ಮೋದಿ ನೋಟ್ ಬ್ಯಾನ್ ಸಂದೇಶ, ಮೊದಲೇ ರೆಕಾರ್ಡ್ ಆಗಿತ್ತ??

0
994

ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1,000 ರೂ.ಗಳ ಕರೆನ್ಸಿ ನೋಟುಗಳನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತ್ಯಂತ ದಿಢೀರನೆ ರದ್ದು ಪಡಿಸುವ ಮೂಲಕ ದೇಶದ ಆರ್ಥಿಕ ರಂಗದಲ್ಲಿ ಭಾರೀ ದೊಡ್ಡ ಕ್ರಾಂತಿಕಾರಕ ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಅನಾಣ್ಯೀಕರಣ ನೀತಿ ಘೋಷಿಸಿದ್ದರು. ಪ್ರಧಾನಿಯವರ ರಾಷ್ಟ್ರವನ್ನು ಉದ್ದೇಶಿಸಿ ಮಡಿದ ಸಂದೇಶ ಮುಂಚೆನೇ ರಿಕಾರ್ಡೆಡ್ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ದೂರದರ್ಶನ ಪತ್ರಕರ್ತ ಮತ್ತು ಸಂಶೋಧಕ ಸತ್ಯೇಂದ್ರ ಮುರಳಿ ರವರು ನವೆಂಬರ್ 8 ರಂದು ನೋಟುಗಳ ನಿಷೇಧ ಬಗ್ಗೆ ಮಾಡಿದ್ದ ಮೋದಿ ಪ್ರಕಟಣೆ ಪೂರ್ವ ಮುದ್ರಿತ (ರಿ ರಿಕಾರ್ಡೆಡ್) ಮತ್ತು ಲೈವ್ ಅಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅವರು ಪ್ರಧಾನಿ ಮೋದಿ ಲೈವ್ ಪ್ರಸಾರ ತನ್ನ ರೆಕಾರ್ಡ್ ಪ್ರಕಟಣೆಯ ನೇರ ಪ್ರಸಾರ ವೆಂದು ನಿರೂಪಿಸುವ ಮೂಲಕ ಭಾರತದ ಜನರಿಗೆ ಮೋಸ ಮಾಡಿದ್ದಾರೆಂದು ಪತ್ರಕರ್ತ ಸತ್ಯೇಂದ್ರ ಮುರಳಿ ಆರೋಪಿಸಿದ್ದಾರೆ.

ನವೆಂಬರ್ 8, 2016 ರ ಸಂಜೆ ಬಹಿರಂಗವದ ಸಂದೇಶ ಹಲವಾರು ದಿನಗಳ ಹಿಂದೆ ಪ್ರಧಾನಿಯವರು ಈ ಸಂದೇಶವನ್ನು ಮುಂಚೆನೇ ಬರೆಯಲ್ಪಟ್ಟಲಾಗಿದೆ ಎಂದು ಆರೋಪಿಸಿದ್ದಾರೆ.

ಪತ್ರಕರ್ತ ಮತ್ತು ಸಂಶೋಧಕ ಸತ್ಯೇಂದ್ರ ಮುರಳಿ, ಮಾಹಿತಿ ಹಕ್ಕು (PMOIN / ಆರ್ / 2016/53416) ಬಗ್ಗೆ ಕೇಳಿದಾಗ, ಸಚಿವಾಲಯ ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಸಚಿವಾಲಯದ ಮಾಹಿತಿ ಪ್ರಕಾರ ಸಂದೇಶವನ್ನು ಫಾರ್ವರ್ಡ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಮತ್ತು ಪತ್ರಕರ್ತ ಸತ್ಯೇಂದ್ರ ಮುರಳಿ ಯವರು ತಮ್ಮ ಅರ್ಜಿಯನ್ನು ಹಿಂಪಡೆಯುವುದು ಅಗತ್ಯ ಎಂದು ಪ್ರತಿಪಾದಿಸಿತು.