ನಿಮಗೆ ಯಾರಾರೂ ಹೆದರಿಸಿದರೆ ಹೆದರಬೇಡಿ. ಪ್ರಧಾನಿಗೆ ಪತ್ರ ಬರೆಯುತ್ತೇನೆಂದು ಹೇಳಿ : ಮೋದಿ

0
762

ಮುಂಬರುವ ಉತ್ತರ ಪ್ರದೇಶದ ವಿಧಾನ ಸಭೆಯ ಚುನಾವಣೆಯ ಪ್ರಚಾರದ ರ್ಯಾಲಿಯಲ್ಲಿ ಮೋದಿ ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ…

ಮೋದಿ ಭಾಷಣದ Highlights :

  • ಅಭಿವೃದ್ಧಿ ನಮ್ಮ ಸರ್ಕಾರದ ಮೂಲ ಮಂತ್ರವಾಗಿದೆ. ಹೀಗಾಗಿ ನನಗೆ ಈ ದೇಶದ ಜನರೇ ಹೈಕಮಾಂಡ್.
  • ಶ್ರೀಮಂತರ ಬಳಿ ಕ್ಯಾಶ್ ಕಾರ್ಡ್‌ಗಳಿರುತ್ತವೆ. ಬಡವರಿಗೂ ಕಾರ್ಡ್ ನೀಡುತ್ತೇನೆಂದು ಹೇಳಿದ್ದೆ. ಅದರಂತೆ ಕಾರ್ಡ್ ಮೂಲಕ ಬಡವರು ಸಹ 20,000 ಕೋಟಿ ರುಪಾಯಿಯಷ್ಟು ವ್ಯವಹರಿಸುತ್ತಿದ್ದಾರೆ.
  • ನಮ್ಮ ಹೋರಾಟವನ್ನು ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ನೀವೇ ಹೇಳಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ತಪ್ಪಾ?
  • ದೇಶದ ಅಭಿವೃದ್ಧಿಯಾದಲ್ಲಿ ಜನರಿಗೆ ಉದ್ಯೋಗ ದೊರಕುತ್ತದೆ, ಮಕ್ಕಳಿಗೆ ಶಿಕ್ಷಣ ಹಾಗೂ ವೃದ್ಧರಿಗೆ ವದ್ಯಕೀಯ ಸೌಲಭ್ಯಗಳು ಕೈಗೆಟುಕುತ್ತವೆ.
  • ಶ್ರೀಮಂತರಿಗೆ ಬಡವರ ಬಳಿ ಬೇಡುವ ಸಂದರ್ಭ ಬಂದಿದೆ. ಜನ್‌ಧನ್ ಖಾತೆಗಳಲ್ಲಿ ತಮ್ಮ ಹಣವನ್ನು ಸಂದಾಯ ಮಾಡಿಸಿಕೊಳ್ಳಲು ಶ್ರೀಮಂತರೇ ಬಡವರ ಮನೆಗಳ ಬಳಿ ಬರುತ್ತಿದ್ದಾರೆ.
  • ದೇಶದ ಸಮಸ್ಯೆ ನಿವಾರಿಸಲು. ವಿರೋಧಿಗಳು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರಿಗಳು ಗಂಟು ಮೂಟೆ ಕಟ್ಟುವ ಕಾಲ ಈಗ ಬಂದಿದೆ.
  • “ನಾನೊಬ್ಬ ಫಕೀರ. ಜೋಳಿಗೆ ಹಾಕಿಕೊಂಡು ಹೋಗುವೆ.ನನಗೆ ಕಳೆದುಕೊಳ್ಳುವಂತಾದ್ದು ಏನೂ ಇಲ್ಲ. ನನಗೆ ಯಾವ ಭಯವೂ ಇಲ್ಲ. ದೇಶ ಸೇವೆ ಮಾಡುವುದೇ ನನ್ನ ಕರ್ತವ್ಯ”
  • ಪ್ರಾಮಾಣಿಕರು ಬ್ಯಾಂಕ್‌ಗಳ ಮುಂದೆ ಸರತಿಯಲ್ಲಿ ನಿಂತಿದ್ದರೆ, ಕಾಳಧನಿಕರು ಗುಟ್ಟಾಗಿ ಬಡವರ ಮನೆಗಳ ಮುಂದೆ ಸರತಿಯಲ್ಲಿ ನಿಂತು ಜನ್‌ಧನ್ ಖಾತೆಗಳಲ್ಲಿ ತಮ್ಮಹಣ ಸಂದಾಯ ಮಾಡಿಸಿಕೊಳ್ಳಲು ಬೇಡುತ್ತಿದ್ದಾರೆ.
  • ನಿಮ್ಮ ಖಾತೆಗಳಲ್ಲಿ ಇರಿಸಿರುವ ಅಂತಹ ಹಣವನ್ನು ತೆಗೆದು ವಾಪಸ್ ನೀಡುವುದಿಲ್ಲ ಎಂದು ನನಗೆ ಮಾತು ನೀಡಿ. ನಾನು ಕಾಳಧನಿಕರನ್ನು ಸೆರೆಮನೆಗೆ ತಳ್ಳುವ ವ್ಯವಸ್ಥೆ ಮಾಡುತ್ತೇನೆ.

ಈನಡುವೆ, ಜನ್ ಧನ್ ಖಾತೆ ದುರ್ಬಳಕೆ ಮಾಡಿದರೆ ಶಿಕ್ಷೆ ಖಚಿತವಾಗಿದೆ ಎಂದು ಎಚ್ಚರಿಕೆ ನೀಡಿದರು.