ಕ್ಯಾನ್ಸರ್ ಖಾಯಿಲೆಯ ಮಾತ್ರೆಗಳು ತುಂಬಾ ದುಬಾರಿ, ಬಡವರಿಗೆ ನೆರವಾಗಲು ಮೋದಿ ಸರ್ಕಾರ 390 ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿದೆ!!

0
1117

ಆರ್ಥಿಕವಾಗಿ ದುರ್ಬಲವಾದ ಕ್ಯಾನ್ಸರ್ ರೋಗಿಗಳಿಗೆ ಸರಿಯಾದ ಔಷಧಿ ನೀಡುವ ಉದ್ದೇಶದಿಂದ. ಕೇಂದ್ರ ಸರ್ಕಾರವು 390 ಕ್ಯಾನ್ಸರ್-ವಿರೋಧಿ ಔಷಧಿಗಳ ಬೆಲೆಗಳಲ್ಲಿ ಗರಿಷ್ಠ 87 ರಷ್ಟು ಪ್ರಮಾಣದ ಕಡಿತವನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಮಾರ್ಚ್ 8 ರಿಂದ ಆಸ್ಪತ್ರೆಗಳು ಮತ್ತು ಔಷಧಿ ಕೇಂದ್ರಗಳು ಹೊಸ ಬೆಲೆಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

Also read: ನರೇಂದ್ರ ಮೋದಿಗೆ ಮತ್ತೆ ಗೆಲುವಿನ ಸುವರ್ಣ ಕಿರೀಟ; ಭವಿಷ್ಯ ನುಡಿದ ಕೊಡಿಹಳ್ಳಿ ಮಠದ ಶ್ರೀಗಳು..

ಹೌದು ಭಾರತದಲ್ಲಿ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುವ ಸರ್ಕಾರಿ ನಿಯಂತ್ರಕ ಸಂಸ್ಥೆ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ 390 ಔಷಧಿಗಳ ಪಟ್ಟಿಯನ್ನು ತನ್ನ ವೆಬ್ಸೈಟ್ 87% ಕಡಿತ ಗೊಳಿಸಿದ ಬಗ್ಗೆ ಮಾಹಿತಿ ನೀಡಿದೆ. ಅದರಂತೆ 38 ಬ್ರಾಂಡ್ -ಗಳ ಬೆಲೆ 75%, ಮತ್ತು ಅದಕ್ಕಿಂತ ಹೆಚ್ಚಿನ 124 ಬ್ರಾಂಡ್-ಗಳ ಮೇಲೆ 50 ರಿಂದ 75% ಕಡಿಮೆ ಮಾಡಿದ ಬಗ್ಗೆ ಮಾಹಿತಿ ನೀಡಿದೆ. ಇನ್ನೂ 42 ಔಷಧಿಗಳ ಮೇಲೆ 30% ರಷ್ಟು ವ್ಯಾಪಾರದ ಅಂಚನ್ನು ಇರಿಸಿದೆ. ಮತ್ತು ಉತ್ಪಾದನಾ ಪರಿಮಾಣದ ಮೇಲೆ ರಾಜಿ ಮಾಡಿಕೊಳ್ಳಲು ತಯಾರಕರ ಬಳಿ ಮಾತುಕತೆ ನಡೆಸಿದೆ.

ಈ ಹಿಂದೆ ಒಂದು ವಾರದ ಹಿಂದಷ್ಟೇ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸಲಾಗುವ 42 ಔಷಧಗಳ ಬೆಲೆಯನ್ನು ಕಡಿಮೆ ಮಾಡಿ, ಉತ್ಪಾದಕರಿಗೆ ಶೇ. 30ರಷ್ಟು ಮಾರ್ಜಿನ್‌ ನಿಗದಿಸಿತ್ತು. ಬೆಲೆ ಇಳಿಕೆಯಿಂದ ದೇಶದ ಕ್ಯಾನ್ಸರ್​ ರೋಗಿಗಳಿಗೆ 800 ಕೋಟಿ ಉಳಿತಾಯವಾಗಲಿದೆ. ಸದ್ಯ ದೇಶದಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಚಿಕಿತ್ಸೆಗಳಿಗೆ 426 ಔಷಧಗಳನ್ನು ಬಳಸಲಾಗುತ್ತಿದ್ದು, ಈ ಬೆಲೆ ನಿಯಂತ್ರಣದಿಂದಾಗಿ ಶೇ. 91ರಷ್ಟು ಔಷಧಗಳ ಬೆಲೆ ತಗ್ಗಿದಂತಾಗಿದೆ. ಈ ನೂತನ ಆದೇಶವನ್ನು ಕೂಡಲೇ ಜಾರಿಗೆ ತರುವಂತೆ ಎಲ್ಲ ಆಸ್ಪತ್ರೆ, ಔಷಧ ವಿತರಕ ಮತ್ತು ತಯಾರಕರಿಗೆ ಸೂಚಿಸಲಾಗಿದೆ.

Also read: ಪೌರ ಕಾರ್ಮಿಕರ ಕಾಲು ತೊಳೆದಿದ್ದು ಪಬ್ಲಿಸಿಟಿ ಸ್ಟಂಟ್ ಅಂತ ಹೇಳಿದವರಿಗೆ ಇದನ್ನು ತೋರಿಸಿ, ಪೌರ ಕಾರ್ಮಿಕರಿಗೆ ಮೋದಿ ತಮ್ಮ ಸ್ವಂತ ಉಳಿತಾಯದಿಂದ 21 ಲಕ್ಷ ದೇಣಿಗೆ ನೀಡಿ ಅವರು ಮಹಾನ್ ನಾಯಕ ಅನ್ನೋದನ್ನ ಸಾಬೀತು ಮಾಡಿದ್ದಾರೆ!

2019ರ ಫೆ.27ರಂದು 42 ಕ್ಯಾನ್ಸರ್​ ನಿವಾರಕ ಔಷಧಗಳನ್ನು ಸರ್ಕಾರ ಶೇ.30 ವ್ಯಾಪಾರ ಲಾಭದ ಮಿತಿಗೆ ಒಳಪಡಿಸಿತ್ತು. ವ್ಯಾಪಾರ ಲಾಭದ ಸೂತ್ರವನ್ನು ಆಧರಿಸಿ ಒಟ್ಟು 426 ಔಷಧಗಳ ಪೈಕಿ 390 ಬ್ರ್ಯಾಂಡ್​ಗಳ ಬೆಲೆಯನ್ನು ಕಡಿಮೆ ಮಾಡುವಂತೆ ಸರ್ಕಾರ ಉತ್ಪಾದಕರಿಗೆ ಸೂಚಿಸಿತ್ತು. ಅದರಂತೆ ಅವರೆಲ್ಲರೂ ತಮ್ಮ ಬ್ರ್ಯಾಂಡ್​ಗಳ ಬೆಲೆ ಕಡಿಮೆ ಮಾಡಿದ್ದಾರೆ. ಯಾವೆಲ್ಲ ಬ್ರ್ಯಾಂಡ್​ಗಳ ಬೆಲೆಗಳು ಪರಿಷ್ಕೃತವಾಗಿವೆ ಎಂಬ ಸಂಪೂರ್ಣ ವಿವರವನ್ನು nppaindia.nic.in ವೆಬ್​ಸೈಟ್​ನಿಂದ ಪಡೆದುಕೊಳ್ಳಬಹುದು.

ಈ ನಿರ್ದೇಶನದಿಂದ ದೇಶದ ಒಟ್ಟು 22 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಈ ಕ್ರಮದಿಂದ ನೆರವಾಗಲಿದೆ. 38 ಔಷಧಗಳ ಬೆಲೆ ಶೇ. 75ರಷ್ಟು, 124 ಔಷಧಗಳ ಬೆಲೆ ಶೇ. 50ರಿಂದ ಶೇ. 75ರವರೆಗೆ, 121 ಔಷಧಗಳ ಬೆಲೆಯಲ್ಲಿ ಶೇ. 25ರಿಂದ ಶೇ. 50ಕ್ಕೆ ಇಳಿದಂತಾಗಿದೆ. ಎಂದು ತಿಳಿಸಿತ್ತು ಆದಾದ ನಂತರ ಬಾರಿ ಪ್ರಮಾಣದಲ್ಲಿ ಔಷಧಿಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ದೇಶಾದ್ಯಂತ ಇರುವ 22 ಲಕ್ಷ ಕ್ಯಾನ್ಸರ್​ ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ಇವರೆಲ್ಲರಿಂದ ವಾರ್ಷಿಕವಾಗಿ ಒಟ್ಟು 800 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

Also read: ಎಲ್ಲಾ ನೌಕರರಿಗೆ ಸಿಹಿ ಸುದ್ದಿ, ಪ್ರತಿ ತಿಂಗಳು ನೀಮ್ಮ ಸಂಬಳದಲ್ಲಿ ಕಟ್ ಆಗೋ ಪಿ.ಎಫ್. ಗೆ ಇನ್ಮೇಲಿಂದ ಜಾಸ್ತಿ ಬಡ್ಡಿ ಬರುತ್ತೆ, ಇದು ಮೋದಿ ಗಿಫ್ಟ್!!!

ಇದಷ್ಟೇ ಅಲ್ಲದೆ ಭವಿಷ್ಯದಲ್ಲಿ ಕ್ಯಾನ್ಸರ್ ಔಷಧಿಗಳನ್ನು ಹೊರತುಪಡಿಸಿ ಇತರ ಮಾರಣಾಂತಿಕ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳು ಕುಸಿಯುತ್ತೆವೆ ಇದರಿಂದ ನಾಗರಿಕರ ಎಲ್ಲಾ ವಿಭಾಗಗಳಿಗೂ ಅನುಕೂಲವಾಗಲಿದೆ. ಎಂದು ತಿಳಿಸಿದೆ.