ಮೊಬೈಲ್‍ನಿಂದಲೇ ಸೂರ್ಯೋದಯ..!

0
933

ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ದೇವರ ಸ್ಮರಣೆ ಮತ್ತು ದೇವರ ಫೋಟೊ ನೋಡಿ ಎದ್ದೇಳುತ್ತಾರೆ. ತಮ್ಮ ದೈನಂದಿನ ಚಟುವಟಿಕೆಗೆ ಜೀವನ ಸುಖಮಯವಾಗಿರಲಿ ಎಂದುಕೊಂಡರೆ, ಇನ್ನು ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಕಣ್ಮುಂದೆ ಮೊಬೈಲ್ ಬೇಕು. ಮೊಬೈಲ್ ಇಲ್ಲದೆ ಅವರಿಗೆ ಬೆಳಗಾಗೋದೇ ಇಲ್ಲ. ಊಟ, ತಿಂಡಿ, ಕಾಫಿ ಕಣ್ಮುಂದೆ ಇದ್ದರೂ ಕುಡಿತಾ ಮೊಬೈಲ್‍ನಲ್ಲಿ ತಲ್ಲೀನರಾಗಿ ಬಿಡ್ತಾರೆ. ಮೊಬೈಲ್ ಕಣ್ಮುಂದೆ ಇಲ್ಲದೇ ಹೋದರೆ ಏನೋ ಕಳೆದುಕೊಂಡ ಹಾಗೆ ದೊಡ್ಡಗುಡ್ಡ ತಲೆ ಮೇಲೆ ಬಿದ್ದ ಹಾಗೆ ಆಡ್ತಾರೆ. ಮೊಬೈಲ್ ಇಲ್ಲಾ ಅಂ-ದರೆ ಇವರಿಗೆ ಬೆಳಕಾಗೊದೇ ಇಲ್ಲ. ಇನ್ನೂ ಕೆಲವರು ಮಧ್ಯರಾತ್ರಿವರೆಗೆ ಅಥವಾ ಬೆಳಗಿನವರೆಗೂ ಮೊಬೈಲಿಗೆ ದಾಸರಾಗಿ (ಮಾರುಹೋಗಿ) ಬಿಡ್ತಾರೆ.

ಇನ್ನೂ ಕೆಲವರು ಇದ್ದಾರೆ. ಬಸ್ ಸ್ಟಾಪ್‍ನಲ್ಲಿ ಬಸ್ಸು ಹತ್ತುವಾಗ ಬಸ್ ಹತ್ತಿದ ನಂತರವೂ ಕೂಡ ಏರ್‍ಫೋನ್ ಕಿವಿಗೆ ಹಾಕಿಕೊಂಡು ಹಾಡು ಕೇಳುತ ಅಥವಾ ಮಾತನಾಡುತ್ತಾ ಇರ್ತಾರೆ. ಕಂಡಕ್ಟರ್ ಟಿಕೆಟ್, ಟಿಕೇಟ್ ಅಂತಾ ಕೂಗಿದರೂ ಕೂಡ ಅವರಿಗೆ ಕೇಳಿಸಲ್ಲಾ. ಬಸ್‍ನಲ್ಲಿ ಇತರ ಪ್ರಯಾಣಿಕರ ಜೊತೆಗೆ ಸಹಕರಿಸದೇ ತಮ್ಮದೇ ಆದ ಲೋಕದಲ್ಲಿ ತಲ್ಲಿನರಾಗಿರುತ್ತಾರೆ. ಯಾರೆ ಎದುರಿಗೆ ಬಂದರೂ ಅವರಿಗೆ ಅರಿವೇ ಇರೋದಿಲ್ಲ. ಎದುರಿಗೆ ಬಂದವರಿಗೆ ಡಿಕ್ಕಿ ಹೊಡೆದು ಆಮೇಲೆ ಸಾರಿ ಕೇಳೋದು.

ಸ್ನೇಹಿತರೆ ಹಾಗೆಲ್ಲಾ ಮಾಡೊದಕ್ಕೆ ಹೋಗಬೇಡಿ, ಬಸ್‍ನಲ್ಲಿ ಹೋಗಬೇಕಾದರೆ ಎಷ್ಟೊ ವಿಷಯವನ್ನು ನಾವು ಕಲಿಯಬಹುದು. ಸಮಾಜದಲ್ಲಿನ ಅನೇಕ ವಿಷಯವನ್ನು ನಾವು ಬಸ್ಸಿನಲ್ಲಿ ಪ್ರಯಾಣಿಸುವಾಗ ತಿಳಿದುಕೊಳ್ಳಬಹುದು. ಕಲಿಯೋದಕ್ಕೆ ಸಾಕಷ್ಟು ವಿಷಯಗಳಿರುತ್ತವೆ. ಕಲಿಯೋ ಆಸಕ್ತಿ ನಮ್ಮಲ್ಲಿ ಇರಬೇಕು ಅಷ್ಟೆ. ಇನ್ನೂ ಕೆಲವರು ಇದ್ದಾರೆ. ರಸ್ತೆಯಲ್ಲಿ ಹೋಗುವಾಗ ಏರ್‍ಫೋನ್ ಹಾಕಿಕೊಂಡು ಸಾಂಗ್‍ಸ್ ಕೇಳುತ್ತಾ ಅಥವಾ ಫೋನಿನಲ್ಲಿ ಮಾತನಾಡುತ್ತಾ ಹೋಗ್ತಾ ಇರ್ತಾರೆ. ಹಿಂದೆ, ಮುಂದೆ ಅವರ ಪಕ್ಕದಲ್ಲಿ ಓಡಾಡುವ ವಾಹನದ ಸೌಂಡ್ ಕೂಡಾ ಕೇಳಿಸಿಕೊಳ್ಳದೆ ವಾಹನಗಳ ಅರಿವಿಲ್ಲದೇ, ಮೊಬೈಲ್‍ನಲ್ಲಿ ಸಾಂಗ್ಸ್ ಕೇಳುತ್ತಾ ಹೋಗುತ್ತಿರುತ್ತಾರೆ. ಅವರ ಪಕ್ಕದಲ್ಲಿ ಬಾಂಬ್ ಬ್ಲಾಸ್ಟ್ ಆದರೂ ಅವರಿಗೆ ಅರಿವಿರೋದಿಲ್ಲ. ಯಾಕೆಂದರೆ ಅವರು ಕಿವಿಗೆ ಬೀಗವನ್ನು ಹಾಕಿಕೊಂಡಿರುತ್ತಾರೆ. ದಯವಿಟ್ಟು ಹಾಗೆ ಮಾಡೊದನ್ನು ನಿಲ್ಲಿಸಿ ಸ್ನೇಹಿತರೆ. ವಾಹನಗಳ ದಟ್ಟಣೆ ದಿನೇ ದಿನೇ ಜಾಸ್ತಿ ಆಗ್ತಾ ಇದೆ. ನಿಮ್ಮ ಸೆಫ್ಟಿ ನಿಮ್ಮ ಕೈಯಲ್ಲಿದೆ. ಒತ್ತಡದ ಜೀವನದಲ್ಲಿ ಸಣ್ಣ ಸಣ್ಣ ತಪ್ಪುಗಳು ನಿಮ್ಮ ಜೀವಕ್ಕೆ ಹಾನಿ ಉಂಟು ಮಾಡಬಹುದು.

ಅವಶ್ಯವಾದ ಕರೆ (ಕಾಲ್) ಬಂದಾಗ ಒಂದು ಕಡೆ ನಿಂತು ಮಾತನಾಡಿ, ಮುಂದೆ ಸಾಗಿ. ಆದರೆ ಒಂದೇ ಊರು, ಒಂದೆ ಕಾಲೇಜು, ಒಂದೇ ಕ್ಲಾಸ್ ಒಂದೇ ಬೆಂಚ್‍ನಲ್ಲಿ ಕುಳಿತುಕೊಳ್ಳುವ ಸಹಪಾಠಿಗಳ ಹೆಸರೆ ಅವರಿಗೆ ಗೊತ್ತಿರೊದಿಲ್ಲ. ಬೆಳಗ್ಗೆಯಿಂದ ಸಾಯಂಕಾಲದವರೆಗೆ 7ರಿಂದ 8 ತಾಸುಗಳಕಾಲ ಒಂದೇ ಕಡೆ ವ್ಯಾಸಂಗ ಮಾಡುವ ಸಹಪಾಠಿಗಳ ಹೆಸರೆ ಗೊತ್ತಿರೊದಿಲ್ಲ. ಅವರ ಜೊತೆ ಬೆರೆಯಬೇಕು. ಸ್ನೇಹ ಬೆಳೆಸಬೇಕು ಎನ್ನುವುದನ್ನೇ ಮರೆತುಬಿಟ್ಟಿದ್ದಾರೆ. ಸ್ನೇಹಿತರೆ ಹಾಗೆಲ್ಲ ಮಾಡಬೇಡಿ, ಮಾನವನು ಸಂಘಜೀವಿ, ಮಾನವ ಸಮಾಜವನ್ನು ಬಿಟ್ಟು ಬದುಕಲಾರ. ಸಮಾಜದೊಂದಿಗಿನ ನಮ್ಮ ಸಂಬಂಧ ಗತಿಶೀಲವಾದದ್ದು, ನಿರಂತರವಾದದ್ದು, ನಿಮ್ಮ ಸಹಪಾಠಿಗಳೊಂದಿಗೆ ಸ್ನೇಹವನ್ನು ಬೆಳೆಸಿ ಅವರ ಬಗ್ಗೆ ಕಾಳಜಿ ವಹಿಸಿ ವಾಟ್ಸ್‍ಆಪ್, ಮೆಸೇಜ್, ಚಾಟಿಂಗ್ ಕೆಟ್ಟದ್ದು ಅಂತಾ ಹೇಳ್ತಾ ಇಲ್ಲ. ಅಂತರ್ಜಾಲಗಳು ಕೆಟ್ಟಿದ್ದು ಅಂತಾ ಅಲ್ಲ. ನಾವು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಅಷ್ಟೆ. ನಮ್ಮ ಸಹಚರರೊಡನೆ ಬೆರೆಯುವುದು ತುಂಬಾ ಮುಖ್ಯ ತಂತ್ರಜ್ಞಾನವನ್ನು ಅವಶ್ಯಕತೆ ಇದ್ದಷ್ಟೆ ಉಪಯೋಗಿಸಬೇಕು.ಮೊಬೈಲ್ ಸಂಬಂಧವನ್ನು ದೂರಮಾಡ್ತಾ ಇದೆ. ಮೊಬೈಲ್ ತಗೊಂಡು ಕೊಠಡಿ ಸೇರಿದರೆ ಮುಗೀತು. ಮನೆಯಲ್ಲಿ ಏನೇ ಆದರೂ ಅವರಿಗೆ ಬಂದಂತೆ ಮೆಸೇಜ್ ಸಾಂಗ್‍ಸ್ ಗೇಮ್, ವಾಟ್ಸ್‍ಆಪ್ ಅಂತಾ ಮೈಮರೆತು ಬಿಡ್ತಾರೆ. ಮನೆಯಲ್ಲಿರುವಂತಹ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಅಣ್ಣ, ತಂಗಿ, ಅಕ್ಕ ಮನೆಯ ಇತರ ಸದಸ್ಯರೊಡನೆ ಮಾತನಾಡಲು ಟೈಂ ಇರಲ್ಲಾ. ಎಲ್ಲೊ ದೂರದಲ್ಲಿ ಕುಳಿತಂತ ಫ್ರೆಂಡ್ಸ್ ಜೊತೆ ಊಟ ಆಯ್ತಾ, ಕಾಫಿ ಆಯ್ತಾ, ಟೀ ಆಯ್ತಾ. ತಿಂಡಿ ಆಯ್ತಾ ಏನೇ ಮಾಡ್ತಾ ಇದೆಯಾ, ಏನ್ ಕುಡಿತಿದಿಯಾ, ಏನ್ ತಿಂದಿಯಾ, ನಿಂತಿದಿಯಾ, ಕುಂತಿದಿಯಾ, ಯಾವ್ ಬಟ್ಟೆ ಹಾಕಿದಿಯಾ, ಆ ಕಲರ್ ಬಟ್ಟೆ ಹಾಕಿದಿಯಾ, ಅಂತೆಲ್ಲಾ ಹಾಳುಮುಳು ಮಾತಾಡ್ತಾ ಇರ್ತಾರೆ. ಮಾತಾಡಿದ್ರೆ. ಮಾತಿನಲ್ಲಿ ತೂಕ ಇರಬೇಕು. (ವಜಿನತ್ವ) ಮಾತಾಡೋ ಮಾತಿಗೆ ಒಂದು ಅರ್ಥ ಇರಬೇಕು. ಖಾಲಿ ಮಾತಾಡಿದ್ರೆ ಟೈಂ ಹಾಳು, ದುಡ್ಡು ಹಾಳು, “ಮಾತು ಮನೆ ಕೆಡಸ್ತು, ತೂತು ಒಲೆ ಕೆಡಸ್ತು” ಎನ್ನೋ ಗಾದೆ ಮಾತಿನಂತೆ ನಿಮ್ಮ (ಮೊಬೈಲ್ ಫ್ರೆಂಡ್ಸ್‍ನ) ನಿಮ್ಮ ಫ್ರೆಂಡ್ಸಿಪ್ ಆಗುತ್ತೆ. ಫ್ರೆಂಡ್ಸ್ ಜೊತೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೆ ಮಾತನಾಡಿ, ನಿಮ್ಮ ಫ್ರೆಂಡ್ಸಿಪ್ ಗಟ್ಟಿಯಾಗಿರುತ್ತೆ. ಖಾಲಿ ಮಾತು ಬೇಡ.ಅಷ್ಟೆಲ್ಲಾ ಮಾತಾಡ್ತಿರಲ್ಲಾ. ಮನೆಯಲ್ಲಿರುವ ಅಪ್ಪ, ಅಮ್ಮ, ಅಜ್ಜಿ, ತಾತ, ಅಕ್ಕ, ತಂಗಿ ತಮ್ಮ ಮನೆಯಲ್ಲಿನ ಇತರ ಸದಸ್ಯರೊಡನೆ ಮಾತಾಡಿ, ಅವರ ಜೊತೆನೂ ಟೈಂ ಸ್ಪೆಂಡ್ ಮಾಡಿ, ಅವರಿಗೂ ಖೂಷಿಯಾಗುತ್ತೆ. ಊಟಾ ಆಯ್ತಾ ಅಂತಾ ವಿಚಾರಿಸಿ, ಅವರ ಆರೋಗ್ಯ ವಿಚಾರಿಸಿ, ಇಲ್ಲರೊಂದಿಗೂ ಪ್ರೀತಿಯಿಂದ ಸಲಗೆಯಿಂದ ನಡೆದುಕೊಳ್ಳಿ. ಮನೆಯ ಸದಸ್ಯರ ಬೇಕು, ಬೇಡಗಳನ್ನು ವಿಚಾರಿಸಿ ತಿಳಿದುಕೊಳ್ಳಿ. ದೇವರು ನಮಗೆ ಅಂತಾ ಕಳಿಸಿರೊ ಸ್ನೇಹಿತರು ಅಣ್ಣ, ತಂಗಿ, ತಮ್ಮ, ಅಕ್ಕ, ನಮ್ಮ ಜೊತೆಗೆ ಹುಟ್ಟಿ ನಮ್ಮ ಕೊನೆಯ ತನಕಾ ಇರುವಂತ ಒಳ್ಳೆ ಸ್ನೇಹಿತರು. ಮನೆಯ ಇತರೆ ಸದಸ್ಯರೊಂದಿಗೆ ಬೇರೆಯವರಿಂದ ಅವರಿಗೂ ಖೂಷಿ ಆಗುತ್ತೆ. ನಿಮ್ಮ ಸಂಬಂಧ ಗಟ್ಟಿಯಾಗಿರುತ್ತೆ.ಮೊಬೈಲ್ ತಂತ್ರಜ್ಞಾನ ಕೆಟ್ಟದ್ದು ಅಂತಾ ಅಲ್ಲಾ. ಮೊಬೈಲ್ ಒಳ್ಳೆಯದೇ, ಅದು ನಮ್ಮ ಕಷ್ಟಕಾಲಕ್ಕೆ ನಮ್ಮ ಸಹಾಯಕ್ಕೆ ತುಂಬಾ ಸಹಕಾರಿಯಾಗಿದೆ. ಆದರೆ ನಾವು ಉಪಯೋಗಿಸೊ ರೀತಿ ಸರಿ ಇಲ್ಲಾ ಅಷ್ಟೆ. ಮೊಬೈಲ್ ನಮ್ಮ ಜೊತೆ ಇದ್ದರೆ ಒಬ್ಬ ಜೊತೆಗಾರ ಇದ್ದಹಾಗೆ, ನಮ್ಮ ಆಪತ್ತಿನಲ್ಲಿ ನಮಗೆ ಮೊಬೈಲ್ ಸಹಕಾರ ಮಾಡುತ್ತೆ.ಮೊಬೈಲ್ ಅವಶ್ಯಕತೆ ಇದೆ. ಆದರೆ ಅನಿವಾರ್ಯವಲ್ಲ, ಅತಿಯಾದರೆ ಅಮೃತವೂ ವಿಷವಾಗುತ್ತೆ.