ನಿಮ್ಮ ಮೊಬೈಲ್ ನಲ್ಲೆ ಆಧಾರ್ ಲಿಂಕ್ ಮಾಡುವ ಸಿಂಪಲ್ ವಿಧಾನ ಇಲ್ಲಿದೆ ನೋಡಿ..!

0
1684

ಆಧಾರ್ ಜತೆ ಸಿಮ್ ಕಾರ್ಡ್‍ಗಳನ್ನು ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಲಿಂಕ್ ಆಗದೇ ಇದ್ದಲ್ಲಿ ಆ ಸಿಮ್ ಕಾರ್ಡ್ ಗಳನ್ನು 2018ರ ಫೆಬ್ರವರಿ 2 ರ ನಂತರ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಲೋಕನೀತಿ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆದ ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಅಪರಾಧಿಗಳು, ಭಯೋತ್ಪಾದಕರು ಸಿಮ್ ಕಾರ್ಡ್‍ಗಳನ್ನು ಬಳಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಎಲ್ಲ ಟೆಲಿಕಾಂ ಆಪರೇಟರ್ ಗಳು ಗ್ರಾಹಕರಿಗೆ ಮೊಬೈಲ್, ಇಮೇಲ್ ಅಥವಾ ಜಾಹೀರಾತುಗಳ ಮೂಲಕ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದೆ.

ಹಾಗಾಗಿ ಈಗ ಟೆಲಿಕಾಂ ಕಂಪನಿಗಳು ಆಧಾರ್ ಲಿಂಕ್ ಮಾಡಿಸಿಕೊಳ್ಳುವಂತೆ ಎಲ್ಲಾ ಗ್ರಾಹಕರಿಗೆ ಮೆಸೇಜ್, ಮೇಲ್, ಜಾಹಿರಾತಿನ ಮೂಲಕ ಸೂಚನೆ ನೀಡುತ್ತಿವೆ‌.ತನ್ನ ಅಧಿಕೃತ ಸ್ಟೋರುಗಳಲ್ಲಿ, ನಿರ್ದಿಷ್ಟ ಅಂಗಡಿಗಳಲ್ಲಿ ಗ್ರಾಹಕರಿಗೆ ಲಿಂಕ್ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.

ಆದ್ರೂ ಕೆಲವರಿಗೆ ಕೆಲಸದ ಒತ್ತಡದಲ್ಲಿ ಅಂಗಡಿಗೆ ಹೋಗಿ ಲಿಂಕ್ ಮಾಡಿಕೊಳ್ಳಲು ಕಷ್ಟವಾಗುತ್ತೆ ಆಗಿದ್ರೆ ಇಲ್ಲಿದೆ ನೋಡಿ ನೀವೇ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಲಿಂಕ್ ಮಾಡಿಕೊಳ್ಳಬಹುದು

ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವ ವಿಧಾನ:

ಮೊದಲಿಗೆ ಆಧಾರ್ ವೆಬ್‌ಸೈಟ್‌ ಓಪನ್ ಮಾಡಿಕೊಳ್ಳಿ.

ನಂತರ ಆಧಾರ್ ಅಪ್ಡೇಟ್‌ ಆಯ್ಕೆಯನ್ನು ಮಾಡಿಕೊಳ್ಳಿ.

ವೆಬ್‌ಸೈಟ್‌ ಓಪನ್ ಆಗುತ್ತೆ ಅಲ್ಲಿ ಕ್ಲಿಕ್ ಇಯರ್ ಬಟನ್ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ್ ನಂಬರ್ ಹಾಕಿ ಎಂಟರ್ ಮಾಡಿ.

ನಂತರ ಒಟಿಪಿ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್ ಗೆ ಒಟಿಪಿ ನಂಬರ್ ಬರುತ್ತೆ.

ನಂತರ ಒಟಿಪಿ ಯನ್ನು ಎಂಟ್ರಿ ಮಾಡಿ.
ಆಮೇಲೆ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ನಿಮ್ಮ ಮಾಹಿತಿ ಹಾಕಿ ಮತ್ತು ಮೊಬೈಲ್ ನಂಬರ್ ಬದಲಿಸಿಕೊಳ್ಳಬಹುದು.