ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ; 2019 ರ ಬಜೆಟ್​ನಲ್ಲಿ ರೈತರಿಗೆ ಸಿಗಲಿದೆ ಬಂಪರ್ ಕೊಡುಗೆ..

0
417

ರೈತರ ಮೇಲಿನ ಕಾಳಜಿಯೋ ಇಲ್ಲ ಚುನಾವಣಾ ಗಿಮಿಕ್ಕೋ ಗೊತ್ತಿಲ್ಲ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ನರೇಂದ್ರ ಮೋದಿ ಸರ್ಕಾರ ರೈತರ ಮತಗಳನ್ನು ಸೆಳೆಯಲು ವಿವಿದ ರೀತಿಯ ಯೋಜನೆಗಳನ್ನು ಮತ್ತು ಪ್ಯಾಕೇಜ್ ಗಳನ್ನು ನೀಡಿ ದೇಶದ ರೈತರ ಮನಗೆಲ್ಲುತ್ತಿದೆ. ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಶೇಷ ಯೋಜನೆಯನ್ನು ರೂಪಿಸಿದ್ದು, ಶೀಘ್ರದಲ್ಲೇ ಇದನ್ನು ಘೋಷಿಸಿಕೊಳ್ಳಲಿದೆ ಎನ್ನಲಾಗಿದೆ.

Also read: ಇನ್ಮುಂದೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ; ಶಿಕ್ಷಣ ಇಲಾಖೆಯಿಂದ ಆದೇಶ..

ಏನಿದೆ 2019 ಬಜೆಟ್​ನಲ್ಲಿ?

ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಯೋಜನೆಯನ್ನು ಘೋಷಿಸಲಿದ್ದು ಫೆಬ್ರವರಿ 1 ರ ಬಜೆಟ್​ಗೂ ಮೊದಲೇ ಯೋಜನೆಯನ್ನು ಪರಿಚಯಿಸಲಿದ್ದು, ಇದರ ಸಂಪೂರ್ಣ ಕೊಡುಗೆಗಳ ಪ್ಯಾಕೇಜನ್ನು ಬಜೆಟ್​ ವೇಳೆ ಮಂಡಿಸಲಾಗುತ್ತದೆ ಎನ್ನಲಾಗಿದೆ. ಈ ಹೊಸ ಯೋಜನೆಯ ಸುದ್ದಿ ಮಾದ್ಯಮಗಳಲ್ಲಿ ಹರಿದಾಡುತ್ತಿದು ಹೊಸ ಯೋಜನೆಯಲ್ಲಿ ಮೋದಿಯವರು ಯಾವ ಯೋಜನೆ ತರಲಿದ್ದಾರೆ ಎಂದು ರೈತರು ಕಾತುರದಲ್ಲಿದ್ದಾರೆ.

ಹೊಸ ಯೋಜನೆಯ ವಿಶೇಷತೆಗಳೇನು?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತರುತ್ತಿರುವ ಈ ಪ್ಯಾಕೇಜ್ ಜಾರಿಯಾದರೆ ರೈತರಿಗೆ ಕೇಂದ್ರದಿಂದ 2 ಲಕ್ಷದವರೆಗೆ ನಿರ್ದಿಷ್ಟ ಪ್ರಮಾಣದ ಸಾಲ ಸಿಗಲಿದೆ. ಈ ಸಾಲದ ಹಣವನ್ನು ನೇರ ನಗದು ವರ್ಗಾವಣೆಯ ಅಡಿಯಲ್ಲಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇದೊಂದು ದೇಶದ ರೈತರ ಸ್ಥಿತಿಯನ್ನು ಸುಧಾರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ ಎನ್ನಲಾಗಿದೆ. ಸರ್ಕಾರದ ಈ ಯೋಜನೆಗೆ ನೀತಿ ಆಯೋಗ, ಕೃಷಿ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದಿಂದ ಗ್ರೀನ್​ ಸಿಗ್ನಲ್ ಸಿಕ್ಕಿದೆ. ಒಡಿಸ್ಸಾ ಮತ್ತು ತೆಲಂಗಾಣದಲ್ಲಿ ಇಂತಹದೊಂದು ಸಾಲದ ಯೋಜನೆಯಿದ್ದು, ಇಲ್ಲಿ ಸರ್ಕಾರವೇ ನೇರವಾಗಿ ರೈತರ ಖಾತೆಗೆ ಸಾಲದ ಮೊತ್ತವನ್ನು ನೀಡುತ್ತದೆ. ಇದೇ ಮಾದರಿಯಲ್ಲಿ ಮೋದಿ ಸರ್ಕಾರ ಕೂಡ ಹೊಸ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.

ರೈತರ ಮೇಲೆ ಇಷ್ಟೊಂದು ಕಾಳಜಿ ಯಾಕೆ?

ವಿರೋಧ ಪಕ್ಷಗಳು ಹೇಳುವ ಪ್ರಕಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ವಿಧಾನಸಭಾ ಚುನಾವಣಾ ಸೋಲಿನಿಂದ ಬಿಜೆಪಿ ಪಕ್ಷ ಎಚ್ಚೆತ್ತುಕೊಂಡಿದ್ದು, ಹೀಗಾಗಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ರೈತರ ಪರ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದರು. ಇದರಿಂದಾಗಿ ಬಿಜೆಪಿ ನಾಯಕರಿಂದಲೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರಕ್ಕೆ ಹೊರೆಯಲ್ಲವೇ?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಲ್ಲಿವರೆಗೂ ಆರ್ಥಿಕ ಹೊರೆಯಾಗದಂತೆ ಎಚ್ಚರಿಕೆಯಿಂದ ಆಡಳಿತ ನಡೆಸಿದೆ. ಆದರೆ ಮೆಗಾ ಪ್ಯಾಕೇಜ್​ ಘೋಷಣೆಯ ಬಳಿಕ ಇದರ ಪರಿಣಾಮ ಸಹ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಒಂದು ಅಂಕಿ ಅಂಶದ ಪ್ರಕಾರ ಹೊಸ ಯೋಜನೆಯಿಂದ ಸರ್ಕಾರದ ಮೇಲೆ 1.5 ರಿಂದ 2 ಲಕ್ಷ ಕೋಟಿ ರೂ. ಹೊರೆಬೀಳ್ಳುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರ್ಕಾರವು ರಿಸರ್ವ್​ ಬ್ಯಾಂಕ್​ನಿಂದ 50 ಸಾವಿರ ಕೋಟಿ ಹೆಚ್ಚುವರಿ ಬೋನಸ್​ ಮೊತ್ತದ ನಿರೀಕ್ಷೆಯಲ್ಲಿದ್ದು, ಈ ಮೂಲಕ ರೈತರ ಪ್ಯಾಕೇಜನ್ನು ಜಾರಿಗೊಳಿಸಲು ಯೋಜನೆ ಹಾಕಿಕೊಂಡಿದೆ. ಎಂದು ತಿಳಿದು ಬಂದಿದೆ.