ಮೋದಿಯಿಂದ ಮಹಾ ಮೋಸ; ಜನಸಾಮಾನ್ಯರ ಉಳಿತಾಯದ ಹಣದಿಂದ ಖಾಸಗಿ ಸಂಸ್ಥೆಯ 90 ಸಾವಿರ ಕೋಟಿ ಸಾಲ ತೀರಿಸಿದ ಮೋದಿ ಸರ್ಕಾರ!!

0
764

ಸಾರ್ವಜನಿಕರ ಉಳಿತಾಯ ಖಾತೆ ದುಡ್ಡಿನಿಂದ ಖಾಸಗಿ ಕಂಪನಿ ಸಾಲ ತೀರಿಸಿದ ಮೋದಿ ಸರ್ಕಾರ! ಸಾರ್ವಜನಿಕರ 90 ಸಾವಿರ ಕೋಟಿ ದುಡ್ಡ ಖಾಸಗಿ ಕಂಪನಿಗೆ!
ಜೀವ ವಿಮೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ಗಳಲ್ಲಿ ಸಾರ್ವಜನಿಕರು ಉಳಿತಾಯ ಖಾತೆಯಲ್ಲಿ ಇರಿಸಿದ್ದ 90 ಸಾವಿರ ಕೋಟಿ ರೂ. ಮೊತ್ತವನ್ನು ಸಾಲದ ಸುಳಿಯಿಂದ ಮುಚ್ಚುವ ಹಂತದಲ್ಲಿದ್ದ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಸ್ ಸರ್ವಿಸಸ್ ಕಂಪನಿಗೆ ಪರಿಹಾರ ಮೊತ್ತವಾಗಿ ನೀಡಿದೆ.

ಕೇಂದ್ರ ಸರಕಾರದ ವಿರುದ್ಧ ರಫೆಲ್ ಯುದ್ಧ ವಿಮಾನ ಹಗರಣದ ಒಂದೊಂದೇ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವ ಮೂಲಕ ಸತತ ದಾಳಿ ಮಾಡುತ್ತಿರುವ ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ, ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್ಐಸಿ) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗಳಲ್ಲಿ ಸಾರ್ವಜನಿಕರು ಉಳಿತಾಯ ಖಾತೆಯಲ್ಲಿ ಇರಿಸಿದ್ದ ಮೊತ್ತದಲ್ಲಿ 90 ಸಾವಿರ ಕೋಟಿ ರೂ.ವನ್ನು ತಮ್ಮ ಮೆಚ್ಚಿನ ಖಾಸಗಿ ಸಂಸ್ಥೆಯನ್ನು ಉಳಿಸಲು ಪ್ರಧಾನಿ ಮೋದಿ ಬಳಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಭಾನುವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಲೈಟ್ಸ್, ಕ್ಯಾಮರಾ, ಸ್ಕ್ಯಾಮ್ (ಹಗರಣ) ಎಂದು ಶೀರ್ಷಿಕೆ ನೀಡಿದ್ದು, 2007ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 70,000 ಕೋಟಿ ರೂ. ಬೃಹತ್ ಮೊತ್ತದ ಯೋಜನೆ `ಗಿಫ್ಟ್ ಸಿಟಿ’ಗಾಗಿ ಐಎಲ್ ಅಂಡ್ ಎಫ್ಎಸ್ ಕಂಪನಿಗೆ ಗುತ್ತಿಗೆ ನೀಡಿದ್ದರು. ಆದರೆ ಈ ಯೋಜನೆ ಇದುವರೆಗೂ ಆರಂಭವಾಗಿಯೇ ಇಲ್ಲ ಎಂದು ಆರೋಪಿಸಿದ್ದಾರೆ.

ಬಡಾವಣೆ ನಿರ್ಮಾಣವೇ ಮಾಡದ ಕಂಪನಿಗೆ ಸಾಲದ ಸುಳಿಯಲ್ಲಿದೆ ಎಂಬ ಕಾರಣಕ್ಕೆ ಪ್ರಧಾನಿ ಆದ ನಂತರ ಮೋದಿ ಅವರು ಸಾರ್ವಜನಿಕರ ದುಡ್ಡಿನಿಂದ ನಷ್ಟ ಭರ್ತಿ ಮಾಡಿಸುತ್ತಾರೆ ಎಂದು ರಾಹುಲ್ ವಿವರಿಸಿದ್ದಾರೆ.

ಮುಳುಗುತ್ತಿರುವ ಖಾಸಗಿ ಕಂಪನಿಗೆ ಮೋದಿ ಯಾಕೆ ಸಾರ್ವಜನಿಕ ಸಂಸ್ಥೆಗಳಲ್ಲಿನ ದುಡ್ಡನ್ನು ಕೊಡುತ್ತಾರೆ.  ಜೀವ ವಿಮಾ ಸಂಸ್ಥೆ ಮೇಲೆ ಜನರು ನಂಬಿಕೆ ಇರಿಸಿದ್ದಾರೆ. ಎಲ್​ಐಸಿ ಪಾಲಿಸಿ ಪಡೆಯಲು ಒಂದೊಂದು ಪೈಸೆ ಜೋಡಿಸಿರುತ್ತಾರೆ. ಅಂತಹ ದುಡ್ಡನ್ನು ಖಾಸಗಿ ಕಂಪನಿ ಉಳಿಸಲು ಕೋಟ್ಯಂತರ ರೂ.  ನೀಡುತ್ತಾರೆ ಎಂದು ರಾಹುಲ್ ಆರೋಪಿಸಿದರು.