ಪ್ರಧಾನಿ ಮೋದಿ ಅವರ ಅಶ್ವಮೇಧದ ಕುದುರೆಯನ್ನು ನಾವು ರಾಜ್ಯದಲ್ಲಿ ಕಟ್ಟಿ ಹಾಕುತ್ತೇವೆ: ಕುಮಾರಸ್ವಾಮಿ

0
607

ಬೆಂಗಳೂರು:  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವೇ ಬೇರೆ, ಕರ್ನಾಟಕದ ಪರಿಸ್ಥಿತಿಯೇ ಬೇರೆ. ಮೋದಿ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದು ಜೆಡಿಎಸ್ ರಾಜ್ಯಾಧಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ ಸ್ವಾಮಿ ಅವರು, “ಉತ್ತರ ಪ್ರದೇಶ ಹಾಗೂ ರಾಜ್ಯದ ಚುನಾವಣಾ ಪರಿಸ್ಥಿತಿ ಗಳೆರಡೂ ಬೇರೆ ಬೇರೆಯಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಷಾ ಅವರ ಅಶ್ವಮೇಧ ಯಾಗವನ್ನು ತಡೆಯುವುದು ಜೆಡಿಎಸ್ನಿಂದ ಮಾತ್ರ ಸಾಧ್ಯ.  ಪಂಚರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ನಡೆದ ರಾಜಕೀಯ ತಂತ್ರ ಕರ್ನಾಟಕದಲ್ಲಿ ನಡೆಯುವುದಿಲ್ಲ. ಉತ್ತರ ಪ್ರದೇಶದ  10ವರ್ಷದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಅವರು ಕಿಡಿಕಾರಿದರು.

ಯುಪಿ ಗೆಲುವಿನ ತಂತ್ರ ಅನುಸರಿಸಿದ ಕುಮಾರಣ್ಣ, ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಳಗೊಂಡು 10 ಸಾವಿರ ವ್ಯಾಟ್ಸಪ್ ಗ್ರೂಪ್’ಗಳನ್ನು ರಚಿಸಲಾಗಿತ್ತು.

ಈಗ ಅದೇ ರೀತಿಯ ತಂತ್ರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಂದಾಗಿದ್ದಾರೆ. ಸಮಾಜಿಕ ಜಾಲತಾಣಗಳ ಮೂಲಕ ಜನರ ಜೊತೆ ಸಂಪರ್ಕ ವಿರುವ ಸಲುವಾಗಿ  ‘ನಮ್ಮ‌ ಕುಮಾರಣ್ಣ’ ವೆಬ್​​​​​ಸೈಟ್​​ಗೆ ಹೆಚ್ಡಿಕೆ ಚಾಲನೆ ನೀಡಿದರು. ವೆಟ್​​​ಸೈಟ್ ಮೂಲಕ ಜನರ ಅಹವಾಲು ಸ್ವೀಕರಿಸಿ, ಪ್ರತಿದಿನ 4 ಗಂಟೆಗಳ ಕಾಲ ಅವರೊಂದಿಗೆ ಚರ್ಚೆ ಮಾಡಿ ಅವರ ಸಮಸ್ಯೆಗಳನ್ನು  ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.

‘ನಮ್ಮ‌ಕುಮಾರಣ್ಣ’ ವೆಬ್’ಸೈಟ್, ಫೇಸ್’ಬುಕ್, ಟ್ವಿಟರ್ ಮೂಲಕ ಜನರ ಜೊತೆ ನೇರ ಸಂಪರ್ಕ ಸಾಧಿಸುತ್ತೇನೆ. ಸಭೆ ಸಮಾರಂಭಗಳಲ್ಲಿ ಮಾಡುವ ಭಾಷಣ ಸಹ ಈ ವೆಬ್’ಸೈಟ್’ಗೆ ಅಪ್’ಲೋಡ್ ಮಾಡುತ್ತೇನೆ.ಯಾರೂ ಬೇಕಾದರೂ ಇದರಿಂದ ನನ್ನ ಸಂಪರ್ಕ ಸಾಧಿಸಬಹುದು. ತಮ್ಮ ಸಮಸ್ಯೆ,ಚರ್ಚೆಗಳನ್ನು ಮಾಡಬಹುದು

ನಾನು ಮುಖ್ಯಮಂತ್ರಿ ಇದ್ದಾಗ ನಡೆದ ಹಾದಿಯೆ ಬೇರೆ ಇತ್ತು. ಚಾಮರಾಜ ನಗರದಲ್ಲಿ ಆಗ ಗ್ರಾಮ ವಾಸ್ತವ್ಯ ಮಾಡಿದ್ದೆ. ಅಲ್ಲಿ ಮೂಲಭೂತ ಸೌಕರ್ಯಗಳೆ ಇರಲಿಲ್ಲ. ಅಲ್ಲಿಗೆ ಹೋಗುವ ಮುನ್ನ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಲು ಸೂಚಿಸಿದ್ದೆ. ಈಗ ಅಲ್ಲಿನ ಪರಿಸ್ಥಿತಿ ಬೇರೆಯೇ ಇದೆ ಎಂದು ಹೇಳಿದರು.

ಕುಮಾರಸ್ವಾಮಿ ವ್ಯಂಗ್ಯ:ಐದು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಿಜೆಪಿಯವರ ಚುನಾವಣಾ ಉತ್ಸಾಹಕ್ಕೆ ಲಗಾಮು ಹಾಕಬೇಕಿದೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಇದು ಸಾಧ್ಯನಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.