ಕರ್ನಾಟಕದ ಕರಾವಳಿ ಖಾದ್ಯಗಳನ್ನು ತಿಂದು ಪ್ರಧಾನಿ ಮೋದಿ ಏನೆಂದರು ಗೊತ್ತಾ…??

0
1086

ಮಂಗಳೂರು ಕಡುಬು ರುಚಿಗೆ ಮೋದಿ ಮೆಚ್ಚುಗೆ

ಲಕ್ಷದ್ವೀಪಕ್ಕೆ ತೆರಳಲೆಂದು ಸೋಮವಾರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದ ಪ್ರಧಾನಿ ನರೇಂದ್ರ ಮೋದಿ,ಮಂಗಳವಾರ ಬೆಳಗ್ಗೆ ಕರಾವಳಿಯ ತಿಂಡಿ ಸವಿದರ

ಮುಂಜಾನೆ 3 ಗಂಟೆಗೆ ಎದ್ದು ಯೋಗಭ್ಯಾಸ ಮಾಡಿ ಬಳಿಕ ನೀರುದೋಸೆ, ಕಡುಬು, ಅವಲಕ್ಕಿ ಉಪ್ಪಿಟ್ಟು ಸೇವಿಸಿದರು. ಕಡುಬು ಬಗ್ಗೆ ವಿಚಾರಿಸಿ ಅದರ ರುಚಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಮೋದಿ 2 ಬಾರಿ ಕಡುಬು ಹಾಕಿಸಿಕೊಂಡು ಚಪ್ಪರಿಸಿಕೊಂಡು ಸವಿದರು. ನಂತರ ತಿಂಡಿ ಬಡಿಸಿದವರಿಗೆ ಮೋದಿ ಪ್ರಶಂಸಿದರು.

ಇನ್ನು ತಮಗೆ ಮುಂಜಾನೆಯ ಉಪಹಾರ ನೀಡಿದ ನಗರದ ಓಷಿಯನ್ ಪರ್ಲ್ ಹೋಟೆಲ್ ಸಿಬ್ಬಂದಿ ಜೊತೆ ಪೋಟೋ ತೆಗಿಸಿಕೊಂಡು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಯುಪಡೆಯ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣ ಬೇಳೆಸಿದರು. ಓಖಿ ಚಂಡಮಾರುತದಿಂದ ತತ್ತರಿಸಿರುವ ಲಕ್ಷದ್ವೀಪದ ಪ್ರದೇಶಗಳ ಪರಿಶೀಲನೆ ನಡೆಸಿದರು.