ಪಂಚ ರಾಜ್ಯಗಳ ಚುನಾವಣೆಯ ಸೋಲಿನ ಬಿಸಿವುಂಡ ನರೇಂದ್ರ ಮೋದಿ; ರೈತರಿಗೆ ಭರ್ಜರಿ ಕೊಡುಗೆ?

0
313

ಇಡಿ ದೇಶವೇ ಬೇರಗಾಗುವಂತೆ ಆಳ್ವಿಕೆ ಮಾಡಿದ ನರೇಂದ್ರ ಮೋದಿ, ನೆನ್ನೆ ನಡೆದ ಐದು ರಾಜ್ಯಗಳ ಚುನಾವಣಾ ಪಲಿತಾಂಶದಲ್ಲಿ ಆಘಾತಕಾರಿ ಸೋಲು ಕಂಡ ನಂತರ ಕೇಂದ್ರ ಸರ್ಕಾರ ಮುಂದಿನ ಲೋಕಸಭೆ ಚುನಾವಣೆಗೆ ಜನರ ಮನಗೆಲ್ಲಲು ಹೊಸ ಭರವಸೆಯ ಬಾಂಬ್ ಸಿಡಿಸಿದೆ? ಎಂಬ ವ್ಯಾಪಕ ಚರ್ಚೆ ಹರಿದಾಡುತ್ತಿದೆ. ರೈತರ 4 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದೆ.

ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡುತ್ತಾರ?

ಹೌದು ಐದು ರಾಜ್ಯಗಳ ಚುನಾವಣೆಯಲ್ಲಿ ಸೋತ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರಕಾರಕ್ಕೆ ಕೆಟ್ಟಮೇಲೆ ಬುದ್ದಿಬಂದಿದೆ. ಇಗಲೇ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದಿನ ಲೋಕಸಭೆ ಚುನಾವಣೆಗೆ ಬಾರಿ ಪೈಪೋಟಿ ಬಿಳ್ಳುವ ಸಂಭವವಿದೆ. ಇದನ್ನು ಅರಿತ ಕೇಂದ್ರದ ಸರ್ಕಾರ ಏನಾದ್ರು ಮಾಡಿ ದೇಶದ ರೈತರ ವರಸೆಗೆ ಕೈಹಾಕುವ ಚಿಂತನೆ ನಡೆಸಿದೆ. ಎಂದು ಕೆಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯ ಪ್ರಕಾರ, ನರೇಂದ್ರ ಮೋದಿ ಅವರು ರೈತರ (ಅಚ್ಛೇ ದಿನ್’ ಗಿಫ್ಟ್) ಸಾಲ ಮನ್ನಾ ಮಾಡುವು ಚಿಂತನೆಯಲ್ಲಿದ್ದಾರೆ. ಎಂದು ತಿಳಿದು ಬಂದಿದು ಸ್ಪಷ್ಟ ಮಾಹಿತಿ ದೊರೆತಿಲ್ಲ.

ರೈತರ ಶಕ್ತಿ ತಿಳಿತ ಮೋದಿಗೆ?

ರೈತರು ಈ ದೇಶ ಬೆನ್ನೆಲುಬಾಗಿರುವಂತೆ, ಸರಕಾರ ನಿಲ್ಲಿಸಲು ರೈತರ ಬೆಂಬಲ ಬೇಕೇ ಬೇಕಿದೆ. ರೈತರ ಸಾಲ ಮನ್ನಾ ಮಾಡುವುದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ವಾದ ಮಂಡಿಸುತ್ತಾ ಬಂದಿದ್ದ ಕೇಂದ್ರಕ್ಕೆ ಈಗ ವಾಸ್ತವ ಸ್ಥಿತಿಯ ಅರಿವಾಗಿದೆ. ರೈತರೇ ಬಹುಭಾಗವಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡದಲ್ಲಿ ಬಿಜೆಪಿಗೆ ಆಗಿರುವ ಆಘಾತಕ್ಕೆ ರೈತರ ಮುನಿಸೇ ಕಾರಣ ಎಂಬ ಸತ್ಯ ಕೇಂದ್ರಕ್ಕೆ ಮನವರಿಕೆಯಾಗಿದೆ. ಹೀಗಾಗಿ, ರೈತರ ಸಾಲ ಮನ್ನಾ ಮಾಡಿ ರೈತರ ಮನ ಒಲಿಸಿಕೊಳ್ಳಲು ನರೇಂದ್ರ ಮೋದಿ ಬಯಸಿದ್ದಾರೆನ್ನಲಾಗಿದೆ.

ಇದಕ್ಕೆ ಸಾಕ್ಷಿ ಚುನಾವಣೆಗೆ ಕೆಲವೇ ತಿಂಗಳು ಇರುವ ಹಿನ್ನೆಲೆಯಲ್ಲಿ ರೈತರಿಗೆ ಉಡುಗೊರೆ ನೀಡಲು ಕೇಂದ್ರ ಸರಕಾರಕ್ಕೆ ಬೇರೆ ದಾರಿ ಇಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಬೇರೆ ಜನಪ್ರಿಯ ಯೋಜನೆಗಳ ಜಾರಿಗೆ ಈ ಅಲ್ಪ ಸಮಯ ಸಾಕಾಗುವುದಿಲ್ಲ. ಸಾಲ ಮನ್ನಾ ಮಾತ್ರ ಕೇಂದ್ರದ ಮುಂದಿರುವ ಏಕೈಕ ದಾರಿ ಎನ್ನಲಾಗುತ್ತಿದೆ. ಮೋದಿ ಟೀಮ್​ನಲ್ಲಿ ಈ ಬಗ್ಗೆ ಈಗಾಗಲೇ ಗಹನವಾದ ಚರ್ಚೆ ನಡೆಯುತ್ತಿದ್ದು, ರೈತರ ಸುಮಾರು 4 ಲಕ್ಷ ಕೋಟಿ ಹಣವನ್ನು ಮನ್ನಾ ಮಾಡುವುದಾಗಿ ಘೋಷಿಸಲು ನಿರ್ಧರಿಸಲಾಗಿದೆಯಂತೆ.

ಹಿಂದಿನ ಸರ್ಕಾರದ ರೀತಿಯಲ್ಲಿ ಸಂಚು?

ಮೋದಿ ಸರ್ಕಾರದ ಈ ಅಚ್ಚರಿಯ ನಿರ್ಧಾರಕ್ಕೆ ಹಿಂದಿನ ಯುಪಿಎ ಸರಕಾರವೂ ಕಾರಣವಾಗಿರಬಹುದು. ಏಕೆಂದರೆ, 2008ರಲ್ಲಿ ಯುಪಿಎ ಸರಕಾರ ಕೂಡ ತನ್ನ ಮೊದಲ ಅಧಿಕಾರಾವಧಿಯ ಅಂತ್ಯದಲ್ಲಿ 72 ಸಾವಿರ ಕೋಟಿ ರೂ ರೈತ ಸಾಲ ಮನ್ನಾ ಮಾಡಿತ್ತು. ಮರು ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ ಸರಕಾರ ಭರ್ಜರಿ ಗೆಲುವಿನೊಂದಿಗೆ ಅಧಿಕಾರ ಉಳಿಸಿಕೊಂಡಿತ್ತು. ರೈತರು ಕಾಂಗ್ರೆಸ್ ಕೈ ಹಿಡಿದಿದ್ದರು. ಇದೇ ಲೆಕ್ಕಾಚಾರದಲ್ಲಿ ಈಗ ಎನ್​ಡಿಎ ಕೂಡ ಇದೆ. ಎಂದು ತಿಳಿದು ಬಂದಿದು ಯಾವುದು ಸರಿಯಾದ ಮಾಹಿತಿಯಿಲ್ಲ.