ಇನ್ಮುಂದೆ BMTC ಬಸ್-ಗಳಲ್ಲಿ ಮೊಬೈಲ್ ಬಳಸುವಂತಿಲ್ಲ; ಏನಿದು ಹೊಸ ನಿಯಮ ಇಲ್ಲಿದೆ ನೋಡಿ ಮಾಹಿತಿ.!

0
459

ಬಹುದಿನಗಳ ಬೇಡಿಕೆಯಾಗಿದ್ದ ಮೊಬೈಲ್ ಕಿರೀಕಿರಿ ಗೆ ಸಂಬಂಧಪಟ್ಟಂತೆ ಬೆಂಗಳೂರಿನ ಬಿಎಂಟಿಸಿ ಬಸ್-ಗಳಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಗಳ ಲೌಡ್ ಸ್ಪೀಕರ್ ಎಫ್‌ಎಂ ಕೇಳುವುದು, ವಿಡಿಯೋ ನೋಡುವುದು, ಸಿನಿಮಾ ನೋಡುವುದು, ಹಾಡು ಕೇಳುವುದು ನಿರ್ಬಂಧಿಸಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಆಧರಿಸಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಂತೆ ನಿಯಮಕ್ಕೆ ತಪ್ಪಿದವರಿಗೆ ದಂಡದ ಜೊತೆಗೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Also read: ದಸರಾ ಪ್ರಯಕ್ತ ಮೈಸೂರು ಸೇರಿದಂತೆ ಹಲವೆಡೆ ಟ್ರಿಪ್ ಹೋಗಲು KSRTC ಯಿಂದ ಭರ್ಜರಿ ಪ್ಯಾಕೇಜ್.!

ಬಿಎಂಟಿಸಿ ಬಸ್-ಗಳಲ್ಲಿ ಮೊಬೈಲ್ ನಿಷೇಧ?

ಹೌದು ಸಾಮಾನ್ಯವಾಗಿ ಈಗ ಎಲ್ಲ ಪ್ರಯಾಣಿಕರಲ್ಲೂ ಮೊಬೈಲ್ ಇದ್ದೆ ಇದೆ. ಅದರಂತೆ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್-ಗಳಲ್ಲಿ ಸಿನಿಮಾ ನೋಡುವುದು, ಹಾಡು ಕೇಳುವುದು ಎಫ್‌ಎಂ ಕೇಳುವುದು, ವಿಡಿಯೋ ನೋಡುವುದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ. ಎಂದು ಬಿಎಂಟಿಸಿ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಮೋಟಾರು ವಾಹನ ನಿಯಮ 1986ರ ಉಲ್ಲಂಘನೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಬಸ್‌ಗಳಲ್ಲಿ ಪ್ರಯಾಣಿಕರು ಏನು ಮಾಡಬಾರದು ಎಂದು ಸುತ್ತೋಲೆಯಲ್ಲಿ ವಿವರಣೆಗಳನ್ನು ನೀಡಲಾಗಿದೆ.

Also read: ಇನ್ಮುಂದೆ ಹೆಲ್ಮೆಟ್ ಹಾಕಿಕೊಂಡರು ತೊಂದರೆಯೇ ಇಲ್ಲ; ಹೆಲ್ಮೆಟ್​, ಜಾಕೆಟ್​ಗೂ ಬಂತು ಎಸಿ, ಏನಿದು Ac ಹೆಲ್ಮಟ್ ವಿಶೇಷತೆ??

ಬಿಎಂಟಿಸಿ ಬಸ್​​ಗಲ್ಲಿ ಪ್ರಯಾಣಿಕರು ಮೊಬೈಲ್​​​ ನಲ್ಲಿ ಲೌಡ್​​ ಸ್ಪೀಕರ್​ ಹಾಕಿಕೊಂಡು ಹಾಡು ಕೇಳುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಸಾರಿಗೆ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಬಿಎಂಟಿಸಿ ಬಸ್​​ಗಳಲ್ಲಿ ಮೊಬೈಲ್ ಲೌಡ್ ಸ್ಪೀಕರ್ ಬಳಕೆಯನ್ನು ನಿರ್ಬಂಧಿಸಿ ಸಂಸ್ಥೆಯು ಆದೇಶ ಹೊರಡಿಸಿದೆ. ಅದರಂತೆ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣವನ್ನು ಮಾಡಬೇಕು ಎನ್ನುವುದು ಸಾರಿಗೆ ಸಂಸ್ಥೆ ಗುರಿಯಾಗಿದ್ದು, ಮೊಬೈಲ್ ನೋಡುತಲೇ ಬಸ್ ಹತ್ತುವುದು, ಇಳಿಯುವುದರಿಂದ ಅಪಾಯಗಳು ಕೂಡ ಹೆಚ್ಚಾಗುತ್ತಿದ್ದು ಇದರ ಬಗ್ಗೆಯೂ ನಿರ್ವಾಹಕ ಗಮನ ಹರಿಸಬೇಕು ಎಂದು ತಿಳಿಸಿದೆ.

ಬಿಎಂಟಿಸಿ ಕೈಗೊಂಡಿರುವ ಕ್ರಮಗಳು

Also read: ಕಷ್ಟದಲ್ಲಿರುವವರಿಗೆ ನಮ್ಮ ಕೈಯಲ್ಲಿ ಏನೂ ಆಗೋಲ್ಲ ಅನ್ನೋರು ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿ ಸಹಾಯ ಮಾಡಿದ ಈ 14 ವರ್ಷದ ಬಾಲಕನನ್ನು ನೋಡಿ ಕಲಿಯಬೇಕು!!

1. ಕಡ್ಡಾಯವಾಗಿ ನಿಷೇಧ
ಬಿಎಂಟಿಸಿ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ತಮ್ಮ ಮೊಬೈಲ್‌ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆ ಹೇಳಿದೆ.

2. ಪ್ರಯಾಣಿಕರಿಗೆ ತಿಳುವಳಿಕೆ
ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಹಾಕದಂತೆ ಕರ್ತವ್ಯ ನಿರತ ಚಾಲನಾ ಸಿಬ್ಬಂದಿಯು ಜನರಿಗೆ ತಿಳಿವಳಿಕೆಯನ್ನು ನೀಡಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

3. ಅಗತ್ಯ ಕ್ರಮಗಳನ್ನು ಕೈಗೊಳ್ಳಿ
ಮೊಬೈಲ್‌ ಲೌಡ್ ಸ್ಪೀಕರ್‌ಗಳಲ್ಲಿ ಬಸ್‌ನಲ್ಲಿ ಹಾಡುಗಳನ್ನು ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುವುದನ್ನು ತಡೆಯಲು ಜನರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

4. ವಾಹನಗಳಲ್ಲಿ ಸ್ಟಿಕ್ಕರ್ ಆಳವಡಿಕೆ
ಬಸ್ಸುಗಳಲ್ಲಿ ಪ್ರಯಾಣಿಸುವ ಜನರಿಗೆ ಈ ಕುರಿತು ಮಾಹಿತಿ ನೀಡಲು ವಾಹನಗಳಲ್ಲಿ ಸ್ಟಿಕ್ಕರ್ ಅಂಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ತಾಂತ್ರಿಕ ಅಭಿಯಂತರರು ಹಾಗೂ ಕಾರ್ಯ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.