ಮೊಬೈಲ್ ಮಿತವಾಗಿ ಬಳಸಿರಿ..!

0
1071

ಮಕ್ಕಳು ಸದಾ ಮೊಬೈಲ್ ಸೆಲ್ ಗೆ ಅಂಟಿಕೊಂಡಿರುವುದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು ಕೈಯಲ್ಲಿ ಮೊಬೈಲ್ ಇದ್ದರೆ ತುರ್ತು ಸಂದರ್ಭದಲ್ಲಿ ಪಾಲಕರು. ಸ್ನೇಹಿತರನ್ನು ಸಂರ್ಕಿಸಲು ಸಾಧ್ಯವಾಗುತ್ತದೆ ಎಂಬೂದೆನೋ ಸತ್ಯ. ಆದರೆ ಯಾವಾಗಲೂ ಫೋನ್ ನಲ್ಲಿ ಮೆಸೇಜ್ ಮಾಡುತ್ತಾ, ಗೇಮ್ಸ್ ಆಡುತ್ತ ಕುಳಿತರೆ ಅದು ವಿದ್ಯಾರ್ಥಿಗಳ ಓದಿನ ಮೇಲೆ ಪರಿಣಾಮ ಬೀರುತ್ತದೆ, ಜತೆಗೆ ಮೊಬೈಲ್ ಫೋನ್ ಜಾಸ್ತಿ ಬಳಕೆ ಮಾಡುವುದರಿಂದ ಜ್ಞಾಪಕ ಜಾಸ್ತಿ ಬಳಕೆ ಮಾಡುವುದರಿಂದ ಜ್ಞಾಪಕ ಶಕ್ತಿ ನಷ್ಟ, ಏಕಾಗ್ರತೆ ಕುಸಿತ, ಅಜೀರ್ಣ, ನಿದ್ರಾಹೀನತೆ, ತಲೆನೋವು, ತಲೆಸುತ್ತು, ಹೃದಯದ ಬಡಿತದಲ್ಲಿ ಏರುಪೇರು ಸೇರಿದಂತೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಉಂಟಾಗುತ್ತದೆ. ಈಗಂತೂ ಸ್ಮಾರ್ಟ್ ಫೋನ್ ಗಳಲ್ಲಿ ಎಲ್ಲ ಬಗೆಯ ಚಾಟ್ ಅಪ್ಲೀಕೇಶನ್, ವಿಡಿಯೋಗಳು ಲಭ್ಯವಾಗಿರುವುದರಿಂದ ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯುವಂತಾಗಿದೆ. ಆದ್ದರಿಂದ ಮೊಬೈಲ್ ಗೀಳಿನಿಂದ ಹೊರಬನ್ನಿ ಸ್ಮಾರ್ಟ್ ಫೋನ್ ಬಳಕೆಗೆ ನೀವೇ ಮಿತಿ ಹಾಕಿಕೊಳ್ಳಿ, ಅದನ್ನು ಸದುಪಯೋಗಪಡಿಸಿಕೊಳ್ಳಿ.

ಒಂದಿಷ್ಟು ಸಲಹೆ:

*ಅತಿಯಾದ ಮೊಬೈಲ್ ಬಳಕೆ ಬೇಡ

*ಓದುವಾಗ, ಹೋಮ್ ವರ್ಕ್ ಮಾಡುವಾಗ ಮೊಬೈಲ್ ದೂರದಲ್ಲಿರಲಿ.

*ದಿನಾಲೂ ಒಂದು ಗಂಟೆ ಮಾತ್ರ ಮೊಬೈಲ್ ಬಳಸುವ ರೂಢಿ ಬೆಳೆಸಿಕೊಳ್ಳಿ. ಆ ವೇಳೆಯಲ್ಲಿ ಮಾತ್ರ ಗೇಮ್ಸ್ ಆಡಿ, ಸ್ನೇಹಿತರೋದಿಗೆ ಚಾಟ್ ಮಾಡಿ.

*ಮೊಬೈಲ್ ಇದೆ ಎಂದು ಸಿಕ್ಕ ಸಿಕ್ಕ ನಂಬರ್ ಗೆ ಮೆಸೆಜ್ ಮಾಡುವುದು, ಮಿಸ್ ಕಾಲ್ ಕೊಟ್ಟು ಪರಿಚಯ ಮಾಡಿಕೊಳ್ಳುವುದು ಬೇಡ.

ಮೊಬೈಲ್ ಫೋನ್ ಮಾರಕವಾಗಿದೆ ಎಂದು ಹೇಳುವುದಾದರೆ

* ಇಂದು ಮೊಬೈಲ್ ಫೋನ್ .ಬಳಸುವುದು ಒಂದು ರೀತಿಯಲ್ಲಿ ರೋಗ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಏಕೆಂದರೆ ಒಬ್ಬ ವ್ಯಕ್ತಿ

* ಇಂದು ಒಂದು ಕ್ಷಣ ಕೊಡ ಮೊಬೈಲ್ ಫೋನ್ ಬಿಟ್ಟು ಇರಲಾರದ ಸ್ಥಿತಿಯಲ್ಲಿ ಇದ್ದಾನೆ.

* ಉದಾಹರಣೆಗೆ ಹೇಳುವುದಾದರೆ ಯಾವುದೇ ಒಬ್ಬ ದುಷ್ಚಟ ಇರುವ ವ್ಯಕ್ತಿಯನ್ನು ಇಂದು ನಾವು ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಬದಲಾಯಿಸಬಹುದು ಆದರೆ ಮೊಬೈಲ್ ಫೋನ್ ಎಂಬ ಮಾಯಾಜಾಲದಲ್ಲಿ ಬಿದ್ದವರನ್ನ ಗುಣಪಡಿಸುವದು ಕಷ್ಟ ಸಾಧ್ಯ.

*ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ಮೊಬೈಲ್ ಫೋನ್ ಒಂದು ರೀತಿಯಲ್ಲಿ ಈಗಿನ ಯುವಜನತೆಯನ್ನು ಹಾದಿ ತಪ್ಪಿಸುವ ರೀತಿಯಲ್ಲಿ ಬಳಕೆ ಆಗುತ್ತಿದೆ ಎಂದು ಅನಿಸುತ್ತದೆ. ಕೆಲವರು ಹೇಳಬಹುದು ನಾವು ಬಳಸುವ ರೀತಿಯ ಮೇಲೆ ಅದರ ಪರಿಣಾಮ ಬೀರಲಿದೆ ಅಂತ ಹೌದು ನಿಜ, ಆದರೆ ನೆನಪಿರಲಿ ನಾವು ಹರಿತವಾದ ಚಾಕುವಿನಿಂದ ತರಕಾರಿಗಳನ್ನು ಕತ್ತರಿಸಬೇಕು, ಹಣ್ಣುಗಳನ್ನು ಕತ್ತರಿಸಬೇಕು ಹೊರತು ಬೇರೆಯವರ ಕತ್ತನ್ನಾಗಲೀ ಅಥವಾ ಸ್ವತಃ ನಮ್ಮ ಕತ್ತನ್ನಾಗಲೀ ಕತ್ತರಿಸಲು ಬಳಸುವುದು ಮುರ್ಖತನದ ಪರಮಾವಧಿಯೆ ಹೊರತು ಬೇರೇನೂ ಅಲ್ಲ. ನೀವು ಸಭೆ ಸಮಾರಂಭಗಳಲ್ಲಿ ನೋಡಿರಬಹುದು ಹಿಂದೆ ಹಿರಿಯರು ತಮ್ಮ ಸುತ್ತಲಿನ ಜನರ ಜೊತೆ ಬೆರೆತು ತಮ್ಮ ಸುಖ ದುಃಖ ಹಂಚಿಕೋಳ್ತಾ ಇದ್ದಿದ್ದನ್ನ. ಆದರೆ ಇಂದು ನಾವು ನೀವೆಲ್ಲ ನೀಡಿರುವ ಹಾಗೆ ಯಾರೂ ಹಿಂದೆ ಹಿರಿಯರು ಸಮಾರಂಭದಲ್ಲಿ ಮಾತನಾಡುತ್ತಾ ಇದ್ದಷ್ಟು ಈಗ ಯಾರೂ ಮಾತನಾಡುತ್ತಾ ಇಲ್ಲ ಇದಕ್ಕೆ ಕಾರಣ ಮೊಬೈಲ್ ಫೋನ್ 📱. ಇಂದಿನ ದಿನಗಳಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಯಾರೊಬ್ಬರೂ ಜಗಳ ಬಿಡಿಸಲು ಬರುವುದಿಲ್ಲ ಬದಲಾಗಿ ತಮ್ಮಲ್ಲಿರುವ ಮೊಬೈಲ್ ಫೋನ್ನಿಂದ ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗುತ್ತಾರೆ. ಅಂದರೆ ಮೊಬೈಲ್ ಫೋನ್ 📱 ಈ ಒಂದು ವಸ್ತುವಿನಿಂದ ಇಂದು ಮಾನವೀಯ ಮೌಲ್ಯಗಳನ್ನು ಜನ ಕಳೆದುಕೊಳ್ಳುತ್ತಿರುವ ಸಂಗತಿ ವಿಷಾದನೀಯ. ಇನ್ನೊಂದು ವಿಷಾದನೀಯ ಸಂಗತಿ ಎಂದರೆ ಮೊಬೈಲ್ ಫೋನ್

* ಕೇವಲ ಮಾನವೀಯ ಮೌಲ್ಯಗಳನ್ನು ಅಷ್ಟೇ ಅಲ್ಲ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

* ಈ ಮೊಬೈಲ್ ಫೋನ್ *ಎಂಬ ವಸ್ತು ಬರುವುದಕ್ಕೆ ಮೊದಲು ಜನ ಸರಿಯಾಗಿ ಕೆಲಸ ಮಾಡುತ್ತಿದ್ದರು ಹಾಗೆಯೇ ನೆಮ್ಮದಿಯಿಂದ ಬದುಕುತ್ತಿದ್ದರು, ಅಂದರೆ ಮೊಬೈಲ್ ಫೋನ್ ಮನುಷ್ಯನ ನೆಮ್ಮದಿಯನ್ನು ಕೂಡ ಕಸಿದುಕೊಂಡಿದೆ ಅಂದರೆ ತಪ್ಪಾಗಲಾರದು. ಏಕೆಂದರೆ ಮೊಬೈಲ್ ಫೋನ್ ಬಂದಾಗಿನಿಂದ ಅದರಲ್ಲೂ ಈಗಿನ ಸ್ಮಾರ್ಟ್ ಫೋನ್ಗಳ ಹಾವಳಿಯಿಂದ ಜನ ಸರಿಯಾಗಿ ನಿದ್ರೆ ಮಾಡುತ್ತಿಲ್ಲ. ಮನುಷ್ಯ ಸರಿಯಾಗಿ ನಿದ್ರೆ ಮಾಡದೇ ಇರುವುದರಿಂದ ಅನೇಕ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾನೆ.