ಕರ್ನಾಟಕದ ಈ IAS ಅಧಿಕಾರಿ ಮೇಘಾಲಯದಲ್ಲಿ ಮೂಡಿಸಿರೋ ಹವಾ ಬಗ್ಗೆ ಕೇಳಿದ್ರೆ, ಇವರು ಕನ್ನಡಿಗರೆಂಬ ಹೆಮ್ಮೆ ಮೂಡುತ್ತೆ!!

0
1528

ಈ ದುನಿಯಾದಲ್ಲಿ ಒಂದು ಸರ್ಕಾರಿ ನೌಕರಿ ಸೀಕ್ರೆಸಾಕು ಆರಾಮವಾಗಿ ಜೀವನ ಮಾಡಬಹುದು ಎಂಬುದು ಎಲ್ಲರ ಬಹುದೊಡ್ಡ ಆಸೆ ಅದ್ರಲ್ಲಿ ಸಿವಿಲ್ ಸರ್ವಿಸ್ ಐಎಸ್, ಕೆಎಸ್ ಆದ್ರೆ ಮುಗಿತು ಇನ್ನೇನ್ “ಮುಗಿಲಿಗೆ ಒಂದೇ ಇಂಚು ಸ್ವರ್ಗದ ಮೇಲೊಂದುಇಂಚು” ಅನ್ನೋ ರೇಂಜ್ಅಲ್ಲಿ ವಿಚಾರ ಮಾಡ್ಕೊಂಡು ಕನಸು ಕಾಣತ್ತಾರೆ. ಇಂತವರಲ್ಲೇ ಕೆಲವೊಬ್ರು ಇರ್ತಾರೆ ಅವರ ವಿಚಾರಕ್ಕೆ ಎಷ್ಟೊಂದು ಮೆಚ್ಚುಗ್ಗೆ ವ್ಯಕ್ತ ಪಡಿಸಿದ್ರು ಕಡಿಮಿನೇ. IAS ಅಂತ ಉನ್ನತ ಹುದ್ದೆಯಲ್ಲಿ ಕರ್ನಾಟಕ ಮಂದಿ ಮುಂಚೂಣಿಯಲ್ಲಿರುವುದು ದೊಡ್ಡ ಸಾಧನೆಯಾಗಿದೆ. ಇಂತಹ ದಕ್ಷೆ ಐಎಎಸ್ ಅಧಿಕಾರಿಗಳ ನೆನಪು ಡಿ.ಕೆ ರವಿ. ಇಂಥವರ ಸಾಲಿನಲ್ಲಿ ಬರುವ ಕರ್ನಾಟಕದ ‘ಅರುಣ್ ಕೆಂಬವಿ’ ಮೇಘಾಲಯದ ಡಿಸ್ಟ್ರಿಕ್ಟ್ ಕಮಿಷನರ್ ಆಗಿ ಅಲ್ಲಿನ ಜನರ ಉಸಿರಾಗಿ ಅಧಿಕಾರ ಮಾಡುತ್ತಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅರುಣ್ ಕೆಂಬವಿ ಯಾರು?

ಕರ್ನಾಟಕದ ಬಿಜಾಪುರದಲ್ಲಿ ಜನಿಸಿದ “ಅರುಣ್ ಕೆಂಬವಿ” ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ 18 ತಿಂಗಳ ಕಾಲ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನೆಡೆಸಿ 2011 ರಲ್ಲಿ upsc ಪರೀಕ್ಷೆ ಪಾಸಾದ ಅರುಣ್ ಅವರು ತರಬೇತಿಯನ್ನು ಪೂರ್ಣಗೊಳಿಸಿ ಅಸ್ಸಾಂನಲ್ಲಿ ಒಂದು ವರ್ಷದ ಸೇವೆ ಸಲ್ಲಿಸಿದ ನಂತರ ಅವರು ಶಿಲ್ಲಾಂಗ್ನಲ್ಲಿ “ಸಹಕಾರ ಸೊಸೈಟಿಯ ರಿಜಿಸ್ಟ್ರಾರ್ ಮತ್ತು ಗ್ರಾಮೀಣ ಮತ್ತು ಸಮುದಾಯ ಅಭಿವೃದ್ಧಿ ನಿರ್ದೇಶಕರಾಗಿ” ಮೇಘಾಲಯಕ್ಕೆ ಆಯ್ಕೆಯಾದರು. ನಂತರ West Jaintia Hills District(WJK) West Khasi Hills District ಜನರ ಅಚ್ಚುಮೆಚ್ಚಿನ, ಅದ್ಭುತವಾದ, ವಿನಮ್ರ “ಪೀಪಲ್ಸ್ ಡಿಸ್ಟ್ರಿಕ್ಟ್ ಕಮಿಷನರಾಗಿ” ಅಲ್ಲಿನ ನಿವಾಸಿಗಳು ಅರುಣ್ ಕುಮಾರ್ ಕೆಂಬವಿ ಅವರನ್ನು ಪ್ರಶಂಸಿಸುತ್ತಿದರು.

“ಪೀಪಲ್ಸ್ ಡಿಸ್ಟ್ರಿಕ್ಟ್ ಕಮಿಷನರ್” ಎಂದು ಜನಪ್ರಿಯತೆಗಳಿಸಲು ಅರುಣ್ ಕೆಂಬವಿ ಸಾಧನೆ ಏನು?

ಅರುಣ್ ಕೆಂಬವಿ 24 ಗಂಟೆಗಳು ಅಲ್ಲಿನ ಸಮಸ್ಯೆಯನ್ನು ಕುರಿತು ಯಾರದೇ ಅನುಮತಿಯಿಲ್ಲದೆ ದೂರು ಸಲ್ಲಿಸಲು ಜನರಿಗೆ ಮುಕ್ತ ಅವಕಾಶ ಕೊಟ್ಟಿದ್ದಾರೆ ಮತ್ತು ಪ್ರತಿ ತಿಂಗಳ 2ನೇ ಮಂಗಳವಾರ ಇಲಾಖೆಯ ಸಭೆಗಳನ್ನು ನಡೆಸಿ, ವೈಯಕ್ತಿಕವಾಗಿ ಎಲ್ಲಾತರಹದ ಕೆಲಸವನ್ನು ಪರಿಶೀಲಿಸಿ ಸಮಸ್ಯೆಯಿರುವ ಸ್ಥಳಗಳಿಗೆ ಆಶ್ಚರ್ಯಕರ ಭೇಟಿನೀಡಿ ಜನರ ಸಮಸ್ಯೆಗೆ ನೆರವಾಗುತ್ತಿದ್ದಾರೆ. ಅರುಣ್ ಅವರು ಮಾಡಿದ ಇನ್ನೊಂದು ಮುಖ್ಯವಾದ ಬದಲಾವಣೆ ಮತ್ತು ಗುರಿ ಅಂದ್ರೆ ನಿರುದ್ಯೋಗಿಗಳನ್ನು ಸ್ವಾಭಿಮಾನಿಯಾಗಿ ಮಾಡುವುದು, ಇದಕ್ಕೆ ಬೇಕಾದ ಸಂಪೂರ್ಣ ತರಬೇತಿಯನ್ನು ಶುರುಮಾಡಿದ ಅರುಣ್ ಅವರು ನೇಮಕಾತಿಗಳ ಪೂರ್ವ ಪರಿಕಲ್ಪನೆಯನ್ನು ರಾಜ್ಯಾದ್ಯಂತ ಕೈಗೊಂಡು ಅಭ್ಯರ್ಥಿಗಳ ತರಬೇತಿಯಾದ ನಂತರ ಪರೀಕ್ಷೆಯನ್ನು ಮಾಡುತ್ತಾರೆ ಈ ಪರೀಕ್ಷೆಯಲ್ಲಿ ವಿಭಿನ್ನ ಪ್ರಶ್ನೆ ಪತ್ರಿಕೆ ತಯಾರಿಸಿ ವೀಡಿಯೋಗ್ರಫಿ ಬಳಸಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮೂಲಕ ಪರೀಕ್ಷೆ ನೆಡಸಿ ತ್ವರಿತವಾಗಿ ಪರಿಕ್ಷಾರ್ತಿಗಳು ಪಡೆದ ಅಂಕವನ್ನು ನೀಡಿ ಅವರಿಗೆ ಬೇಕಾದ ಹೆಚ್ಚಿನ ತರಬೇತಿಯನ್ನು ಕೊಡುತ್ತಿದ್ದಾರೆ, ಮತ್ತು ವಿದ್ಯಾರ್ಥಿವೇತನವನ್ನು ಪಡೆಯುವುದಕ್ಕೆ ಮಾಹಿತಿಯನ್ನು ನೀಡಿ ಹೆಚ್ಚಿನ ನೆರವಾಗುತ್ತಿದ್ದಾರೆ, ಇದರಿಂದ ಮೇಘಾಲಯದ ತುಂಬ ನಿರುದ್ಯೋಗ ಸಮಸ್ಯೆಯನ್ನು ಮುಕ್ತಿ ಗೊಳಿಸಿದ್ದಾರೆ.

ಇದರ ಜತೆಗೆ ಜೈವಿಕ ಚಹಾ ಸಾಗುವಳಿ, ಜೇನುಸಾಕಣೆ, ತೋಟಗಾರಿಕೆ, ಮೀನುಗಾರಿಕೆ, ಕೋಳಿ, ಹಂದಿ, ಮಳೆನೀರು ಕೊಯ್ಲು, ಕುಂಬಾರಿಕೆ ಮುಂತಾದ ಜೀವನೋಪಾಯದ ಚಟುವಟಿಕೆಗಳ ಮೇಲೆ ಜನರನ್ನು ಸಂವೇದನೆಗೊಳಿಸಲು ತರಬೇತಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸೃಷ್ಟಿಸಲು ಅಗತ್ಯವಾದ 4 ಜಿ ಸಂಪರ್ಕವನ್ನು ಪರಿಚಯಿಸಿದ್ದಾರೆ. ಇದು ಅರುಣ್ ಅವರ ಮತೊಂದು ಸಾಧನೆಯಾಗಿದೆ ಈ ಎಲ್ಲ ಕೆಲಸದಿಂದ ಅಲ್ಲಿನ ಜನರು ಪ್ರೀತಿಯಿಂದ ಅವರಿಗೆ “ಪೀಪಲ್ಸ್ ಡಿ.ಸಿ” ಎಂಬ ಬಿರುದು ನೀಡಿದ್ದಾರೆ. ಜನರ ಯಾವುದೇ ಸಮಸ್ಯೆಯನ್ನು ತಿಳಿಸಲು ಸ್ವತಃ ಅರುಣ್ ಅವರೇ ಒಂದು whatsapp ಗ್ರೂಪ್ ಮಾಡಿ ಜನರು ತಮ್ಮ ದೂರುಗಳನ್ನು WhatsApp, teligram, facebook, messenger ಗೆ ಮತ್ತು ಅವರ ಮೊಬೈಲ್ no 9436394363 ಗೆ ಚಿತ್ರಗಳು ಅಥವಾ ವೀಡಿಯೊಗಳಾಗಿ ಕಳುಹಿಸಬಹುದು, ಇದನ್ನು ಸ್ವತಃ ಯುವ ಡಿ.ಸಿ. ಅರುಣ್ ಅವರೇ ನೋಡಿ ಕೆಲವೇ ನಿಮಿಷಗಳಲ್ಲಿ ಸಮಸ್ಯೆಯನ್ನು ಪರಿಹರಿಸುತ್ತಾರೆ, ಈ ನೂತನ ಪರಿಕಲ್ಪನೆಯೊಂದಿಗೆ ಕಾಗದದ ಬಳಕೆ ಕಡಿಮೆಯಾಗಿದೆ, ದೂರುಗಳನ್ನು ಸಲ್ಲಿಸಲು ಸರ್ಕಾರಿ ಕಛೇರಿಗಳ ಹೊರಗೆ ಸಾಲು ಸಾಲಾಗಿ ನಿಲ್ಲುವ ಸಮಯವ್ಯರ್ತ ತಪ್ಪಿದ್ದೆ. ಮತ್ತು ಜನರು ಯಾವುದೇ ಸಮಸ್ಯೆಯನ್ನು ಕಳುಹಿಸಿದರು ಅವರ ಹೆಸರು ನಂಬರನ್ನು ಬಹಿರಂಗ ಪಡಿಸೋದಿಲ್ಲ, ಇದರಿಂದ ಯಾರಿಗೂ ತೊಂದರೆ ಇಲ್ಲ ಎಂಬುವುದು ಅರುಣ್ ಅವರ ಯೋಚನೆ. ಈ ವ್ಯವಸ್ಥೆ ಮಾಡಿದ ನಂತರ ಸಾರ್ವಜನಿಕ ವಿತರಣಾ ವ್ಯವಸ್ಥೆ, ವಿದ್ಯುತ್, ನೀರು, ಕಸ ಸಂಗ್ರಹ, ಮತ್ತು ತಡರಾತ್ರಿ ಮಾಡುವ ಶಬ್ದ ದೂರುಗಳು, ಅಕ್ರಮ ಮಾರಾಟ, ರಸ್ತೆ ಪರಿಸ್ಥಿತಿಗಳು ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.

ಅದ್ಭುತ ಅಧಿಕಾರಿ ಅರುಣ್ ಕೆಂಬವಿ ಅವರ ವರ್ಗಾವಣೆಯಿಂದ ರಾಜ್ಯದ ತುಂಬಾ ಮೂಡಿತು ಅಸಮಾಧಾನ.

2015ರಲ್ಲಿ KNGCSU ವಿದ್ಯಾರ್ಥಿಗಳು ನಡೆಸಿದ ಸಮಜಸ ವಲ್ಲದ ಹೋರಾಟವನ್ನು ನಿಲ್ಲಿಸಲು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಅರುಣ್ ಅವರ ಮೇಲೆ ಆರೋಪಗಳು ಕೇಳಿ ಬಂದು ಜನವರಿ 2015 ರಲ್ಲಿ ಡಬ್ಲುಕೆಹೆಚ್ ಜಿಲ್ಲೆಗೆ ವರ್ಗಾಯಿಸಲ್ಪಟ್ಟರು, ಇದರಿಂದ ಕೈಗೊಳ್ಳಬೇಕಾದ ಅನೇಕ ನಿರ್ಣಾಯಕ ಯೋಜನೆಗಳನ್ನು ನಿಲ್ಲಿಸಿದರು. ಇದನ್ನು ತಿಳಿದ ಪಶ್ಚಿಮ ಜೈನ್ತಿಯಾ ಹಿಲ್ಸ್ WJH ಜಿಲ್ಲೆಯ ನಿವಾಸಿಗಳಿಗಳ ಜೀವನವನ್ನು ಮಾರ್ಪಡಿಸಿದ ಅದ್ಭುತ ಅಧಿಕಾರಿಯ ವರ್ಗಾವಣೆಯ ತೀವ್ರ ಅಸಮಾಧಾನವಾಗಿತ್ತು. ಅನೇಕ WJH ನಿವಾಸಿಗಳು ಐಎಎಸ್ ಅಧಿಕಾರಿಯ ಅರುಣ್ಅವರ FACEBOOK ಪುಟದಲ್ಲಿ ತಮ್ಮ ಅಳುವು ನಿರಾಶೆಯನ್ನು ಹೊರಹಾಕಿ ಅವರ ನಿರೀಕ್ಷೆಗಳಿಗೆ ತಮ್ಮ ಉತ್ತಮ ಶುಭಾಶಯಗಳನ್ನು ಕಳುಹಿಸಿದರು. ಇಷ್ಟಕ್ಕೆ ಸುಮ್ಮನಿರದ “ಕರ್ನಾಟಕ ಹುಲಿ” ಹೈದರಾಬಾದ್ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಬಗ್ಗೆ ಮಾಹಿತಿ ನೀಡುವ ಕಠಿಣ ಕೆಲಸವನ್ನು ಮುಂದುವರೆಸಿದರು. ಐಐಎಂ ಶಿಲ್ಲಾಂಗ್ ಪ್ರಾಧ್ಯಾಪಕರೊಂದಿಗೆ ಸಮುದಾಯ ನಿರ್ವಹಣೆಯ ಪ್ರವಾಸೋದ್ಯಮ ಮತ್ತು ಸಂಪನ್ಮೂಲ ನಿರ್ವಹಣೆಯಂತಹ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಅವರು ಚರ್ಚಿಸಿದರು, ಇದೆ ವಿಷಯಕ್ಕೆ WJH ಮತ್ತು WKH ಜಿಲ್ಲೆಗಳಲ್ಲಿ ಎರಡೂ ವರ್ಷಗಳಲ್ಲಿ ಸತತವಾಗಿ “ಪ್ರತಿಷ್ಠಿತ ಪ್ರಧಾನಮಂತ್ರಿ ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಯ” ಪ್ರಶಸ್ತಿಯನ್ನು ಪಡೆದರು. 15 ತಿಂಗಳ ಸೇವೆಯ ನಂತರ ಮತ್ತೊಮ್ಮೆ ಅವರನ್ನು 2017ರಲ್ಲಿ ಡಬ್ಲುಕೆಹೆಚ್ ಜಿಲ್ಲೆಗೆ ಶಿಲ್ಲಾಂಗ್ ಕಾರ್ಯದರ್ಶಿಯಾಗಿ ಪ್ರೊಮೋಟ್ ಮಾಡಿ ವರ್ಗಾಯಿಸಲಾಯಿತು. ಗ್ರಾಮೀಣ ಮತ್ತು ಸಮುದಾಯ ಅಭಿವೃದ್ಧಿ ನಿರ್ದೇಶಕರಾಗಿ ಮಿಂಚಿದ ಕರ್ನಾಟಕದ ಯುವ ಜಿಲ್ಲಾಧಿಕಾರಿ. ಮತೊಮ್ಮೆ WKH ಜಿಲ್ಲೆಗೆ ಅರುಣ್ಅವರು ಬಂದಿರುವುದು ಅಲ್ಲಿನ ಜನರ ಸಂತೋಷಕ್ಕೆ ಪರಿವೆ ಇರಲಿಲ್ಲ.

ಅರುಣ್ ಹೊಸದೊಂದು ಯೋಜನೆ ರೋಪಿಸಿ ಶಿಲ್ಲಾಂಗ್ ಸಹಕಾರ ಸೊಸೈಟಿಯ ರಿಜಿಸ್ಟ್ರಾರ್ ಮತ್ತು ಗ್ರಾಮೀಣ ಸಮುದಾಯ ಅಭಿವೃದ್ಧಿ ನಿರ್ದೇಶಕರಾಗಿ ಪ್ರತಿ ದಿನವೂ ಸೈಕ್ಲಿಂಗ್ ಮೂಲಕ ಕೆಲಸದಲ್ಲಿ ನಿರತರಾದರು ಏಕೆಂದರೆ ಶಿಲ್ಲಾಂಗ್ ಕೆಟ್ಟ ಟ್ರಾಫಿಕ್ ಜಾಮ್ ನಗರಗಳಲ್ಲಿ ಒಂದು, ಇದನ್ನು ಅರಿತ ಅರುಣ್ ಸೈಕ್ಲಿಂಗ್ ಮಾಡುವುದು ತಮ್ಮ ಸಹವರ್ತಿ ನೌಕರರ ಮತ್ತು ಅಲ್ಲಿನ ಪ್ರಜೆಗಳಿಗೆ ಗೌರವದ DC ಎಂದು ಮಿಚ್ಚಿದರು. ಇದರಿಂದ ಪ್ರೇರಿತರಾದ ಶಿಲ್ಲಾಂಗ್ ಜನ ಸೈಕಲ್ ಗಳ ಬಳಕೆಯನ್ನು ಹೆಚ್ಚಿಸಿದ್ದಾರೆ. ಇದರಿಂದ ಟ್ರಾಪಿಕ್ ಜಾಮ್ ಸಮಸ್ಯೆ ಕಡಿಮೆ ಯಾಗಿದೆ ಆದಕಾರಣ ಸೈಕ್ಲಿಸ್ಟ್ ಗಳಿಗೆ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಸೈಕ್ಲಿಂಗ್ ಲೈನ್ ಗಳನ್ನು ರಚಿಸುತ್ತಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522