ತಕ್ಷಣ ಹಣ ಹೊಂದಿಸಲು ಕಷ್ಟವಾಗುತ್ತಿದೆ ಅಂದ್ರೆ, ಈ App ಉಪಯೋಗಿಸಿ 5 ನಿಮಿಷದೊಳಗೆ 60 ಸಾವಿರದ ವರೆಗೆ ಸಾಲ ಸಿಗುತ್ತೆ!!

0
627

ದುಬಾರಿಯಾದ ಕಾಲದಲ್ಲಿ ಎಷ್ಟೇ ಹಣವಿದ್ದರು ಸಾಲದು ಕೆಲವೊಮ್ಮೆ ಆಪತ್ ಕಾಲದಲ್ಲಿ ಎಷ್ಟೇ ಚಟಪಟಿಸಿದರು ಒಂದು ರೂಪಾಯಿ ಕೂಡ ಸಾಲವಾಗಿ ಸಿಗುವುದಿಲ್ಲ. ಇಂತಹ ಸಮಯದಲ್ಲಿ ಸಾಲವನ್ನು ಸ್ನೇಹಿತರು, ಸಂಬಂಧಿಕರು, ಮತ್ತು ಆಪ್ತರಲ್ಲಿ ಎಷ್ಟೇ ಮುಗಿ ಬಿದ್ದು ಕೇಳಿದರು ಹಣ ಸಿಗುವುದು ಅನುಮಾನವೇ. ಇಂತಹ ಸಮಯ ಬರಿ ಬಡವರಿಗೆ ಬರುತ್ತೆ ಅಂತ ತಿಳಿಯಬೇಡಿ ಎಷ್ಟೋ ಕೋಟ್ಯಾಧಿಪತಿ ಇರುವ ಶ್ರೀಮಂತರಿಗೂ ಕೂಡ ಒಂದು ರುಪಾಯಿ ಸಾಲ ಸಿಗದ ಉದಾಹರಣೆಗಳು ತುಂಬಾ ಇವೆ. ಇನ್ನೂ ಬ್ಯಾಂಕ್- ನಲ್ಲಿ ಸಾಲಪಡೆಯಲು ಎಷ್ಟೊಂದು ಹರಸಾಹಸ ಮಾಡಬೇಕು ಅಂತ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಸಮಯದಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಬರಿ 5 ನಿಮಿಷದಲ್ಲಿ ಸಾಲ ಸಿಗುತ್ತೆ ಅಂದ್ರೆ ಇದು ಕೇಳಲು ಆಚ್ಚರ್ಯವೆನಿಸಿದರು ಸತ್ಯವಾಗಿದೆ.

Also read: ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

ಹೌದು ಭಾರತದ ಅತಿದೊಡ್ಡ ಡಿಜಿಟಲ್ ಹಣಕಾಸು ಸೇವೆಗಳ ವೇದಿಕೆಗಳಲ್ಲಿ ಒಂದಾದ ಮೊಬಿಕ್ವಿಕ್, ಇಂದು ‘ಬೂಸ್ಟ್’ ಎನ್ನುವ ತನ್ನ ಹೊಸ ಉತ್ಪನ್ನದ ಬಿಡುಗಡೆ ಮಾಡುವ ಬಗ್ಗೆ ಘೋಷಿಸಿದ್ದು, ಇದು ಮೊಬಿಕ್ವಿಕ್ ಬಳಕೆದಾರರಿಗೆ ತ್ವರಿತ ಸಾಲ ಅನುಮೋದನೆ ಮತ್ತು ವಿತರಣೆಯನ್ನು ಒದಗಿಸುತ್ತದೆ. ಇದು ವರ್ಗದಲ್ಲೇ ಪ್ರಥಮ ಸಾಲ ವಿತರಣಾ ಉತ್ಪನ್ನವಾಗಿದ್ದು, ರೂ 60,000 ದವರೆಗಿನ ಸಾಲವನ್ನು 90 ಸೆಕೆಂಡುಗಳ ಅವಧಿಯಲ್ಲಿ ಮಂಜೂರು ಮಾಡಿ ವಿತರಿಸುತ್ತದೆ. ಇದರ ಜೊತೆಗೆ ಅನೇಕ ಎನ್‌ಬಿಎಫ್‌ಸಿಗಳೊಂದಿಗೆ ಸಹಭಾಗಿತ್ವ ಹೊಂದಿದೆ.

ಹೇಗೆ ಸಿಗುತ್ತೆ ಸಾಲ?

Also read: ಟ್ರಾಫಿಕ್ ಪೋಲಿಸ್ -ರಿಗೆ ಚೆಳ್ಳೆಹಣ್ಣು ತಿನಿಸಿ ಪರಾರಿಯಾಗೋ ಪುಡಾರಿ ಬೈಕ್ ಸವಾರರಿಗೆ ಸೆಡ್ಡುಹೊಡೆಯಲು ಬಂದಿದೆ ಹೊಸ ಸ್ಮಾರ್ಟ್ App!!

ಇದಕ್ಕೆ ನೀವು ಮೊದಲು ಮೊಬಿಕ್ವಿಕ್ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನೀಡಲಾಗಿರುವ ಅಪ್ಲಿಕೇಶನ್​ ಮೂಲಕ ಅಲ್ಫಾವಧಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಅಪ್ಲಿಕೇಶನ್ ಮೂಲಕ ಕೆಲವು ಪ್ರಮುಖ ವಿವರಗಳನ್ನು ನೀಡಬೇಕಾಗುತ್ತದೆ. ‘ಬೂಸ್ಟ್’ ಯಾವುದೇ ಕಾಗದ ಪತ್ರ ಅಥವಾ ಪೂರಕಗಳಿಲ್ಲದೇ ಸಾಲ ನೀಡುತ್ತದೆ. ಮೊಬಿಕ್ವೆರ್ ಅಭಿವೃದ್ಧಿಪಡಿಸಿದ ‘ಮೊಬಿಸ್ಕೋರ್’ ಎಂಬ ಹೊಸ ರಿಸ್ಕ್ ಸ್ಕೋರಿಂಗ್ ಮಾದರಿಯ ಆಧಾರದ ಮೇಲೆ, 30 ಸೆಕೆಂಡುಗಳಲ್ಲಿ ಸಾಲ ಮಂಜೂರಾತಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಇವುಗಳನ್ನು ನಮೂದಿಸಿದ ಬಳಿಕ ಕೇವಲ 5 ನಿಮಿಷದಲ್ಲಿ ಸಾಲದ ಅನುಮೋದನೆಯನ್ನು ಪಡೆಯುವಿರಿ. ಅಲ್ಲದೆ ಈ ಹಣವು ನಿಮ್ಮ ಮೊಬಿಕ್ವಿಕ್ ವಾಲೆಟ್​ಗೆ ಬರುತ್ತದೆ. ಈ ಹಣವನ್ನು ಶಾಪಿಂಗ್ ಅಥವಾ ವೈದ್ಯಕೀಯ ವೆಚ್ಚಗಳಿಗಾಗಿ ಬಳಸಿಕೊಳ್ಳಬಹುದು.

ನಿಯಮಿತ ಸಾಲ ಸಿಗುತ್ತ?

Also read: WhatsApp ಹೊಸ ಆವೃತ್ತಿಯಲ್ಲಿ ಇರುವ ವೈಶಿಷ್ಟ್ಯಗಳು ಗೊತ್ತಾದ್ರೆ ಆಶ್ಚರ್ಯ ಆಗುತ್ತೆ…!

ಬಳಕೆದಾರರು 5000 ರುಪಾಯಿಯಿಂದ ಹಿಡಿದು 60,000 ರುಪಾಯಿ ವರೆಗೆ ಸಾಲದ ಸೌಲಭ್ಯಕ್ಕಾಗಿ ಇಲ್ಲಿ ಅಪ್ಲೈ ಮಾಡಬಹುದು. ಮೊಬಿಕ್ವಿಕ್‌ ನಲ್ಲಿ ಸಾಲ ಸೌಲಭ್ಯ ಪಡೆಯುವ ಗ್ರಾಹಕರು ತಮ್ಮ ಲೋನ್ ಅಮೌಂಟ್ ನ್ನು ನೇರವಾಗಿ ಅವರ ಬ್ಯಾಂಕ್ ಅಕೌಂಟಿಗೆ ಪಡೆಯಲಿದ್ದಾರೆ.

ಈ ಲೋನ್ ಪ್ರಕ್ರಿಯೆ 4 ಸರಳ ಹಂತಗಳನ್ನು ಒಳಗೊಂಡಿದೆ.

1. ಮೊಬಿಕ್ವಿಕ್‌ ಆಪ್ ನಲ್ಲಿ ಬೂಸ್ಟ್ ನ್ನು ಸೆಲೆಕ್ಟ್ ಮಾಡಿ.
2. ಇನ್ಸ್ಟೆಂಟ್ ಲೋನ್ ಗಾಗಿ ಬೂಸ್ಟ್ ನ್ನು ಆಕ್ಟಿವೇಟ್ ಮಾಡಿ.
3. PAN ನ್ನು ಇನ್ಸರ್ಟ್ ಮಾಡಿ ಮತ್ತು ಲೋನ್ ಆಫರ್ ತನೋಡಲು ಇತರೆ ಪ್ರಮುಖ ವಿವರಗಳನ್ನು ನೀಡಿ.
4. ಲೋನ್ ಆಫರ್ ನ್ನು ಅಸೆಪ್ಟ್ ಮಾಡಿ ಮತ್ತು ಇನ್ಸ್ಟೆಂಟ್ ಲೋನ್ ನ್ನು ಪಡೆಯಿರಿ

ಮರುಪಾವತಿ ಹೇಗೆ?

Also read: ತನಗೆ ಗೊತ್ತಿಲದೇ whatsapp ಗ್ರೂಪ್-ನ ಅಡ್ಮಿನ್ ಆದ!! ವಿವಾದಾತ್ಮಕ ಸಂದೇಶದಿಂದ ಐದು ತಿಂಗಳಿನಿಂದ ಜೈಲಿನಲ್ಲಿರುವ ಈತನ ಕಥೆ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ!!

ಮೊಬಿಕ್ವಿಕ್ ಆ್ಯಪಿನಲ್ಲಿ ಸಾಲದ ಮೊತ್ತವನ್ನು 6 ಮತ್ತು 9 ತಿಂಗಳುಗಳ ಸುಲಭ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಅವರು ಮೊಬಿಕ್ವಿಕ್ ಆ್ಯಪಿನಲ್ಲಿ ಸಾಲ ಮರುಪಾವತಿಸಬಹುದು ಅಥವಾ ಬ್ಯಾಂಕ್ ಖಾತೆಯಿಂದ ಮಾಸಿಕ ಕಂತು ಸ್ವಯಂ ಡೆಬಿಟ್ ಆಗುವಂತೆ ಮೊಬಿಕ್ವಿಕ್ ಪಾಲುದಾರರನ್ನು ಸಕ್ರಿಯಗೊಳಿಸಬಹುದು. ಮೊಬಿಕ್ವಿಕ್ ಬಳಕೆದಾರರು ಸಾಲ ಸೌಲಭ್ಯ ಪಡೆಯಲು ಪ್ಯಾನ್ ಕಾರ್ಡ್ ಮತ್ತು ಇತರ ಕೆವೈಸಿ ವಿವರಗಳೊಂದಿಗೆ ತಮ್ಮ ಕೆವೈಸಿ ಅಪ್ಡೇಟ್ ಮಾಡಬೇಕು.