ಮೋದಿ ಜಾತಕದಲ್ಲಿ ಅಖಂಡ ಸಾಮ್ರಾಜ್ಯ ಯೋಗ; ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ..

0
319

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹೆಚ್ಚುತ್ತಿದೆ. ಈ ಸಲವೂ ಮೋದಿಯ ಅಧಿಕಾರಕ್ಕೆ ಬರುವುದು ಎಂದು ಹಲವು ಸಮೀಕ್ಷೆಗಳು ಮತ್ತು ಜೋತಿಷ್ಯಗಳು ತಿಳಿಸಿವೆ ಅದರಂತೆ ಇತ್ತ ಜ್ಯೋತಿಷಿಯೊಬ್ಬರು ಮುಂದಿನ ಸರ್ಕಾರ ಯಾರದ್ದು ಎಂದು ಭವಿಷ್ಯ ನುಡಿದ ಉಡುಪಿ ಜಿಲ್ಲೆ ಕಾಪುವಿನ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಪ್ರಧಾನಿ ನರೇಂದ್ರ ಮೋದಿಗೆ ಅಖಂಡ ಸಾಮ್ರಾಜ್ಯ ಯೋಗ ಇದೆ. ನರೇಂದ್ರ ಮೋದಿ ಛಲವಾದಿ ಮತ್ತು ಹಠವಾದಿ. ಅವರನ್ನು ಯಾವುದೇ ಹುದ್ದೆಯಿಂದ ಇಳಿಸಲು ಸಾಧ್ಯವಿಲ್ಲದಂತಹ ಯೋಗ ಅವರಿಗಿದೆ ಎಂದು ಹೇಳಿದ್ದಾರೆ.

Also read: ನರೇಂದ್ರ ಮೋದಿಗೆ ಮತ್ತೆ ಗೆಲುವಿನ ಸುವರ್ಣ ಕಿರೀಟ; ಭವಿಷ್ಯ ನುಡಿದ ಕೊಡಿಹಳ್ಳಿ ಮಠದ ಶ್ರೀಗಳು..

ಹೌದು ಪ್ರತಿವರ್ಷವೂ ಚಂದ್ರಮಾನ ಯುಗಾದಿ ಫಲ ಹೇಳುವ ಅವರು 2019 ರ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಸರ್ಕಾರ ಮಾಡೋದು ಖಚಿತ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಮೋದಿ ಜಾತಕದಲ್ಲಿ ಅಖಂಡ ಸಾಮ್ರಾಜ್ಯ ಯೋಗ ಇದೆ. ಜೊತೆಗೆ ಪರ್ವತ ಯೋಗ, ಗಜಕೇಸರಿಯೋಗದ ಭಾಗ್ಯವೂ ಇದೆ. ಹಾಗಾಗಿ ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹಾ ಘಟ್ ಬಂಧನದಲ್ಲಿ ಪ್ರಧಾನಿಯಾಗುವ ಯೋಗ ಯಾರಿಗೂ ಇದ್ದಂತಿಲ್ಲ. ಮೊದಲಾಗಿ ಅವರಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಹಲವರು ಆಕಾಂಕ್ಷಿಗಳಿದ್ದಾರೆ. ಘಟಬಂಧನದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಜಾತಕಫಲ ಹಾಗೂ ರಾಜಕೀಯ ವಾತಾವರಣ ಮೋದಿಗೆ ಅನುಕೂಲಕರವಾಗಿದೆ. ಎಂದು ಹೇಳಿದ್ದಾರೆ.

ಮೋದಿ ಸ್ವ-ಇಚ್ಛೆಯಿಂದ ನಿವೃತ್ತಿ ಆದ್ರೆ ಮಾತ್ರ:

Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?

ಈ ಚುನಾವಣೆಯಲ್ಲಿ ಮೋದಿಯನ್ನು ಏನೂ ಮಾಡಲು ಸಾಧ್ಯವಿಲ್ಲ. ನ್ಯಾಯಯುತವಾದ ಹಠ ಸಾಧನೆ ಮಾಡುವ ಗುಣ ಪ್ರಧಾನಿ ಮೋದಿಯಲ್ಲಿದೆ. ಮೋದಿಯವರಂತ ಜಾತಕ, ಘಟಬಂಧನದಲ್ಲಿ ಯಾರಲ್ಲೂ ಇಲ್ಲ. ನರೇಂದ್ರ ಮೋದಿಯವರದ್ದು ರಾಜ ಸನ್ಯಾಸ. ಸ್ವಾರ್ಥ ಇಲ್ಲದ, ದೇಶದ ಅಭಿವೃದ್ಧಿಗೆ ಹಠ ಸಾಧಿಸುವ ಗುಣ ಕಾಣಬಹುದು. ಕಳೆದ ನಾಲ್ಕು ದಶಕಗಳಿಂದ ದೇಶೋದ್ಧಾರದ ಹಠ ಸಾಧನೆಯ ಗುಣ ಕಾಪಾಡಿಕೊಂಡು ಬಂದಿರುವುದನ್ನು ಅವರ ಜಾತಕದಿಂದ ತಿಳಿಯಬಹುದು. ಚಾಣಕ್ಯ, ಕೃಷ್ಣರಂತೆ ತಾವೇ ಇಚ್ಛಿಸಿ ನಿರ್ಗಮಿಸುವವರೆಗೂ ಮೋದಿ ಆಡಳಿತ ಅಭಾದಿತ ಎಂದಿದ್ದಾರೆ. ವಿಪಕ್ಷಗಳ ಮುಖಂಡರು ಪುಲ್ವಾಮ ಘಟನೆ ಮತ್ತು ಪಾಕಿಸ್ತಾನದ ಕುರಿತಾಗಿ ಆಡುತ್ತಿರುವ ಮಾತುಗಳಿಂದಲೂ ಮೋದಿಗೆ ಅನುಕೂಲವಾಗಿದೆ. ಇದು ಪ್ರಕೃತಿ ಮೋದಿಗೆ ಕಲ್ಪಿಸಿದ ಅನುಕೂಲ ಎಂದು ಅಮ್ಮಣ್ಣಾಯ ಅಭಿಪ್ರಾಯಪಟ್ಟಿದ್ದಾರೆ.

72 ವರ್ಷಕ್ಕೊಮ್ಮೆ ನಡೆಯುವ ಮಹಾ ದುರಂತ ಈ ವರ್ಷ:

Also read: ಪ್ರಧಾನಿ ಮೋದಿಗೆ ಮತ್ತೊಂದು ಪ್ರಶಸ್ತಿ; ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಯುಎಇ ಅಧ್ಯಕ್ಷ ಝಾಯದ್ ಮೆಡಲ್’ ಘೋಷಣೆ..

ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳುವ ಪ್ರಕಾರ, ಮುಂದಿನ ಯುಗಾದಿಯ ಒಳಗೆ ಎರಡು ಪ್ರಮುಖ ಗ್ರಹಣಗಳು ಬರುತ್ತದೆ. 2019ರ ಜುಲೈ 26ಕ್ಕೆ ಖಂಡಗ್ರಾಸ ಚಂದ್ರಗ್ರಹಣ ನಡೆಯುತ್ತದೆ. ಡಿಸೆಂಬರ್, 26ಕ್ಕೆ ಸೂರ್ಯಗ್ರಹಣ ಬರುತ್ತದೆ, ಅಂದು ಸೂರ್ಯ ಸ್ವಲ್ಪವೇ ಕಾಣಿಸಿಕೊಂಡು ಸುತ್ತಲೂ ಕತ್ತಲಾಗುವಷ್ಟು ಈ ಗ್ರಹಣ ಪ್ರಬಲವಾಗಿರುತ್ತದೆ. ಈ ವಿಕಾರಿ ಸಂವತ್ಸರದ ಗ್ರಹಸ್ಥಿತಿಯನ್ನು ನೋಡಿದಾಗ 72 ವರ್ಷಕ್ಕೊಮ್ಮೆ ನಡೆಯುವ ಮಹಾ ದುರಂತ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಧನುರಾಶಿಯಲ್ಲಿ ಶನಿಕೇತು ಯೋಗ, ಸಪ್ತಮದಲ್ಲಿ ರಾಹು, ಕುಜನು ಶನಿಯನ್ನು ಎಂಟನೇ ದೃಷ್ಟಿಯಲ್ಲಿ ನೋಡುವುದರಿಂದ ಏಳು ದಶಕದಲ್ಲಿ ಒಮ್ಮೆ ಸಂಭವಿಸುವ ದುರಂತಕ್ಕೆ ಕಾರಣವಾಗಬಹುದು. ಈ ಹಿಂದೆ 1945-46 ಹಾಗೂ 1800 ರಲ್ಲಿ ಇಂತಹ ದುರಂತ ನಡೆದು ಜನಾಂಗ ನಾಶವಾಗಿದ್ದನ್ನೂ ನೆನಪಿಸಿದ್ದಾರೆ. ಜನರು ಸಹಬಾಳ್ವೆಯಿಂದ ಇರಬೇಕು ಅನ್ಯಾಯ ತೊರೆದು ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂದು ಸಂದೇಶ ತಿಳಿಸಿದ್ದಾರೆ