ಮೋದಿ ಅವರ ಪ್ರಭಾವಕ್ಕೆ ಬೆರಗಾಗಿ ಭಾರತದ ಉಡುಪು ತೊಟ್ಟ ಅಂತಾರಾಷ್ಟ್ರೀಯ ನಾಯಕರು

0
1433

ಮೋದಿ ಎಫೆಕ್ಟ್: ಖಾದಿ ನೆಹರೂ ಜಾಕೆಟ್ ರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬ್ರಿಕ್ಸ್ ನಾಯಕರು

ಭಾರತ ಗೋವಾದಲ್ಲಿ ಶನಿವಾರ ಆರಂಭವಾಗಿರುವ 8ನೇ ವಾರ್ಷಿಕ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನವನ್ನು ಮತ್ತಷ್ಟು ಏಕಾಂಗಿ ಮಾಡಲು ಹೊರಟಿದೆ.

ಬ್ರಿಕ್ಸ್-ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಾಯಕರು ಮಾತ್ರವಲ್ಲದೆ ಭೂತಾನ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಮಯನ್ಮಾರ್ ದೇಶಗಳ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದರು. ಸಭೆಯ ಇನ್ನೊಂದು ವಿಶೇಷವೇನೆಂದರೆ ಬ್ರಿಕ್ಸ್ ನಾಯಕರು ಖಾದಿ ನೆಹರೂ ಜಾಕೆಟ್ ರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದು ಮೋದಿ ಎಫೆಕ್ಟ್ ಅಂತ ಕೂಡ ಹೇಳಬಹುದು.

&copy: http://economictimes.indiatimes.com/
© economictimes.indiatimes.com

ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಬ್ರೆಝಿಲ್ ಹಾಗೂ ದಕ್ಷಿಣ ಆಫ್ರಿಕಾದ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಭಯೋತ್ಪಾದನೆ, ವ್ಯಾಪಾರ ವಹಿವಾಟು ಮತ್ತು ಹೂಡಿಕೆಯ ವಿಷಯಗಳ ಬಗ್ಗೆ ಚರ್ಚೆ ನಾಡಿಸಲಾಗಿತ್ತು. ಕಳೆದ ತಿಂಗಳು ಪಾಕಿಸ್ತಾನ ಮೂಲದ ಭಯೋತ್ಪಾದಕರು ಕಾಶ್ಮೀರದ ಉರಿಯಲ್ಲಿ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಉಗ್ರಗಾಮಿಗಳನ್ನು ಹತ್ತಿಕ್ಕಲು ಭಾರತ ಮತ್ತಷ್ಟು ಒತ್ತು ನೀಡುತ್ತಿದೆ. ಉಗ್ರಗಾಮಿಗಳಿಗೆ ಪ್ರೋತ್ಸಾಹ ಮತ್ತು ಸುರಕ್ಷಿತ ತಾಣವಾಗಿರುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯ ಮಾಡುತ್ತಿದೆ.