ಕಂಡು ಬರಲಿಲ್ಲ. ಈ ಹಿಂದೆ ಇದೆ ಮದುವೆಯಂತೆ ಶಾಸಕ ಆರಗ ಜ್ಞಾನೇಂದ್ರ ಅವರು ಪುತ್ರಿಯ ವಿವಾಹವನ್ನು ರಾಷ್ಟ್ರಕವಿ ಕುವೆಂಪು ಜನ್ಮ ಸ್ಥಳ ಕುಪ್ಪಳಿಯ ಹೇಮಾಂಗಣದಲ್ಲಿ ಮಂತ್ರ ಮಾಂಗಲ್ಯ ಕಾರ‍್ಯಕ್ರಮದ ಮೂಲಕ ನೆರವೇರಿಸಿದ್ದರು. ಅದರಂತೆ ಮತ್ತೆ ಈಗ ಮಗನ ಲಗ್ನ ಮಾಡಿದ್ದು ಸಾಮೂಹಿಕ ವಿವಾಹದ ಕುರಿತು ಅರಿವು ಮೂಡಿಸಿದ್ದಾರೆ.

ಮದುವೆ ಕುರಿತಾಗಿ ಲಗ್ನ ಪತ್ರಿಕೆ ಸಹ ಮಾಡಿಸದೆ ಸಾಮೂಹಿಕ ವಿವಾಹ ಸಂಚಾಲನಾ ಸಮಿತಿ ರಚನೆ ಮಾಡಿ ಅದರ ಮೂಲಕ ವಿವಾಹ ನಡೆಸಿದರು. ಆರಗ ಜ್ಞಾನೇಂದ್ರರ ಪುತ್ರ ಅಭಿಷೇಕ್ ಬಸವಾನಿಯ ಶೃತಿಯನ್ನು ವರಿಸಿದರು. ಅಭಿಷೇಕ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೂಗಿಯಾಗಿದ್ದು, ಇನ್ನು ಶೃತಿ ಶಿವಮೊಗ್ಗದ ಕಾಲೇಜೊಂದರಲ್ಲಿ
ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಜ್ಞಾನೇಂದ್ರ ಅವರು ನಾನು ಸರಳತೆಗೆ ಹೆಚ್ಚು ಒತ್ತು ನೀಡುವವನು. ಅದ್ದೂರಿ ಮದುವೆ ನಡೆಸಿ ಹಣ ಪೋಲು ಮಾಡುವ ಬದಲು ಸರಳ ವಿವಾಹ ನಡೆಸುವುದರಲ್ಲಿ ನನಗೆ ಆಸಕ್ತಿ. ಇದರಿಂದ ಮಗಳ ಮದುವೆಯನ್ನು ಮಂತ್ರ ಮಾಂಗಲ್ಯದ ಮೂಲಕ ನಡೆಸಿದೆ. ಈಗ ಮಗನ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ನಡೆಸಿದ್ದೇನೆ ಎಂದರು.

ಗಣ್ಯರು ಸೇರಿದಂತೆ 15 ಸಾವಿರ ಜನ;

ಈ ಮದುವೆಗೆ ಸುಮಾರು 15,000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ನಾಯಕರಾದ ಡಿ.ಎಚ್.ಶಂಕರಮೂರ್ತಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ರಾಘವೇಂದ್ರ ಬಿ.ವೈ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಜೀವರಾಜ್, ಶ್ರೀ ರೇಣುಕಾನಂದ ಶ್ರೀಗಳು, ಕವಲೇದುರ್ಗ ಶ್ರೀಗಳು, ಕಲ್ಲಡ್ಕ ಪ್ರಭಾಕರ್ ಭಟ್, ಬೆಳ್ಳಿ ಪ್ರಕಾಶ್, ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಪ್ರಸನ್ನ ಕುಮಾರ್, ಜೆಡಿಎಸ್ ನಾಯಕರಾದ ಮದನ್, ಮಣಿ ಹೆಗಡೆ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಮುಖಂಡರು, ಕಾರ್ಯಕರ್ತರು ಮದುವೆಗೆ ಸಾಕ್ಷಿಯಾದರು.

Also read: ಪ್ರೀತಿ ಎಂದರೆ ಇದೆ ಅನಿಸುತ್ತೆ; ಹುತಾತ್ಮ ಮೇಜರ್​​ ಮಡದಿ ಗಂಡನ ಕನಸ್ಸನ್ನು ನನಸಾಗಿಸಲು ಪತಿ ಧರಿಸುತ್ತಿದ್ದ ಯೂನಿಫಾರಂನ್ನೇ ಧರಿಸುವ ಮೂಲಕ ಸೇನೆಗೆ ಸೇರಿದರು..