ತಮ್ಮ ಕಂಪನಿಯ ಬೋರ್ಡ್ ಕಾಣಿಸುತ್ತಿಲ್ಲವೆಂದು ೨೦ ವರ್ಷ ಹಳೆಯ ದೊಡ್ಡ ಮರವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ MNC ಕಂಪನಿ..

0
911

ಮಾನವೀಯತೆ ಇಲ್ಲದೆ 20 ವರ್ಷದ ಹಳೆಯ ಮರಕ್ಕೆ ಬೆಂಕಿಯಿಟ್ಟು ತಮ್ಮ ಕಂಪನಿಯ ಬೋರ್ಡ್ ತೋರಿಸಿದ ಜನರು…..

ಮರಗಳನ್ನು ಬೆಳೆಸುವುದು ಮಾನವೀಯ ಧರ್ಮ, ಅಲ್ಲದೆ ನಮ್ಮ ಸಂಸ್ಕೃತಿಯನ್ನು ಕಾಪಾಡುವಷ್ಟೆ, ನಮ್ಮ ಪರಿಸರವನ್ನು ಕಾಪಾಡುವುದು ಎಲ್ಲ ವ್ಯಕ್ತಿಗಳ ಕರ್ತವ್ಯವಾಗಿರುತ್ತದೆ. ಮರಗಳನ್ನು ಕಡೆದು ನಾಶಮಾಡುವುದರಿಂದ ನೀರಿನ ಅಭಾವ ಹೆಚ್ಚಾಗುತ್ತದೆ. ಇಂತಹ ಬೇಸಿಗೆಯಲ್ಲು ಜನರು ನೀರಿಲ್ಲದೆ ಪರೆದಾಡುವ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ” ಪರಿಸರವನ್ನು ಉಳಿಸಿ ಪರಿಸರವನ್ನು ಬೆಳೆಸಿ” ಎಂದು ಘೋಷಣೆ ಕೂಗುತಿದ್ದರೆ, ಆದರೆ ಮಾನವೀಯತೆ ಎಲ್ಲದ ಕಂಪನಿಯೊಂದು ತನ್ನ ನಾಮಫಲಕವನ್ನು ಜನರಿಗೆ ಆಕರ್ಷಣೆಯ ಮೂಲಕ ತೋರಿಸುವ ಸಲುವಾಗಿ 20 ವರ್ಷದ ಹಳೆಯ ಮರವನ್ನು ನಾಶಮಾಡಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ Accenture ಕಂಪನಿ ಸಿಬ್ಬಂದಿ ಮರ ಕಡಿದು ಮರದ ಬುಡಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಕೃತ್ಯಗಳನ್ನು ಎಸಗುವ ಮೊದಲು ಪರಿಸರನಾಶ ಮಾಡುವುದರಿಂದ ಉಂಟಾಗುವ ಪರಿಣಾಮವನ್ನು ಲೆಕ್ಕಿಸದೆ, ಜನರು ಬಿಸಿಲ ಬೇಗೆಯಲ್ಲಿ ಬೇಯುತ್ತಿರುವುದನ್ನು ಕೂಡ ಯೋಚಿಸದ, Accenture ಕಂಪನಿಯು ನಿಬ್ಬಂದಿಯ ಸಹಾಯದಿಂದ ಮರವನ್ನು ಕಡಿಸುವುದರ ಮೂಲಕ ದರ್ಪದ ವರ್ತನೆ ತೋರಿದ್ದು, 20 ವರ್ಷಗಳಿಂದ ಸಂಬೃದಿಯಾಗಿ ಬೆಳೆದು ನಿಂತಿದ್ದು, ಹಲವಾರು ಜನರಿಗೆ ನೆರಳು ನೀಡುತ್ತಿದಂತ ಹಳೆಯ ಮರದ ಮರಣ ಹೋಮ ನಡೆಸಿದ್ದಾರೆ.

ಕೇವಲ ನಮ್ಮ ಕಂಪನಿಯ ಬೋರ್ಡ್ ಜನರಿಗೆ ಕಾಣಿಸುವಂತೆ ಮಾಡುವುದಕೋಸ್ಕರ ಈ ಕೃತ್ಯಗಳನ್ನು ನಡೆಸಿದ್ದಾರೆ. ಮರವನ್ನು ಕಡಿಯುವ ಮೊದಲು ಅರಣ್ಯ ಘಟಕದ ಅನುಮತಿಯನ್ನು ಪಡೆಯದ್ದೆ, ತಾವೇ ಇಂತಹ ಕೃತ್ಯಗಳನ್ನು ಮಾಡಿದ್ದಾರೆ.
ಪರಿಸರ ಪ್ರೇಮಿಯಾಗಿರುವ ವಕೀಲ ಉಮೇಶ್ ಎಂಬುವರು ಬಿಟಿಎಂ ಲೇಔಟ್ ಠಾಣೆಯಲ್ಲಿ Accenture ಕಂಪನಿ ವಿರುದ್ಧ ದೂರು ದಾಖಲಿದಿದ್ದರೆ.

ಈ ಸುದ್ದಿ ಪಬ್ಲಿಕ್ TV ಯ ವರದಿಯನ್ನು ಆಧಾರಿಸಿದೆ..