ಮತ್ತೆ ಸರ್ಕಾರಿ ಸ್ವಾಮ್ಯದ 10 ಪ್ರಮುಖ ಬ್ಯಾಂಕುಗಳ ವಿಲೀನ ಮಾಡಿದ ಕೇಂದ್ರ ಸರ್ಕಾರ, ಗ್ರಾಹಕರ ಮೇಲಾಗುವ ಪರಿಣಾಮಗಳೇನು?

0
394

ಹಲವು ದಿನಗಳಿಂದ ವಿವಾದ ಸೃಷ್ಟಿ ಮಾಡಿದ ಬ್ಯಾಂಕ್ ವಿಲೀನ ಮತ್ತೆ ಮುಂದುವರೆದಿದ್ದು ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅದರಂತೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್​ ಮತ್ತು ಯುನೈಟೆಡ್​ ಬ್ಯಾಂಕ್​ ದೊಡ್ಡ ಬ್ಯಾಂಕ್​ಗಳು ಸೇರಿ 27 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು 12 ಬ್ಯಾಂಕುಗಳಲ್ಲಿ ವಿಲೀನ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಶುಕ್ರವಾರ ಘೋಷಿಸಿದ್ದಾರೆ.

ಹೌದು ಈ ಹಿಂದೆ ಕೇಂದ್ರ ಸರಕಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಅನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜೊತೆ ವಿಲೀನ ಮಾಡಿತ್ತು. ಎರಡನೇ ಸುತ್ತಿನಲ್ಲಿ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ನ್ನು ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳಿಸಿತ್ತು. ಇದೀಗ ಮೂರನೇ ಸುತ್ತಿನಲ್ಲಿ ಹಲವು ಬ್ಯಾಂಕ್‌ ಗಳ ವಿಲೀನವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪಂಜಾಬ್​ ನ್ಯಾಷನಲ್​ ಬ್ಯಾಂಕ್, ಓರಿಯಂಟಲ್​ ಬ್ಯಾಂಕ್​ ಆಫ್ ಕಾಮರ್ಸ್​ ಮತ್ತು ಯುನೈಟೆಡ್​ ಬ್ಯಾಂಕ್​ಅನ್ನು ವಿಲೀನ ಮಾಡಲಾಗಿದೆ.

ಕೆನರಾ ಬ್ಯಾಂಕ್​ ಮತ್ತು ಸಿಂಡಿಕೇಟ್​ ಬ್ಯಾಂಕ್​ ಒಂದಾಗಿವೆ ಹಾಗೂ ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ, ಆಂಧ್ರಾ ಬ್ಯಾಂಕ್​ ಮತ್ತು ಕಾರ್ಪೊರೆಷನ್​ ಬ್ಯಾಂಕ್​ ಗಳು ವಿಲೀನವಾಗಿವೆ ಬ್ಯಾಂಕ್​ ಆಫ್​ ಇಂಡಿಯಾ ಮತ್ತು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ ರಾಷ್ಟ್ರೀಯ ಸಮಕ್ಷಮದಲ್ಲಿ ಮುಂದುವರೆಯಲಿದೆ. ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​, ಯುಸಿಒ ಬ್ಯಾಂಕ್​, ಬ್ಯಾಂಕ್​ ಆಫ್​ ಮಹಾರಾಷ್ಟ್ರ ಮತ್ತು ಪಂಜಾಬ್​, ಸಿಂಧ್​ ಬ್ಯಾಂಕ್​ಗಳು ಪ್ರಾದೇಶಿಕ ಉಪಸ್ಥಿತಿಲ್ಲಿ ಮುಂದುವರೆಯಲಿವೆ ಎಂದು ಹೇಳಿದರು.

ಅದರಂತೆ ಮೂರು ಬ್ಯಾಂಕುಗಳ ವಿಲೀನದೊಂದಿಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ನಂತರ 17.95 ಲಕ್ಷ ಕೋಟಿ ವ್ಯವಹಾರ, 11,437 ಶಾಖೆಗಳೊಂದಿಗೆ ಭಾರತದ ಅತಿದೊಡ್ಡ ಎರಡನೇ ಬ್ಯಾಂಕ್​ ಆಗಿ ರೂಪುಗೊಳ್ಳಲಿದೆ. ಅಲಹಾಬಾದ್​ ಬ್ಯಾಂಕ್​, ಇಂಡಿಯಾ ಬ್ಯಾಂಕ್​ ವಿಲೀನದಿಂದ ಇದು ಸಾರ್ವಜನಿಕ ಬ್ಯಾಂಕಿಂಗ್​ ವಲಯದಲ್ಲಿ ಏಳನೇ ದೊಡ್ಡ ವಹಿವಾಟು ಹೊಂದಲಿದೆ. ಇದರ ವಹಿವಾಟು 8.08 ಲಕ್ಷ ಕೋಟಿ ಆಗಲಿದೆ. ಯೂನಿಯನ್​ ಬ್ಯಾಂಕ್​ ಆಫ್ ಇಂಡಿಯಾವನ್ನು ಆಂಧ್ರಾ ಬ್ಯಾಂಕ್​ ಮತ್ತು ಕಾರ್ಪೋರೆಷನ್​ ಬ್ಯಾಂಕ್​ನೊಂದಿಗೆ ವಿಲೀನ ಮಾಡಿರುವುದರಿಂದ ಐದನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್​ ಆಗಿದೆ.

ಗ್ರಾಹಕರ ಮೇಲಾಗುವ ಪರಿಣಾಮ ಏನು?

ಬ್ಯಾಂಕುಗಳ ವಿಲೀನದ ನಂತರ ಆಯಾ ಬ್ಯಾಂಕುಗಳ ಗ್ರಾಹಕರ ಮೇಲಾಗುವ ಪರಿಣಾಮ, ಅರ್ಥವ್ಯವಸ್ಥೆ ಮೇಲೆ ಅಥವಾ ಉದ್ಯೋಗಿಗಳ ಮೇಲಾಗುವ ಪರಿಣಾಮಗಳೇನು ಎಂಬುದರ ಬಗ್ಗೆ ಗ್ರಾಹಕರಲ್ಲಿ ಗೊಂದಲಗಳು ಮೂಡಿವೆ, ಅದರಂತೆ ವಿವಿಧ ಬ್ಯಾಂಕುಗಳು ವಿಲೀನಗೊಂಡಂತೆ ನಿಮ್ಮ ಚೆಕ್ ಪುಸ್ತಕ, ಡೆಬಿಟ್/ಕ್ರೆಡಿಟ್ ಕಾರ್ಡ್ಗಳನ್ನು ಬದಲಾಯಿಸ ಬೇಕಾಗುತ್ತೆ. ಅಸ್ತಿತ್ವದಲ್ಲಿರುವ ಚೆಕ್ ಪುಸ್ತಕಗಳು ಸ್ವಲ್ಪ ಸಮಯದವರೆಗೆ ಮಾನ್ಯವಾಗಿರಬಹುದು. ಅಂತಿಮವಾಗಿ ಅವುಗಳನ್ನು ವಿಲೀನಗೊಂಡ ಘಟಕದ ಚೆಕ್ ಪುಸ್ತಕಗಳೊಂದಿಗೆ ಬದಲಾಯಿಸಲಾಗುತ್ತದೆ. ಅಷ್ಟೇ ಅಲ್ಲದೆ ವಿಲೀನಗೊಂಡ ಬ್ಯಾಂಕ್ ನ ನಿರ್ಧಾರವನ್ನು ಅವಲಂಬಿಸಿ ಈಗ ನಿಮಗೆ ಹತ್ತಿರವಿರುವ/ದೂರದಲ್ಲಿರುವ ಒಂದು ಶಾಖೆ ಇರಬಹುದು. ನಿಮ್ಮ ಖಾತೆ ಸಂಖ್ಯೆ ತಕ್ಷಣ ಬದಲಾಗುವುದಿಲ್ಲ. ಆದರೆ ನಿಮ್ಮ ಬ್ಯಾಂಕ್ ಅನ್ನು ದೊಡ್ಡ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದ್ದರೆ, ಅಂತಿಮವಾಗಿ ಬದಲಾವಣೆಯಾಗಬಹುದು ಮತ್ತು ನಿಮಗೆ ಹೊಸ ಖಾತೆ ಸಂಖ್ಯೆ/ಗ್ರಾಹಕ ಐಡಿ ನೀಡಬಹುದು.

Also read: ರೈಲ್ವೆಗಳಲ್ಲಿ ಪ್ರಯಾಣಿಸುವರಿಗೆ ಬಂಪರ್‌ ಆಫರ್; ಈ ರೈಲುಗಳ ಟಿಕೆಟ್ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಣೆ..