ಕರ್ನಾಟಕದ ಎಳನೀರನ್ನು ಕುಡಿದ ಮೋದಿ, ಇದು ಅಮೃತವೇ ಸರಿ ಕರ್ನಾಟಕದ ಜನರು ಇದನ್ನು ಕುಡಿಯುವುದಕ್ಕೆ ಪುಣ್ಯ ಮಾಡಿದ್ದರು ಎಂದರು..

0
727

ಪ್ರಧಾನಿ ನರೇಂದ್ರ ಮೋದಿ ಒರ್ವ ದೈವ ಭಕ್ತಯ ಎನ್ನೋದ್ರಲ್ಲಿ ಎರಡು ಮಾತಿಲ್ಲ. ನವರಾತ್ರಿ ಆಚರಣೆಯ ವೇಳೆ ಮೋದಿ ಉಪವಾಸ ಮಾಡುವುದ ಎಲ್ಲರಿಗೂ ಗೊತ್ತಿರುವ ವಿಚಾರವೇ.. ಮೋದಿ ಅಕ್ಟೋಬರ್​ 29 ರಂದು ಧರ್ಮಸ್ಥಳಕ್ಕೆ ಭೇಟಿ ನೀಡುವ ವೇಳೆಯೂ, ತಮ್ಮ ಮನಸ್ಸಿನ ಅಭಿಲಾಷೆಯಂತೆ ನಡೆದುಕೊಂಡಿದ್ದಾರೆ. ಮೋದಿ ನವದೆಹಲಿ ಬಿಟ್ಟು ಧರ್ಮಸ್ಥಳದತ್ತ ಆಗಮಿಸುವ ವರೆಗೂ ನೀರು ಸಹ ಸೇವಿಸಿರಲಿಲ್ಲ.


ಬೆಳಗ್ಗೆ ಎದ್ದವರೇ ತಮ್ಮ ದೈನಂದಿನ ಕೆಲಸ ಮುಗಿಸಿಕೊಂಡುವರೆ ಫ್ಲೈಟ್​ ಹತ್ತಿದ್ದಾರೆ. ಧರ್ಮಸ್ಥಳಕ್ಕೆ ಬಂದು, ಮಂಜುನಾಥನ ಸನ್ನಿಧಿಯಲ್ಲಿ ತಮ್ಮ ಮನದ ಆಶಯಗಳನ್ನು ಕೇಳಿಕೊಂಡ ಬಳಿಕವೇ, ದೇವರ ತೀರ್ಥವನ್ನು ಸೇವಿಸಿದ್ರು. ಧ್ಯಾನ ಪೂಜಾ ಕೈಂಕರ್ಯಗಳನ್ನು ಮುಗಿಸಿದ ಬಳಿಕವೇ ತೀರ್ಥ ರೂಪದಲ್ಲಿ ನೀರು ಸೇವನೇ ಮಾಡಿದ್ದಾರೆ.


ಬಳಿಕವೂ ಏನು ಸೇವಿಸಿರಲಿಲ್ಲ. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು, ಫಲ ಆಹಾರವನ್ನು ಇಟ್ಟಿದ್ದರು. ಆದ್ರೆ ಮೋದಿ ಯಾವುದನ್ನು ಸೇವಿಸಲಿಲ್ಲ. ನಾನು ಇಂದು ಉಪವಾಸ ಇರುವುದಾಗಿ ತಿಳಿಸಿದ್ರು. ಶ್ರೀಕ್ಷೆತ್ರಕ್ಕೆ ಬಂದು ಪ್ರಸಾದವನ್ನು ಸೇವಿಸದೇ ಹೋಗುವುದು ಎಷ್ಟು ಸರಿ. ಒಂದು ಕೆಲಸ ಮಾಡಿ ಎಳನೀರನ್ನೇ ದೇವರ ಪ್ರಸಾದ ಎಂದು ಸೇವಿಸಿ. ಇದಕ್ಕೆ ಒಪ್ಪಿಕೊಂಡ ಮೊದಿ ಎಳನೀರು ಸೇವಿಸಿದ್ರು. ಇನ್ನು ಮೋದಿ ಎಳನೀರು ಸೇವಿಸುವಾಗ, ಸ್ಟ್ರಾ ಬಳಸದೇ ಕಾಯಿಯನ್ನು ಹಾಗೆ ಎತ್ತಿದ್ರು. ಇದನ್ನು ಕಂಡು ಅರ್ಚಕರ ವೃಂದ ಮೋದಿರನ್ನು ಹಾಡಿ ಹೊಗಳಿದೆ.


ಇಷ್ಟೆಲ್ಲಾ ಆದಮೇಲೆ ಮೋದಿ ಎಳನೀರಿಗೆ ಅಂಕಗಳನ್ನು ನೀಡೋದನ್ನು ಮಾತ್ರ ಮಿಸ್​ ಮಾಡಲಿಲ್ಲ. ಧರ್ಮಸ್ಥಳದ ಮಂಜುನಾಥ ಸನ್ನಿಧಿಯಲ್ಲಿ ನಾನು ಎಳೆನೀರು ಸೇವಿಸಿದ್ದು, ನನಗೆ ಅಮೃತ ದಂತೆ ಭಾಸವಾಗಿದೆ ಎಂದು ತಿಳಿಸಿದ್ರು. ಇದರಿಂದ ಅಲ್ಲಿನ ಜನರಿಗೆ ಆದ ಖುಷಿ ಅಷ್ಟಿಷ್ಟಲ್ಲ.