ಮೋದಿಯವರ ರ‍್ಯಾಲಿಯಲ್ಲಿ ಭಾಗವಹಿಸಿ ಜೈಕಾರ ಕೂಗಿದರೆ 400 ಕೊಡ್ತೀನಿ ಎಂದು ಹೇಳಿ ಕೊಟ್ಟದ್ದು ಬರೀ 150

0
855

ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ಭಾಗವಹಿಸಿ ಜೈಕಾರ ಕೂಗಿದರೆ 400ರೂ ಕೊಡುತ್ತೇವೆ ಎಂದು ಭರವಸೆ ನೀಡಿದ ಕಾರಣ ನಾನು ರ‍್ಯಾಲಿ ಗೆ ಹೋಗಿದ್ದೆ. ಆದರೆ ರ‍್ಯಾಲಿ ಮುಗಿದ ನಂತರ ನನಗೆ ಕೊಟ್ಟದ್ದು ಬರೀ 150ರೂ ಎಂದು ಹೇಳಿ ಮಹಿಳೆಯೊಬ್ಬರು ಕಣ್ಣೀರಿಡುತ್ತಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ ನೋಡಿ

ದಿನಗೂಲಿ ನೌಕರಳಾದ ಈ ಮಹಿಳೆ ದಿನದ ಕೆಲಸಕ್ಕೆ ಚಕ್ಕರ್ ಹೊಡೆದು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿಯಲ್ಲಿ ಭಾಗವಹಿಸಿದರೆ ₹400 ಮತ್ತು ಧೋತಿ ನೀಡುವುದಾಗಿ ಕಾರ್ಯಕರ್ತರು ಭರವಸೆ ನೀಡಿದ್ದರು. ಆದರೆ ಅವರು ರ‍್ಯಾಲಿ ಮುಗಿದ ನಂತರ ಬರೀ ₹150 ಕೊಟ್ಟು ಮೋಸ ಮಾಡಿದ್ದಾರೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಆದಾಗ್ಯೂ, ಯಾವ ಪಕ್ಷದ ರ‍್ಯಾಲಿ ಯಲ್ಲಿ ನೀವು ಭಾಗವಹಿಸಿದ್ದೀರಿ? ಎಂದು ಕೇಳಿದಾಗ ಆ ಮಹಿಳೆ ಮೋದಿಯವರ ಪಕ್ಷ ಎಂದು ಹೇಳಿದ್ದಾರೆ.

ನಾನು ನನ್ನ ಕೆಲಸವನ್ನು ಬಿಟ್ಟು ಬೆಳಗ್ಗೆ 8.30ಕ್ಕೆ ರ‍್ಯಾಲಿಯಲ್ಲಿ ಭಾಗವಹಿಸಿ ಜೈಕಾರ ಕೂಗಿದ್ದೇನೆ. ಆದರೆ ರ‍್ಯಾಲಿ ಮುಗಿದ ನಂತರ 400 ಬದಲು 150 ನೀಡಿ ಕಾರ್ಯಕರ್ತರು ಇಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.