ಚಿತ್ರದುರ್ಗದಲ್ಲಿ ಅಬ್ಬರಿಸಿದ ಮೋದಿ; ಉಗ್ರರ ಮೇಲೆ ದಾಳಿಯಾದರೆ ಮೈತ್ರಿ ಸರ್ಕಾರಕ್ಕೆ ಕಣ್ಣಿರು, ಇಂತಹ ಸರ್ಕಾರಕ್ಕೆ ಶೀಘ್ರದಲ್ಲೇ ಆಮ್ಲಜನಕ ಕಟ್ ಆಗುತ್ತೆ..

0
268

ಲೋಕಸಭಾ ಚುನಾವಣೆ ಪ್ರಚಾರ ಕರ್ನಾಟಕದಲ್ಲಿ ಜೋರಾಗಿದ್ದು, ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮೋದಿಯವರು ಸಭೆ ಉದ್ದೇಶಿಸಿ ಮಾತನಾಡಿ, ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿದ್ದ ಸಂದರ್ಭದಲ್ಲಿ ಯೋಧರ ಸಾಹಸವನ್ನು ಪ್ರಸ್ತಾಪ ಮಾಡಿದರೆ ಮೈತ್ರಿ ಸಮುದಾಯಕ್ಕೆ ನೋವುಂಟಾಗುತ್ತದೆ. ಹಾಗಾದ್ರೆ ಕುಮಾರಸ್ವಾಮಿಯವರ ವೋಟ್ ಓಟ್ ಬ್ಯಾಂಕ್ ಭಾರತದಲ್ಲಿದೆಯೋ ಪಾಕಿಸ್ತಾನದೆಯೋ? ಎಂದು ಸಿಎಂ ಕುಮಾರಸ್ವಾಮಿಗೆ ಮೋದಿ ಪ್ರಶ್ನೆಮಾಡಿದ್ದಾರೆ.

Also read: ಮನೆಗೆ ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ; ಎಂದು ಯಶ್ ಗೆ ಟೀಕೆ ಮಾಡಿದ ನಿಖಿಲ್ ಗೆ ಯಶ್ ಹೇಳಿದ್ದೇನು ಗೊತ್ತಾ..

ಹೌದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗಕ್ಕೆ ಆಗಮಿಸಿ ಪ್ರಧಾನಿಯವರು ಕುಮಾರಸ್ವಾಮಿ ಬಗ್ಗೆ ಮಾತನಾಡಿ. ಬಾಲಕೋಟ್ ಮೇಲಿನ ವಾಯು ದಾಳಿಯಿಂದ ಪಾಕಿಸ್ತಾನಕ್ಕೆ ನೋವು ಆಗಿದೆಯೋ ಗೊತ್ತಿಲ್ಲ. ಇಲ್ಲಿಯ ಜೆಡಿಎಸ್ ಮತ್ತು ಕಾಂಗ್ರೆಸ್-ಗೆ ತುಂಬಾನೇ ನೋವಾಗಿದೆ. ಇಲ್ಲಿಯ ಮುಖ್ಯಮಂತ್ರಿ ದೇಶದ ಪರಾಕ್ರಮದ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಾರೆ. ತಮ್ಮ ಮತಗಳ ಎಲ್ಲಿ ಕಳೆದು ಹೋಗುತ್ತೆ ಎಂಬ ಭಯದಿಂದ ಭಾರತವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಮಾತಿನ ಚಾಟಿ ಬಿಸಿದ್ದಾರೆ.

ಉಗ್ರರ ದಾಳಿಗೆ ಕಾಂಗ್ರೆಸ್-ಜೆಡಿಎಸ್ ಗೆ ಕಣ್ಣೀರು:

ಭಾರತಕ್ಕೆ ಇಂದು ಇಡೀ ವಿಶ್ವವೇ ಜೈಕಾರ ಹಾಕುತ್ತಿದೆ, ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದರಿಂದ ಪಾಕಿಸ್ತಾನ ಹೆದರಿಕೊಂಡಿದೆ, ಪಾಕ್ ಗೆ ನೋವುಂಟಾಗಿದೆ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಕಣ್ಣೀರು ಬರುತ್ತಿದೆ. ಕರ್ನಾಟಕದಲ್ಲಿ ಕೇವಲ ಸ್ವಾರ್ಥಕ್ಕಾಗಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ಸೋತ ಎರಡು ಪಕ್ಷಗಳು ಜೊತೆಗೂಡಿ ನಡೆಸುತ್ತಿದ್ದಾರೆ. ಎಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲಾ ಸಮಾಜವನ್ನು ಒಡೆದು ಆಳುವ ಯೋಜನೆ ಕಾಂಗ್ರೆಸ್ ನದ್ದಾಗಿದೆ. ರಾಜ್ಯ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಯಾರಿಗೂ ಗೊತ್ತಿಲ್ಲ. ದೇಶದಲ್ಲೂ ಇಂಥಹದ್ದೇ ಸರ್ಕಾರ ರಚಿಸಲು ಯತ್ನಿಸುತ್ತಿದ್ದಾರೆ. ಒನಕೆ ಓಬವ್ವ, ಮದಕರಿ ನಾಯಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ್ದರು, ದೇಶವನ್ನೂ ಇದೇ ರೀತಿ ರಕ್ಷಿಸಬೇಕಿದೆ.

Also read: ಚುನಾವಣೆ ಗಿಮಿಕ್; ಇಂದಿರಾ ಕ್ಯಾಂಟೀನ್‌ ಮೆನು ಬದಲಾವಣೆ, ರುಚಿ ರುಚಿಯಾದ ಊಟ ಉಪಹಾರ..

ಪ್ರಧಾನ ಮಂತ್ರಿಗೆ ದೇಶದ ಜನತೆಯೇ ಹೈಕಮಾಂಡ್ ಆಗಿರಬೇಕು, ಇಷ್ಟೆಲ್ಲಾ ಸಾಧನೆಯಾಗಿರುವುದು ಮೋದಿ ಇಂದಲ್ಲ ನಿಮ್ಮಿಂದ ಎಂದು ಮೋದಿ ಜನತೆಗೆ ಹೇಳಿದ ಅವರು, ಇಡೀ ಜಗತ್ತು ನಮ್ಮ ಸೇನೆಯನ್ನು ಹೊಗಳಿದ್ರೆ ಇಲ್ಲಿಯ ಕಾಂಗ್ರೆಸ್ ಮತ್ತು ಜೆಡಿಎಸ್ ಸೇನೆ ನಡೆಸಿದ ಏರ್ ಸ್ಟ್ರೈಕ್ ವಿರೋಧ ಮಾಡುತ್ತಿವೆ. ಇಡೀ ವಿಶ್ವವೇ ಒಪ್ಪಿಕೊಂಡರೂ ಇವರು ಮಾತ್ರ ನಂಬುತ್ತಿಲ್ಲ. ಕೇವಲ ಒಬ್ಬ ಸಂಸದನನ್ನು ಆಯ್ಕೆ ಮಾಡದೇ ಒಂದು ಸದೃಢ ಸರ್ಕಾರಕ್ಕೆ ನೀವು ಮತ ನೀಡಬೇಕಿದೆ. ದೇಶದ ರಕ್ಷಣೆಗಾಗಿ ಬಲಿಷ್ಠ ನಿರ್ಣಯ ತೆಗೆದುಕೊಳ್ಳುವ ಸರ್ಕಾರಕ್ಕೆ ನೀಡಬೇಕಿದೆ ಎಂದು ಮನವಿ ಮಾಡಿಕೊಂಡರು.

ಕರ್ನಾಟಕ ಸರ್ಕಾರದ ರಿಮೋಟ್ ದೆಹಲಿಯ 12 ಜನರ ಕೈಯಲ್ಲಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ವಿಧಾನಸಭಾ ಚುನಾವಣೆಯಲ್ಲಿ ಪ್ರಯತ್ನ ಮಾಡಿದರು. ಇಲ್ಲಿಯ ನಾಯಕರಿಗೆ ದೇಶದ ಚಿಂತೆ ಇಲ್ಲ ಮತ್ತು ಸಂವಿಧಾನದ ಬಗ್ಗೆ ಗೌರವ ಸಹ ಇಲ್ಲ. ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಸಿಎಂ ಆದಿಯಾಗಿ ಮೈತ್ರಿ ಸರ್ಕಾರದ ನಾಯಕರು ಪ್ರತಿಭಟನೆ ಮಾಡಿದ್ದು ನಾಚಿಕೆಗೇಡು. ಸಿಕ್ಕ 5 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ತಾತ, ಇಬ್ಬರು ಮೊಮ್ಮಕ್ಕಳು ಸ್ಪರ್ಧಿಸುತ್ತಿದ್ದು, ಕುಟುಂಬ ರಾಜಕಾರಣದ ನಗ್ನ ಕುಣಿತವನ್ನು ಕರ್ನಾಟಕದ ಜನ ತಿರಸ್ಕರಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.

Also read: ಮೋದಿ ಏನು ಮಾಡಿದ್ದಾನೆ ಎಂದು ಪ್ರಶ್ನಿಸುವವರಿಗೆ ಈ ಪಟ್ಟಿ ಶೇರ್ ಮಾಡಿ ಜೀವನದಲ್ಲಿ ಮೋದಿ ಬಿಟ್ಟು ಯಾರಿಗೂ ಮತ ಹಾಕುವುದಿಲ್ಲ..

ಶೀಘ್ರದಲ್ಲೇ ಮೈತ್ರಿ ಸರ್ಕಾರಕ್ಕೆ ಆಮ್ಲಜನಕ ಕಟ್:

ಕಾಂಗ್ರೆಸ್ ದೇಶದ ಅಖಂಡತೆಗೆ ಅಪಾಯಕಾರಿಯಾಗಿದ್ದು, ಇಂತಹ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ರಾಜ್ಯ ಮತ್ತು ದೇಶದ ಜನತೆಗೆ ಮೋಸ ಮಾಡಿದೆ. ಶೀಘ್ರದಲ್ಲೇ ಮೈತ್ರಿ ಸರ್ಕಾರಕ್ಕೆ ಆಮ್ಲಜನಕ(ಹಣ)ದ ಪೂರೈಕೆ ಸ್ಥಗಿತಗೊಳ್ಳಲಿದ್ದು, ದೇಶದ ಅಭಿವೃದ್ಧಿ ಆಂದೋಲನದಲ್ಲಿ ಕರ್ನಾಟಕ ಮಹತ್ವದ ಪಾಲುದಾರ ರಾಜ್ಯವಾಗಿ ಹೊರ ಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಮೈತ್ರಿ ಸರ್ಕಾರದ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.