ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್; ಡಿ.1ರಿಂದಲೇ ಭಾರಿ ದುಬಾರಿಯಾಗಲಿದೆ ಕರೆ, ಡೇಟಾ ದರಗಳು.!

0
242

ಜಿಯೋ ಬರುವ ಮೊದಲು ಅತೀ ದುಬಾರಿಯಲ್ಲಿದ್ದ ಟೆಲಿಕಾಂ ಕಂಪನಿಗಳು ನೆಲಕಚ್ಚಿ ಹೋದವು, ನಂತರ ಜಿಯೋ ಸಮವಾಗಿ ಹಲವು ಆಫರ್ ಘೋಷಣೆ ಮಾಡಿದ ವೊಡಾಫೋನ್ ಐಡಿಯಾ, ಏರ್ಟೆಲ್ ಕಂಪನಿ ಭಾರಿ ನಷ್ಟದಲ್ಲಿವೂ ಈ ಕಾರಣಕ್ಕಾಗಿ ವೊಡಾಫೋನ್ ಐಡಿಯಾ, ಏರ್ಟೆಲ್ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿವೆ. ಅದರಂತೆ ಡಿಸೆಂಬರ್ 1 ರಿಂದ ಐಡಿಯಾ ವೊಡಾಫೋನ್ ಕರೆ​ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.

Also read: ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ; ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ, ನಿಮ್ಮ ಮೊಬೈಲ್ -ನಲ್ಲಿ ಈ ವೈರಸ್ ಇದಿಯಾ ಚೆಕ್ ಮಾಡಿ..

ಜಿಯೋ 6 ಪೈಸೆ ದರ ನಿಗದಿಯಿಂದ ಮೇಲೆದ್ದ ದರ?

ಹೌದು ಜನಪ್ರಿಯ ಜಿಯೋ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಜಿಯೋದಿಂದ ಇತರೆ ನೆಟವರ್ಕ್‌ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ನಿಗದಿ ಮಾಡಿ ಸುದ್ದಿಯಾಗಿತ್ತು. ಆ ಬಳಿಕ ಬಹುತೇಕ ಗ್ರಾಹಕರು ವೊಡಾಫೋನ ಮತ್ತು ಏರ್‌ಟೆಲ್‌ ಟೆಲಿಕಾಂಗಳೆ ಬೆಸ್ಟ್‌ ಅನ್ನುವ ನಿಲವನ್ನು ಹೊಂದಿದರು. ಆದರೆ ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಈಗ ಗ್ರಾಹಕರಿಗೆ ಭಾರಿ ಶಾಕ್‌ ನೀಡಿದ್ದಾರೆ.

ಅದರಂತೆ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಟೆಲಿಕಾಂ ಸಂಸ್ಥೆಗಳು ದ್ವೀತಿಯ ಮತ್ತು ತೃತೀಯ ತ್ರೈಮಾಸಿಕ ಅವಧಿಯಲ್ಲಿ ಭಾರಿ ನಷ್ಟ ಅನುಭವಿಸಿದ ಹಿನ್ನಲೆಯಲ್ಲಿ ಕರೆಗಳ ದರಗಳಲ್ಲಿ ಹೆಚ್ಚಳ ಮಾಡುವ ನಿರ್ಧಾರ ಮಾಡಿವೆ. ಈ ಎರಡು ಟೆಲಿಕಾಂ ಸಂಸ್ಥೆಗಳು ಇದೇ ಡಿಸೆಂಬರ್ 1 ರಂದು ತಮ್ಮ ಪ್ರೀಪೇಡ್‌ ಪ್ಲ್ಯಾನ್‌ಗಳ ದರದಲ್ಲಿ ಹೆಚ್ಚಳ ಮಾಡುವ ನಿರ್ಣಯ ಕೈಗೊಂಡಿವೆ ಎನ್ನಲಾಗಿದೆ. ಆದರೆ ಎಷ್ಟು ಹೆಚ್ಚಿಸಲಿವೆ ಎನ್ನುವ ಬಗ್ಗೆ ತಿಳಿಸಿಲ್ಲ. ತಜ್ಞರ ಪ್ರಕಾರ ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದೆ.

Also read: ಇನ್ಮುಂದೆ ಮೊಬೈಲ್ ಕಳೆದುಕೊಂಡರೆ ಚಿಂತೆ ಬೇಡ; IMEI ಸಂಖ್ಯೆಯನ್ನು ಬಳಸಿಕೊಂಡು ಕಳೆದುಕೊಂಡ ಮೊಬೈಲ್ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಹುದು, ಹೇಗೆ ಅಂತ ಇಲ್ಲಿದೆ ನೋಡಿ..

ಭಾರಿ ನಷ್ಟ ತೋರಿಸಿದ ಕಂಪನಿಗಳು

ವೊಡಾಫೋನ್ ಐಡಿಯಾ ಸೆಪ್ಟೆಂಬರಿಗೆ ತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳಷ್ಟು ನಷ್ಟ ದಾಖಲಿಸಿದ್ದರೆ, ಭಾರ್ತಿ ಏರ್ಟೆಲ್ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಟೆಲಿಕಾಮ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಿದೆ. ತಮ್ಮ ಆದಾಯದ ಬಹಭಾಗವನ್ನು ಪ್ರತ್ಯೇಕವಾಗಿ ತೆಗೆದಿರಿಸಿದ ಪರಿಣಾಮ ಟೆಲಿಕಾಂ ಕಂಪನಿಗಳ ನಷ್ಟ ಭಾರೀ ಏರಿಕೆಯಾಗಿದೆ. ಶುಲ್ಕ ಮತ್ತು ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ತೀರ್ಪು ಪರಾಮರ್ಶೆಗೆ ಅರ್ಜಿ ಸಲ್ಲಿಸಲು ವೊಡಾಫೋನ್ ಸಿದ್ಧತೆ ನಡೆಸುತ್ತಿದೆ.

ಏನಿದು ಎಜಿಆರ್?

ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

Also read: ಯಾವಾಗ್ಲೂ ಮೊಬೈಲ್ ಲಾಕ್, ಆನ್ ಮಾಡ್ತಿರ್ತೀರಾ..? ಹಾಗಾದ್ರೆ ಇಲ್ಲಿದೆ ನೋಡಿ ದುಡ್ ಮಾಡೋ ಆ್ಯಪ್..

ಮುಂದೇನ್ ಕತೆ?

ಗ್ರಾಹಕರಿಗೆ ಹೊರೆ ಆಗಬಾರದೆಂದು ಜಿಯೋ ಆಲ್‌-ಇನ್‌-ಒನ್ ಪ್ರೀಪೇಡ್‌ ಪ್ಲ್ಯಾನ್‌ ಪರಿಚಯಿಸಿದೆ ಅಲ್ಲವೇ ಅದೇ ರೀತಿ ಏರ್‌ಟೆಲ್ ಮತ್ತು ವೊಡಾಫೋನ್‌ ಸಂಸ್ಥೆಗಳು ಸಹ ಹೊಸ ಪ್ಲ್ಯಾನ್‌ಗಳಲ್ಲಿ ಪೂರಕವಾಗಿ ಪರ್ಯಾಯ ಪ್ಲ್ಯಾನ್‌ ಆಯ್ಕೆ ನೀಡುವ ಸಾಧ್ಯತೆಗಳು ಇವೆ. ಒಟ್ಟಾರೇ ಹೆಚ್ಚಿನ ಚಂದಾದಾರರನ್ನು ಒಳಗೊಂಡಿರುವ ಈ ಟೆಲಿಕಾಂ ಸಂಸ್ಥೆಗಳಿಗೆ ದರ ಏರಿಕೆಯ ನಿರ್ಧಾರ ಗ್ರಾಹಕರಲ್ಲಿ ಗೊಂದಲ ಹುಟ್ಟಿಸಿದೆ.