ಮೋದಿಯವರ ಪತ್ನಿಯ ಹೆಸರಲ್ಲಿರುವ ಆಸ್ತಿ ವಿವರ ಬಹಿರಂಗ; ನಾಮಪತ್ರ ಸಲ್ಲಿಕೆಯ ವೇಳೆ ಮೋದಿ ನೀಡಿದ ಅಸ್ತಿ ವಿವರ ಎಷ್ಟು ಕೋಟಿ ಗೊತ್ತಾ??

0
694

ಭಾರತದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅಫಿಡವಿಟ್ ನಲ್ಲಿ ಪತ್ನಿ ಹೆಸರು ನಮೂದಿಸಿದ ಪ್ರಧಾನಿ ಮೋದಿ ವೈಯಕ್ತಿಕ ಆಸ್ತಿ ವಿವರವನ್ನು ನೀಡಿದ್ದಾರೆ. ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ವಿವಿಧ ಕ್ಷೇತ್ರಗಳ ನಾಲ್ವರು ಸಹಿ ಹಾಕಿದರು. ಸ್ಥಳೀಯ ನಿವಾಸಿಗಳಾದ ಮದನ್ ಮೋಹನ್ ಮಾಳವಿಯಾ ಮೊಮ್ಮಗಳು ಡಾ. ಅನ್ನಪೂರ್ಣ ಶುಕ್ಲಾ, ರಮಾಶಂಕರ್ ಪಟೇಲ್ ಸುಭಾಷ್, ಚಂದ್ರಗುಪ್ತಾ, ಜಗದೀಶ್ ಚೌದರಿ ಅವರು ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದಾರೆ.

Also read: ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ, ಹಿಂದೆಂದೂ ನೋಡದ ಜನ ಸಾಗರ ಮೋದಿ ಜೊತೆಗಿತ್ತು!! “ಮೋದಿ ಮತ್ತೊಮ್ಮೆ”?? /a>

ಮೋದಿಯವರ ಆಸ್ತಿ ಎಷ್ಟು?

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವೈಯಕ್ತಿಕ ಆಸ್ತಿ ವಿವರವನ್ನು ಒಳಗೊಂಡಂತೆ ಶೈಕ್ಷಣಿಕ ಮಾಹಿತಿ, ಬ್ಯಾಂಕ್ ಖಾತೆಯಲ್ಲಿರುವ ಒಟ್ಟು ಹಣ, ಪತ್ನಿಯ ಆಸ್ತಿ ವಿವರವನ್ನು ನೀಡಿದ್ದು. ಒಟ್ಟು ಆಸ್ತಿ ಮೌಲ್ಯ: 2.51 ಕೋಟಿ ರೂ. ಆಗಿದ್ದು 2014 ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ ವಿವರಕ್ಕೆ ಹೋಲಿಸಿದರೆ ಪ್ರಧಾನಿ ಮೋದಿ ಒಟ್ಟಾರೆ ಆಸ್ತಿಯಲ್ಲಿ ಸುಮಾರು 23 ಲಕ್ಷ ರೂ. ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಬಳಿ ಯಾವುದೇ ಸ್ವಂತ ವಾಹನವಿಲ್ಲ. ಪ್ರಧಾನಿ ಬಳಿ 48,944 ರೂ. ಹಣ ಇದ್ದು, ಗುಜರಾತ್‌ನ ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 11,29,690 ರೂ. ಠೇವಣಿ ಇರಿಸಿದ್ದಾರೆ.

ಮೋದಿಯವರ ಎರಡನೇ ಖಾತೆಯಲ್ಲಿರುವ ಹಣವೇಷ್ಟು?

Also read: ಮೊದಲ ಬಾರಿ ರಾಜಕೀಯ ಬಿಟ್ಟು ವಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ..

ಅದರಂತೆ ಮತ್ತೊಂದು ಖಾತೆಯಲ್ಲಿ ಪ್ರಧಾನಿ ಮೋದಿ 1,07,96,288 ರೂ. ಹಣ ಇರಿಸಿದ್ದಾರೆ. ಮೋದಿ ಬಳಿ ಒಟ್ಟು ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ಮೌಲ್ಯ 1,38,060 ರೂ. ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಂದು ವಿಶೇಷತೆ ಎಂದರೆ ಪ್ರಧಾನಿ ಮೋದಿ ಯಾವುದೇ ಸಾಲ ಮಾಡಿಲ್ಲ. ಇನ್ನು ತೆರಿಗೆ ಉಳಿಸಲು L&T ಸಂಸ್ಥೆಯ ಮೂಲಸೌಕರ್ಯ ಬಾಂಡ್ ನಲ್ಲಿ ಮೋದಿ 20 ಸಾವಿರ ರೂ. ಹೂಡಿಕೆ ಮಾಡಿದ್ದಾರೆ. ಅಲ್ಲದೇ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಸುಮಾರು 5,18,235 ರೂ. ಹೂಡಿಕೆ ಮಾಡಿದ್ದಾರೆ.

ಮೋದಿಯವರ ಮನೆಯ ಮೌಲ್ಯ ವೇಷ್ಟು?

ಪ್ರಧಾನಿ ಮೋದಿ 1,59,281 ರೂ. ಮೌಲ್ಯದ ಎಲ್‌ಐಸಿ ಪಾಲಿಸಿ ಹೊಂದಿದ್ದು, ಗುಜರಾತ್‌ನ ಗಾಂಧಿನಗರದಲ್ಲಿ 2002ರಲ್ಲಿ 1,30,488 ರೂ. ಮೌಲ್ಯದ ನಿವೇಶನ ಖರೀದಿಸಿದ್ದಾರೆ. ಈ ನಿವೇಶನದಲ್ಲಿ ವಸತಿ ಕಟ್ಟಡ ನಿರ್ಮಾಣವಾಗಿದ್ದು, ಪ್ರಧಾನಿ ಮೋದಿ ನಾಲ್ಕನೇ ಒಂದು ಭಾಗದಷ್ಟು ಪಾಲು ಹೊಂದಿದ್ದಾರೆ. ಅದರ ಮೌಲ್ಯ 1 ಕೋಟಿ ರೂ. ಆಗುತ್ತದೆ.

ಮೋದಿ ಪತ್ನಿಯ ಆಸ್ತಿಯ ವಿವರ?

Also read: ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಮೋದಿಯನ್ನು ಬಿಟ್ಟಿದ್ದಾರೆ; ಅವ್ರ ಮುಖ ನೋಡಿ ವೋಟ್ ಹಾಕಬೇಕೇ : ಕಾಂಗ್ರೆಸ್-ನ ಜಮೀರ್ ಅಹ್ಮದ್; ಇದು ದುರಹಂಕಾರದ ಮಾತು ಅಲ್ಲವೇ??

ಇನ್ನು ಪ್ರಧಾನಿ ಮೋದಿ ಸಲ್ಲಿಸಿದ ಅಫಿಡವಿಟ್’ನಲ್ಲಿ ಪತ್ನಿಯ ಕಾಲಂ ಭರ್ತಿ ಮಾಡಿದ್ದು, ಜಶೋಧಾಬೆನ್ ಎಂದು ಹೆಸರು ಉಲ್ಲೇಖಿಸಿದ್ದಾರೆ. ಆದರೆ ಅವರ ಆಸ್ತಿ ವಿವರ ಮತ್ತು ಇನ್ನಿತರ ವೈಯಕ್ತಿಕ ವಿವರಗಳ ಕಾಲಂನಲ್ಲಿ NOT KNOWN ಎಂದು ನಮೂದಿಸಿದ್ದಾರೆ.

ವಿದ್ಯಾಭ್ಯಾಸದ ವಿವರ?

ಮೋದಿಯವರು ರಾಜಕೀಯ ಜೀವನಕ್ಕೆ ಮುಖ್ಯವಾದಷ್ಟು ಶೈಕ್ಷಣಿಕ ಅರ್ಹತೆ ಪಡೆದಿದ್ದು, ಗುಜರಾತ್ ವಿವಿ-ಅಹಮದಾಬಾದ್(1983) ರಲ್ಲಿ ಮಾಸ್ಟರ್ ಆಫ್ ಆರ್ಟ್ಸ್(ಎಂಎ) ದೆಹಲಿ ವಿವಿ-ನವದೆಹಲಿ(1978) ಬ್ಯಾಚುಲರ್ ಆಫ್ ಆರ್ಟ್ಸ್(ಬಿಎ) ಪದವಿಯನ್ನು ಹೊಂದಿದ್ದಾರೆ.