ಯುವತಿಯರು ಮದುವೆಯ ಮುನ್ನ ಮೊಬೈಲ್ ಬಳಕೆ ಮಾಡುವಂತಿಲ್ಲ; ಒಂದು ವೇಳೆ ಬಳಸಿದರೆ ಪೋಷಕರಿಗೆ ಬಿಳಲಿದೆ ಭಾರೀ ಮೊತ್ತದ ದಂಡ!!

0
5747

ಇತ್ತೀಚಿಗೆ ಯುವತಿಯರು ಮೊಬೈಲ್ ಗಿಳಿಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಓದಿನಲ್ಲಿ ಹಿಂದೆ ಉಳಿದರೆ ಇನ್ನೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿ ಪ್ರೀತಿ ಪ್ರೇಮದಲ್ಲಿ ಮುಳುಗಿ ಅನ್ಯ ಜಾತಿಯ ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಇದು ವಿಫಲವಾದರೆ ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವಿವಾಹಿತ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ. ಮೊಬೈಲ್ ಇಲ್ಲದ ಸಮಯದಲ್ಲಿ ಮಹಿಳೆಯರು ಒಳ್ಳೆಯ ದಾರಿಯಲ್ಲೇ ಇದ್ದರು ಆದರೆ ಮೊಬೈಲ್ ಬಂದ ನಂತರ ಇಷ್ಟೆಲ್ಲಾ ತಾಪತ್ರೆಗೆ ಕಾರಣರಾಗಿದ್ದಾರೆ ಎಂದು ಸಮುದಾಯಯೊಂದು ವಿವಾಹಕ್ಕಿಂತ ಮೊದಲು ಮಹಿಳೆಯರು ಮೊಬೈಲ್ ಬಳಕೆ ಮಾಡಿದರೆ ಪಾಲಕರಿಗೆ ದಂಡ ವಿಧಿಸಲು ಸಜ್ಜಾಗಿದೆ.

Also read: ಜೈಲೂಟ, ಸಹ ಕೈದಿಗಳ ಸ್ನೇಹಕ್ಕೋಸ್ಕರ, ಬಿಡುಗಡೆಯಾದರು ಪುನಃ ಅಪರಾಧ ಮಾಡಿ ಜೈಲು ಸೇರಿತ್ತಿರುವ ವಿಚಿತ್ರ ವ್ಯಕ್ತಿಗೆ ಜೈಲೇ ಸ್ವರ್ಗವಂತೆ!!

ಏನಿದು ಮೊಬೈಲ್ ನಿಷೇಧ?

ಹೌದು ಯುವಕ-ಯುವತಿಯರಿಗೆ ಮೊಬೈಲ್ ಬಂದಾಗಿಂದ ಹೆಚ್ಹು ಹಾಳಾಗುತ್ತಿದ್ದು, ಇದಕ್ಕೆ ಪರಿಹಾರವನ್ನು ಮೊಬೈಲ್ ಕೊಡಿಸುವ ತಂದೆ-ತಾಯಿಗಳೇ ಸರಿಮಾಡಬೇಕು ಅದಕ್ಕಾಗಿ ಅವರಿಗೆ ದಂಡ ವಿಧಿಸಬೇಕು ಎಂದು. ಗುಜರಾತ್‍ನ ಬನಸ್ಕಾಂತ ಜಿಲ್ಲೆಯ ದಂತಿವಾಡ ತಾಲೂಕಿನ ಠಾಕೂರ್ ಸಮುದಾಯದ ಮುಖಂಡರು ಜುಲೈ 14ರಂದು ಈ ನಿಯಮವನ್ನು ಸರ್ವಾನುಮತದಿಂದ ಅಂಗೀಕಾರಕ್ಕೆ ತಂದಿದ್ದಾರೆ. ಈ ಕಾನೂನು ಜಿಲ್ಲೆಯ 12 ಗ್ರಾಮಗಳಲ್ಲಿ ಬರಲಿದೆ ಎಂದು ಸಮುದಾಯದ ಮುಖಂಡರು ಹಾಗೂ ಸ್ಥಳೀಯ ಶಾಸಕರು ಹೇಳಿದ್ದಾರೆ. ಇದೆ ನಿಯಮ ದೇಶ್ಯಾದಂತ ಜಾರಿಗೆ ಬಂದರೆ ಮಹಿಳೆಯರ ಮೇಲೆ ನಡೆಯುತ್ತಿರುವ ಹಲ್ಲೆ, ಅತ್ಯಾಚಾರ, ಪ್ರೇಮವಿವಾಹಗಳು ಹಿಡಿತಕ್ಕೆ ತರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅದರಂತೆ ತಮ್ಮ ಸಮುದಾಯದಲ್ಲಿ ಜಾರಿಗೆ ತಂದ ಕಾನೂನಿನ ಪ್ರಕಾರ. ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಮೊಬೈಲ್ ಸಮೇತ ಸಿಕ್ಕಿಬಿದ್ದರೆ ಪೋಷಕರಿಗೆ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಯುವತಿಯರು ಬೇರೆ ಜಾತಿಯ ಯುವಕರನ್ನು ಮದುವೆಯಾದರೇ ಭಾರೀ ಮೊತ್ತದ ದಂಡ ವಿಧಿಸುವ ತೀರ್ಮಾನವನ್ನು ಸಭೆ ತೆಗೆದುಕೊಂಡಿದೆ. ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ, 1.5 ಲಕ್ಷ ರೂ. ರಿಂದ 2 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶ ಜಾರಿಗೆ ತರಲಾಗಿದೆ.

Also read: ಕಾಗೆ’ಗಳಿಗೂ ಬಂತು ಡಿಮ್ಯಾಂಡ್; ಉತ್ತರಕ್ರಿಯೆ ಕಾಗೆ ನೀಡುವ ಬ್ಯುಸಿನೆಸ್-ಗೆ ಭಾರಿ ಬೇಡಿಕೆ..

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕಿ ಗನಿಬೇಬ್ ಠಾಕೂರ್ ಅವರು, ಯುವತಿಯರಿಗೆ ಮೊಬೈಲ್ ಬಳಸಬಾರದು ಎಂದು ಆದೇಶ ನೀಡಿದ್ದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಯುವತಿಯರು ತಂತ್ರಜ್ಞಾನ ದೂರವಿರಬೇಕು ಹಾಗೂ ಅಧ್ಯಯನಕ್ಕೆ ಹೆಚ್ಚಿನ ಸಮಯ ನೀಡಬೇಕು ಎನ್ನುವ ಉದ್ದೇಶದಿಂದ ಮೊಬೈಲ್ ನಿಷೇಧ ಮಾಡಿದ್ದಾರೆ ಎಂದು ಹೇಳಿದ್ದು, ಈಗೀಗ ಕಾಲೇಜ್ ಯುವತಿಯರು ಸೇರಿದಂತೆ 80 ರಷ್ಟು ಮಹಿಳೆಯರು ಮೊಬೈಲ್ ಬಳಕೆ ಮಾಡುತ್ತಿದ್ದು, ಫೇಸ್ಬುಕ್ whatsapp, tiktok, instagram ಸೇರಿದಂತೆ ಹಲವು app ಬಳಸಿ ಗುರುತು ಪರಿಚಯವಿಲ್ಲದವರ ಜೊತೆಗೆ ಪ್ರೀತಿ ಪ್ರೇಮಕ್ಕೆ ಬಲಿಯಾಗಿ ಜೀವನವನ್ನೇ ನರಕ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ನಡೆಯುತ್ತಿರುವ ವಂಚನೆ ಬ್ಲಾಕ್ಮೇಲ್ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇಂತಹ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಮೊಬೈಲ್ ನಿಷೇಧಿಸುವುದು ಉತ್ತಮವಾಗಿದೆ. ಎಂದು ಹಲವರು ಈ ನಿಯಮಕ್ಕೆ ಬೆಂಬಲ ನೀಡಿದ್ದಾರೆ.