ಕೇಂದ್ರ ಸರ್ಕಾರದಿಂದ ಮತ್ತೊಂದು ಬಂಪರ್? ನಿರುದ್ಯೋಗಿಗಳಿಗೆ, ರೈತರಿಗೆ ವಿಶೇಷ ಭತ್ಯೆ..

0
498

ಕೇಂದ್ರ ಸರ್ಕಾರಕ್ಕೆ ನಿರುದ್ಯೋಗಿಗಳು ಮತ್ತು ರೈತರ ಮೇಲಿನ ಕಾಳಜಿಯೋ ಇಲ್ಲ ಚುನಾವಣಾ ಗಿಮಿಕ್ಕೋ ಗೊತ್ತಿಲ್ಲ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ನರೇಂದ್ರ ಮೋದಿ ಸರ್ಕಾರ ಜನರ ಮತಗಳನ್ನು ಸೆಳೆಯಲು ವಿವಿದ ರೀತಿಯ ಯೋಜನೆಗಳನ್ನು ಮತ್ತು ಪ್ಯಾಕೇಜ್ ಗಳನ್ನು ನೀಡಿ ದೇಶದ ರೈತರ, ನಿರುದ್ಯೋಗಿಗಳ ಮನಗೆಲ್ಲುತ್ತಿದೆ. ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಶೇಷ ಯೋಜನೆಯನ್ನು ರೂಪಿಸಿದ್ದು, ಶೀಘ್ರದಲ್ಲೇ ಇದನ್ನು ಘೋಷಿಸಿಕೊಳ್ಳಲಿದೆ ಎನ್ನಲಾಗಿದೆ.

ಹೌದು 2019 ರ ಬಜಟ್ ನಲ್ಲಿ ಮಧ್ಯಮ ವರ್ಗದ ಕೃಷಿಕರು, ಕೃಷಿ ಕಾರ್ಮಿಕರು, ನಗರ ಪ್ರದೇಶಗಳ ಅಸಂಘಟಿತ ಕಾರ್ಮಿಕರು, ನಿರುದ್ಯೋಗಿ ಯುವಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಬಂಪರ್ ಮತ್ತು ನಿರುದ್ಯೋಗಿ ಯುವಕರಿಗೆ ಭತ್ಯೆ, ಖಾಸಗಿ ಕಂಪನಿಗಳಲ್ಲೂ ಮೀಸಲು ವ್ಯವಸ್ಥೆ ಮುಂತಾದ ಯೋಜನೆಗಳನ್ನು ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಈ ಘೋಷಣೆಗಳು ಒಂದೊಂದಾಗಿ ಪ್ರಕಟವಾಗಲಿವೆ ಎಂದು ಮೂಲಗಳು ತಿಳಿಸಿವೆ.

ಜ.30ರಿಂದ ಅಧಿವೇಶನ ನಡೆಯಲಿದ್ದು, ಫೆ.13ಕ್ಕೆ ಮುಕ್ತಾ ಯಗೊಳ್ಳಲಿದೆ. ಫೆ.೧ರ ಮಧ್ಯಂತರ ಬಜೆಟ್‌ಗೂ ಮುನ್ನ ಮತ್ತು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಯೋಜನೆಗಳು ಪ್ರಕಟವಾಗುವ ಸಾಧ್ಯತೆಯಿದೆ. ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟಿಸುವ ನಿರೀಕ್ಷೆಯಿದೆ. ಹೀಗಾಗಿ ಅದಕ್ಕೂ ಮುನ್ನ ಸಂಕಷ್ಟದಲ್ಲಿರುವ ಬೇರೆ ಬೇರೆ ವಲಯದ ಜನರಿಗೆ ಪ್ರತ್ಯೇಕವಾಗಿ ಬಂಪರ್ ಯೋಜನೆಗಳು ಪ್ರಕಟವಾಗಲಿವೆ. ಬಡ ವರ್ಗದವರಿಗಾಗಿ ರೂಪಿಸುವ ಕೆಲ ಯೋಜನೆಗಳನ್ನು ತಕ್ಷಣವೇ ಅನುಷ್ಠಾನ ಮಾಡಲಾಗುತ್ತದೆ. ಅಲ್ಲದೆ, ಇನ್ನಿ ತರ ಕೆಲ ಯೋಜನೆಗಳಿಗೆ ಕಾಯ್ದೆ ರೂಪಿ ಸುವ ಅಗತ್ಯವಿದ್ದು, ಅವು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ಬರಬಹುದು ಎನ್ನಲಾಗಿದೆ.

ಅಷ್ಟೇ ಅಲ್ಲದೆ ಮಿಸಲಾತಿಗೂ ಸಂಬಧಪಟ್ಟಂತೆ ಒಂದು ಮಹತ್ವದ ಯೋಜನೆಯನ್ನು ಸರ್ಕಾರಿ ನೌಕರಿ ಹಾಗೂ ಶಿಕ್ಷಣದಲ್ಲಿ ಸಾಮಾನ್ಯ ವರ್ಗದವರಿಗೆ ಶೇ.10 ಮೀಸಲನ್ನು ಈಗಾಗಲೇ ಸರ್ಕಾರ ಜಾರಿಗೊಳಿಸಿದ್ದು, ಚುನಾವಣೆ ಗೂ ಮುನ್ನ ಖಾಸಗಿ ಕಂಪನಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸಾಮಾನ್ಯ ವರ್ಗದ ಬಡವರಿಗೆ ಶೇ.೧೦ರಷ್ಟು ಮೀಸಲು ಜಾರಿಗೊಳಿಸುವ ಸಾಧ್ಯತೆಯಿದೆ. ಈ ಎಲ್ಲ ಯೋಜನೆಗಳಿಗಾಗಿ ಕೇಂದ್ರದ ಉನ್ನತ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ರೈತರಿಗೆ ವಿಶೇಷ ಪ್ಯಾಕೇಜ್:

ಈ ಹಿಂದೆ ರೈತರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿರುವ ಪ್ಯಾಕೇಜ್ ಜಾರಿಯಾದರೆ ರೈತರಿಗೆ ಕೇಂದ್ರದಿಂದ 2 ಲಕ್ಷದವರೆಗೆ ನಿರ್ದಿಷ್ಟ ಪ್ರಮಾಣದ ಸಾಲ ಸಿಗಲಿದೆ. ಈ ಸಾಲದ ಹಣವನ್ನು ನೇರ ನಗದು ವರ್ಗಾವಣೆಯ ಅಡಿಯಲ್ಲಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇದೊಂದು ದೇಶದ ರೈತರ ಸ್ಥಿತಿಯನ್ನು ಸುಧಾರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ ಎನ್ನಲಾಗಿದೆ. ಸರ್ಕಾರದ ಈ ಯೋಜನೆಗೆ ನೀತಿ ಆಯೋಗ, ಕೃಷಿ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದಿಂದ ಗ್ರೀನ್​ ಸಿಗ್ನಲ್ ಸಿಕ್ಕಿದೆ. ಒಡಿಸ್ಸಾ ಮತ್ತು ತೆಲಂಗಾಣದಲ್ಲಿ ಇಂತಹದೊಂದು ಸಾಲದ ಯೋಜನೆಯಿದ್ದು, ಇಲ್ಲಿ ಸರ್ಕಾರವೇ ನೇರವಾಗಿ ರೈತರ ಖಾತೆಗೆ ಸಾಲದ ಮೊತ್ತವನ್ನು ನೀಡುತ್ತದೆ. ಇದೇ ಮಾದರಿಯಲ್ಲಿ ಮೋದಿ ಸರ್ಕಾರ ಕೂಡ ಹೊಸ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.

Also read: ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್-ಗಳು ಇರೋದಿಲ್ಲ, ಹಾಗಂತ ಖುಷಿ ಪಡಬೇಡಿ ಉಚಿತ ಸಂಚಾರ ಇರೋಲ್ಲ, ಹೊಸ ರೀತಿ ದುಡ್ಡು ತಗೋತಾರೆ!!