ಮೋದಿ ನಿಜಕ್ಕೂ ಶೂ ಹಾಕಿಕೊಂಡು ಧರ್ಮಸ್ಥಳದ ದೇವಸ್ಥಾನದ ಒಳಗೆ ಹೋಗಿದ್ರಾ?? ಸುಳ್ಳು ಸುದ್ದಿ ಹಬ್ಬುತ್ತಿರುವುದೇಕೆ?? ನಿಜಾಂಶ ಏನು??

0
819

ಕೆಲ ದಿನಗಳ ಹಿಂದೆ ಸಿಎಂ ಮಂಗಳೂರು ಪ್ರವಾಸ ಬೆಳಿಸಿದ್ದರು. ಈ ವೇಳೆ ಸಿಎಂ ಮಾಂಸ ಆಹಾರ ಸೇವಿಸಿ, ಧರ್ಮಸ್ಥಳಕ್ಕೆ ಎಂಟ್ರಿ ನೀಡಿದ್ದರು ಎಂದು ವಿವಾದ ಸೃಷ್ಟಿಯಾಗಿತ್ತು. ಆದ್ರ ಬೆನ್ನೆಲ್ಲೆ ಮೋದಿಗೂ ಈ ವಿವಾದ ಬಿಟ್ಟಿಲ್ಲ. ಏನಪ್ಪ ಮೋದಿ ಅಂತಹದ್ದೇನು ಮಾಡಿದ್ರು. ಎಂಬ ಪ್ರಶ್ನೆ ಸಹಜ. ಹೌದು.. ಮೋದಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರವಾಸ ಬೆಳಿಸಿದ್ರು. ಈ ವೇಳೆ ಮೋದಿ ದೇವಸ್ಥಾನದಲ್ಲಿ ಚಪ್ಪಲಿಯನ್ನು ಹಾಕಿಕೊಂಡು ಹೋದ್ರು ಎಂದು ವಿವಾದವನ್ನು ಸೃಷ್ಟಿಸಲಾಗಿದೆ.

ಆದ್ರೆ ಮೋದಿ ಧರ್ಮಸ್ಥಳದ ದೇವಸ್ಥಾನದ ಮೆಟ್ಟಿಲ್ಲನ್ನು ಸಹ ಶೂ ಹಾಕಿಕೊಂಡು ಹತ್ತಿಲ್ಲ ಎನ್ನೋದಕ್ಕೆ ನಮ್ಮ ಬಳಿ ಚಿತ್ರಗಳು ಲಭ್ಯವಾಗಿವೆ. ಅದಕ್ಕೆ ಪೂರಕ ಎಂಬಂತೆ ಮೊದಲನೇ ಚಿತ್ರ ಇಲ್ಲಿ ನೋಡಿ ಮೋದಿ ಕಾರಿನಿಂದ ಇಳಿದ ಬಳಿಕ ಅಭಿಮಾನಿಗಳತ್ತ ಕೈ ಬೀಸಿದ್ರು. ಬಳಿಕ ದೇವಸ್ಥಾನದ ದ್ವಾರದಲ್ಲಿದ್ದ ವೀರೇಂದ್ರ ಹೆಗ್ಡೆರನ್ನು ಕಂಡು, ಅವರತ್ತ ಹೆಜ್ಜೆ ಹಾಕಿದ್ರು. ಈ ವೇಳೆ ಅವರು ಹಾಕಿಕೊಂಡ ಶೂ ಇಲ್ಲಿ ಸ್ವಷ್ಟವಾಗಿ ಕಾಣುತ್ತದೆ.

ನಂತರ ಮೋದಿ ದೇವಸ್ಥಾನದ ಎಡಭಾಗದಲ್ಲಿ ಚಪ್ಪಲಿ ಬಿಟ್ಟರು. ಇದೇ ಸ್ಥಳದಲ್ಲಿಯೇ ದೇವಸ್ಥಾನದ ಸಿಬ್ಬಂದಿ ಸಹ ತಮ್ಮ ಚಪ್ಪಲಿ ಬಿಡುತ್ತಾರೆ. ಆದ್ರೆ ಭಾನುವಾರ ಅವರಿಗಾಗಿ ಬೇರೆ ವ್ಯವಸ್ಥೆ ಕಲ್ಪಿಸಾಲಗಿತ್ತು. ಮೋದಿ ತಮಗೆ ನಿಗದಿಯಾದ ಸ್ಥಳದಲ್ಲಿ ಚಪ್ಪಲಿ ಬಿಟ್ಟು ಸ್ಟೆಪ್ಸ್​ ಹತ್ತಿದ್ರು. ಆಗ ಎಲ್ಲರತ್ತ ಕೈ ಮುಗಿದ್ರು. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಜೊತೆಗಿದ್ದರು.

ನಂತರ ದೇವಸ್ಥಾನದ ಶಿಷ್ಠಚಾರದಂತೆ ಮೋದಿ ಶೆರ್ಟ್​ ಬಿಚ್ಚಿ ಒಳಗೆ ಹೋದವರೆ ತಾವೇ ತಂದಿದ್ದ ಕೇಸರಿ ಬಣ್ಣದ ಶಾಲು ಹಾಕಿಕೊಂಡು ನಡೆದ್ರು. ಆಗ ದೇವಸ್ಥಾನದ ಸಿಬ್ಬಂದಿ ಶಾಲು ತೆಗೆದುಕೊಳ್ಳಿ ಎಂದು ತಿಳಿಸಿದಾಗ, ಬೇಡ ನಾನು ತಂದಿದ್ದೇನೆ ಎಂದ್ರು.

ಇನ್ನು ದೇವಸ್ಥಾನದ ಆವರಣದಲ್ಲಿ ಲಭ್ಯವಾದ ಚಿತ್ರಗಳಲ್ಲೂ ಮೋದಿ ಶೂ ಹಾಕದೆ ಇರುವ ಚಿತ್ರಗಳು ಲಭ್ಯವಾಗಿವೆ.

ಏನೇ ಆಗಲಿ ವಿವಾದಗಳಿಗೆ ತಣ್ಣೀರು ಹಾಕಿರುವ ಮೋದಿ ತಮ್ಮಲಿರುವ ದೈವ ಭಕ್ತಿ ಎಂತಹದ್ದು ಎಂಬುದನ್ನು ಸಾರಿದ್ದಾರೆ.