ಜಿ.ಎಸ್.ಟಿ.ಯಿಂದ ದೇಶಕ್ಕೆ ಭಾರಿ ಅನುಕೂಲವಾಗುತ್ತಿದೆ, ಜನರಿಗೆ ಸುಳ್ಳುಸುದ್ದಿ ಹೇಳಬೇಡಿ. ಬುದ್ದಿ ಜೀವಿಗಳಿಗೆ ಮೋದಿ ಕಿವಿ ಮಾತು.

0
463

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿನ ಬಿಜೆಪಿ ಗೆಲುವು ಜನ ಅಭಿವೃದ್ಧಿಗೆ ಸಾತ್ ನೀಡುತ್ತಿದ್ದಾರೆ ಎಂಬುದಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಮೋದಿಯವರು, ಚುನಾವಣಾ ಫ‌ಫಲಿತಾಂಶದ ನಂತರ ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಸೋಮವಾರ ಸಂಜೆ ತೆರಳಿ, ಕಾರ್ಯಕರ್ತರು, ಪಕ್ಷದ ನಾಯಕರನ್ನು ಉದ್ದೇಶಿಸಿ ಹೇಳಿದರು.

ಎರಡು ರಾಜ್ಯಗಳಲ್ಲಿ ಪಕ್ಷದ ಗೆಲುವಿಗೆ ಕಾರಣರಾದ ಕಾರ್ಯಕರ್ತರು ಮತ್ತು ನಾಯಕರಿಗೆ ಪ್ರಧಾನಿ ಅಭಿನಂದನೆಗಳನ್ನು ತಿಳಿಸಿದರು. ನಂತರ ಬುದ್ಧಿಜೀವಿಗಳ ಬಗ್ಗೆ ಮಾತನಾಡಿದ ಅವರು ಉತ್ತರ ಪ್ರದೇಶ ಚುನಾವಣೆ ಮತ್ತು ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಇದೇ ಬುದ್ದಿಜೀವಿಗಳು ಜಿಎಸ್‌ಟಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಬಿಜೆಪಿ ಸೋಲು ಬಯಸಿದರು, ಆದರೆ, ಜನ ಇದನ್ನು ಒಪ್ಪಲಿಲ್ಲ ಕಾರಣ, ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತು.

ರಾಜ್ಯದ ಅಭಿವೃದ್ಧಿಯನ್ನು ಮರೆತರೆ ಜನ ನಿಮ್ಮನ್ನು ಐದು ವರ್ಷ ಮತ್ತೆ ದೂರ ಇಡುತ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಅಭಿವೃದ್ಧಿ ಪರ ಮತ ಹಾಕುವಂತೆ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಮೋದಿ ಅಭಿನಂದನೆ ಹೇಳಲು ಮರೆಯಲಿಲ್ಲ. ಚುನಾವಣೆ ಬಂದಾಗ ಕಾಂಗ್ರೆಸ್‌ ಜಾತಿಯ ವಿಷ ಬೀಜ ಬಿತ್ತನೆ ಮಾಡಲು ಮುಂದಾಗಿತ್ತು. ಆದರೆ ಜನ ಅದಕ್ಕೆ ಪ್ರೋತ್ಸಾಹ ನೀಡಲಿಲ್ಲ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿ ಜಾತಿಯ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವವರ ಕಾಲ ಮುಗಿಯಿತು ಗುಜರಾತ್‌-ನಲ್ಲಿ ಜಾತಿಯ ಮೂಲಕ ರಾಜ್ಯವನ್ನು ವಿಭಜಿಸಲು ಹೋರಾಟ ಕಾಂಗ್ರೆಸ್-ಗೆ ಜನ ತಕ್ಕ ಪಾಠಕಲಿಸಿದ್ದಾರೆ ಎಂದರು.