ಮೊಬೈಲ್-ನಲ್ಲೆ ಪಡೆಯಬಹುದು Train ಜನರಲ್ ಟಿಕೆಟ್; ಇನ್ಮುಂದೆ ಟಿಕೆಟ್ ಪಡೆಯಲು ಸಾಲಿನಲ್ಲಿ ನಿಲ್ಲುವ ಪಜೀತಿ ಇಲ್ಲ..

0
1044

ಟ್ರೈನ್-ನಲ್ಲಿ ಪ್ರಯಾಣಿಸಬೇಕು ಅಂದ್ರೆ ಒಂದು ಅಥವಾ ಎರಡು ತಿಂಗಳ ಮೊದಲೆ set reservation ಮಾಡಿಸಿರಬೇಕು ಇಲ್ಲ ಜನರಲ್ ಟಿಕೆಟ್ ಪಡೆಯಲು ಕೀವ್- ನಲ್ಲಿ ನಿಲ್ಲಬೇಕು. ಹಬ್ಬದ ದಿನಗಳು ಬಂದರೆ ಮುಗಿತು ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿರುತ್ತಾರೆ. ಮತ್ತೆ ಜನರಲ್ ಟಿಕೆಟ್- ಗೆ 3-4 ತಾಸು ಲೈನ್- ನಲ್ಲಿ ನಿಂತು ಟಿಕೆಟ್ ಪಡೆಯಬೇಕು ಇದು ಜನರಿಗೆ ದೊಡ್ಡ ತಲೆನೋವು ಆಗಿದೆ. ಇನ್ಮುಂದೆ ಈ ಪಜೀತಿ ಇರುವುದಿಲ್ಲ ಏಕೆಂದರೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇರುವುದರಿಂದ ಎಲ್ಲ ತರಹದ ವ್ಯವಹಾರಗಳು ಮೊಬೈಲ್-ನಲ್ಲೆ ಮಾಡುವ ಅವಕಾಶವಿರುವುದರಿಂದ, ಈಗ ಟ್ರೈನ್ ಜನರಲ್ ಟಿಕೆಟ್ ಬುಕಿಂಗ್ ಕೂಡ ಮೊಬೈಲ್ ನಲ್ಲೆ ಮಾಡಿಕೊಳ್ಳಬಹುದು. ಈ ಹೊಸ ಸೇವೆಯು ಲಕ್ಷಾಂತರ ಭಾರತೀಯರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದು ಹೇಗೆ ಅಂದ್ರೆ ಇಲ್ಲಿದೆ ನೋಡಿ.


Also read: ಇರಾನ್-ನಿಂದ ಭಾರತ ತೈಲ ಆಮದು ಮಾಡಿಕೊಳ್ಳಲು ವಿನಾಯಿತಿ ಕೊಟ್ಟ ಅಮೇರಿಕ; ಇನ್ಮೇಲಾದ್ರು ಪೆಟ್ರೋಲ್ ಬೆಲೆ ಕಡಿಮೆಯಾಗುತ್ತ?

ಮೊಬೈಲ್ ನಲ್ಲಿ ಹೇಗೆ?

ಪ್ರಯಾಣಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಇಲಾಖೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಮೂಲಕ ನೀವು ಜನರಲ್ ಟಿಕೆಟ್​ಗಳ​ನ್ನು ಕೂಡ ಮೊಬೈಲ್​ನಲ್ಲಿ ಪಡೆಯಬಹುದು. UTS (Unreserved ticket system) ಎಂಬ ಅಪ್ಲಿಕೇಶನ್ನು ರೈಲ್ವೇ ಇಲಾಖೆ ಆರಂಭಿಸಿದ್ದು, ಇಲ್ಲಿ ನೀವು ಕಾಯ್ದಿರಿಸಲಾಗದ ಟಿಕೆಟ್​ನ್ನು ಪಡೆಯಬಹುದು. ಇದರಿಂದ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವ ತೊಂದರೆ ತಪ್ಪಲಿದೆ. ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್ ಲಭ್ಯವಿದ್ದು ಇದನ್ನು ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.


Also read: ರಾಜ್ಯದ ಜನರಿಗೆ ತಿಂಗಳಿಗೊಂದು ಸಿಹಿಸುದ್ದಿ; ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರ ಬರವಸೆ..

app ನಿಂದ ಟಿಕೆಟ್ ಬುಕ್ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ಮೊಬೈಲ್​ನಲ್ಲಿ UTS ಅಪ್ಲಿಕೇಶನ್​ ಡೌನ್​ಲೋಡ್ ಮಾಡಿಕೊಂಡು. ಅಲ್ಲಿ ಕೇಳಿರುವ ವಿವರಗಳನ್ನು ತುಂಬಿ account Register ಮಾಡಿಕೊಳ್ಳಬೇಕು, ಇಲ್ಲಿ ಹೆಸರು ಮೊಬೈಲ್ ಸಂಖ್ಯೆ, ಐಡಿ ಕಾರ್ಡ್​ ಸಂಖ್ಯೆ ತುಂಬಬೇಕಾಗುತ್ತದೆ. ಇದಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸುತ್ತಾರೆ. ಆನಂತರ ನಿಮಗೆ ಮೆಸೇಜ್ ಮೂಲಕ ನಿಮ್ಮ ಮೊಬೈಲ್​ಗೆ ಐಡಿ ಮತ್ತು ಪಾಸ್​ವರ್ಡ್​ನ್ನು ಕಳುಹಿಸಲಾಗುತ್ತದೆ. ಈ ಐಡಿಯನ್ನು ಬಳಸಿ ನೀವು UTS ಆ್ಯಪ್​ನಲ್ಲಿ ಲಾಗಿನ್ ಆಗಬಹುದು. ಲಾಗಿನ್ ನಂತರ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತದೆ. ಅದರಲ್ಲಿ R-Wallet ಎಂಬ ಆಯ್ಕೆ ಇರುತ್ತದೆ. R-Wallet ಅನ್ನು ಆನ್​ಲೈನ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್​ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು. 100 ರೂ. ರಿಂದ 10 ಸಾವಿರದವರೆಗೆ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, 10 ಸಾವಿರ ಮಾಡಿಕೊಂಡರೆ 500 ರೂ.ಗಳ ಕ್ಯಾಶ್​ಬ್ಯಾಕ್ ಆಫರ್ ಕೂಡ ಸಿಗಲಿದೆ. ಈ ವ್ಯಾಲೆಟ್ ಮೂಲಕ ಟಿಕೆಟ್​ಗಳನ್ನು ಖರೀದಿಸಬಹುದು.


Also read: ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

ಟಿಕೆಟ್ ಬುಕಿಂಗ್ ಕ್ರಮ:

UTS ಆ್ಯಪ್​ನಲ್ಲಿ ಟಿಕೆಟ್​ ಬುಕ್ ಮಾಡಿಕೊಳ್ಳಲು ಎರಡು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಒಂದು Paper Les ಟಿಕೆಟ್ ಮತ್ತೊಂದು Print tickets. ಈ ಎರಡು ಟಿಕೇಟ್ ನಿಯಮಗಳು ಕೂಡ ವಿಭಿನ್ನವಾಗಿದ್ದು, ನೀವು ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿದ್ದರೆ ಪೇಪರ್​ಲೆಸ್​ ಟಿಕೆಟ್ ಆಯ್ಕೆಯನ್ನು ಪಡೆಯಬಹುದು. ಈ ಆಯ್ಕೆಯ ಮೂಲಕ ಟಿಕೆಟ್​ ನೇರವಾಗಿ ನಿಮ್ಮ ಮೊಬೈಲ್​ಗೆ ಡೌನ್​ಲೋಡ್ ಆಗುತ್ತೆ. ಮತ್ತು print tickets​ ಈ ಆಯ್ಕೆಯನ್ನು ನೀವು ರೈಲು ನಿಲ್ದಾಣದಿಂದ ದೂರದಲ್ಲಿದ್ದಾಗ ಬಳಸಬಹುದಾಗಿದೆ. ಇಲ್ಲಿ ನೀವು ಟಿಕೆಟ್ ಬುಕ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಪ್ರಿಂಟ್ ಟಿಕೆಟ್ ಇಲ್ಲದಿದ್ದರೆ ನಿಮ್ಮ ಟಿಕೆಟ್ ಮಾನ್ಯತೆ ಇರುವುದಿಲ್ಲ.