ಮೋದಿಯವರು ಎಲ್.ಕೆ.ಅಡ್ವಾಣಿಯವರನ್ನು ಒದ್ದು ವೇದಿಕೆಯಿಂದ ಹೊರಡಬ್ಬಿದ್ದರು: ಸುಳ್ಳು ಪ್ರಚಾರ ಮಾಡುತ್ತಿರುವ ರಾಹುಲ್ ಗಾಂಧಿ??

0
327

ದೇಶದಲ್ಲಿ ಲೋಕಸಭಾ ಚುನಾವಣಾ ಬಾರಿ ಸದ್ದು ಮಾಡುತ್ತಿದ್ದು ಕಾಂಗ್ರೆಸ್, ಬಿಜೆಪಿ ನಡುವೆ ಕೆಸರು ಎರಚಾಟ, ನಡೆಸಿವೆ ಅದರಲ್ಲಿ ಸದಾ ಒಂದಿಲ್ಲದೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು. ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ವರಿಷ್ಠ ನೇತಾರ ಎಲ್‌.ಕೆ. ಅಡ್ವಾಣಿ ಅವರನ್ನು ಒದ್ದು ಹೊರದಬ್ಬಿದರು, ಚಪ್ಪಲಿಯಿಂದ ಹೊಡೆದು ವೇದಿಕೆಯಿಂದ ಹೊರದಬ್ಬಿದರು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿವಾದಿತ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಉದ್ವೇಗಕ್ಕೆ ಒಳಗಾಗಿ ಶುಕ್ರವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಹಿಂದು ಧರ್ಮದಲ್ಲಿ ಗುರುವೇ ಶ್ರೇಷ್ಠ. ಅದು ಗುರುಶಿಷ್ಯ ಪರಂಪರೆ ಬಗ್ಗೆ ಸಾರಿ ಹೇಳುತ್ತದೆ. ಮೋದಿ ಅವರ ಗುರು ಯಾರು? ಅಡ್ವಾಣಿ. ಮೋದಿಯ ಗುರುವಲ್ಲವೆ ಆದರು ಮೋದಿ ಅವರು ಚಪ್ಪಲಿಯಿಂದ ಹೊಡೆದು ಅಡ್ವಾಣಿ ಅವರನ್ನು ವೇದಿಕೆಯಿಂದ ಹೊರದಬ್ಬಿದರು’ ಎಂದು ಕಿಡಿಕಾರಿದ ಅವರು, ಸರ್ಜಿಕಲ್‌ ದಾಳಿ ಮಾಡಿಸಿದ್ದು ತಾವೇ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಗೆ ಗನ್‌ ಹಿಡಿಯೋಕಾದ್ರೂ ಬರುತ್ತಾ?’ ವಾಯುಪಡೆ ಮಾಡಿದ ಸರ್ಜಿಕಲ್‌ ದಾಳಿಯನ್ನು ತಾವೇ ಮಾಡಿದ್ದೆಂದು ಮೋದಿ ಹೇಳುತ್ತಾರೆ. ರೈಫಲ್‌ ಹಿಡಿಯೋದು

ಹೇಗೆಂದು ತೋರಿಸ್ತೀರಾ ಮೋದೀಜಿ?

ಸಿಆರ್‌ಪಿಎಫ್‌ ಯೋಧರ ಥರಾ 5 ನಿಮಿಷ ಹಿಡ್ಕೊಳ್ಳಿ ಸಾಕು ಅಥವಾ ಜಮ್ಮು-ಕಾಶ್ಮೀರಕ್ಕೆ ಒಬ್ಬರೇ ಬಸ್ಸಲ್ಲಿ ಹೋಗಿ. ವಾಯುದಾಳಿ ಹೇಗೆ ಮಾಡೋದು ಹೇಳಿ ಸಾಕು. ಹಾಗೆಯೇ ನರೇಂದ್ರ ಮೋದಿ ಅವರೇ ವಾಯುದಾಳಿ ಮಾಡಿದ್ರಾ? ಅದೂ ದಿಲ್ಲಿಯ ರೇಸ್‌ಕೋರ್ಸ್‌ ರಸ್ತೆಯ ತಮ್ಮ ಮನೇಲಿ ಕುಳಿತು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ಬೇಸರ ವ್ಯಕ್ತಪಡಿಸಿದ ಎಲ್​​​.ಕೆ ಅಡ್ವಾಣಿ:

ಬಿಜೆಪಿ ಪಕ್ಷ ತಮ್ಮನು ಕೈಬಿಟ್ಟ ಬೆನ್ನಲ್ಲೇ ಪಕ್ಷದ ಹಿರಿಯ ಮುತ್ಸದ್ದಿ ಎಲ್​​​.ಕೆ ಅಡ್ವಾಣಿ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ಬ್ಲಾಗ್​​ನಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿ ಎಂದೂ ಸೈದ್ದಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರನ್ನು ತನ್ನ ಶತ್ರು ಎಂದು ಭಾವಿಸಿರಲಿಲ್ಲ. ನಮ್ಮ ಭಾರತೀಯ ರಾಷ್ಟ್ರೀಯತಾವಾದದ ಪ್ರಕಾರ ನಮ್ಮ ಸಿದ್ದಾಂತ ಒಪ್ಪದ ಯಾರನ್ನು ದೇಶದ್ರೋಹಿ ಎಂದು ಕರೆಯುವ ಹಾಗಿಲ್ಲ. ಬಿಜೆಪಿ ವ್ಯಕ್ತಿ ಸ್ವಾತಂತ್ರದಲ್ಲಿ ನಂಬಿಕೆಯಿರಿಸಿತ್ತು. ಈ ತತ್ವಕ್ಕೆ ಬಿಜೆಪಿ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.
ಹಾಗೆಯೇ ತಮ್ಮನ್ನು 1991ರಿಂದ ಇಲ್ಲಿಯವರೆಗೂ ಆರು ಬಾರಿ ಸಂಸದರನ್ನಾಗಿ ಲೋಕಸಭೆಗೆ ಕಳಿಸಿದ ಗಾಂಧಿನಗರ ಜನತೆಗೆ ಎಲ್​​​.ಕೆ ಅಡ್ವಾಣಿಯವರು ಧನ್ಯವಾದ ತಿಳಿಸಿದ್ದಾರೆ. ನನ್ನನ್ನು ಆರು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ ಗಾಂಧಿನಗರ ಜನತೆಗೆ ಧನ್ಯವಾದ. ನಿಮ್ಮ ಪ್ರೀತಿಗೆ ನಾನು ಎಂದೆಂದಿಗೂ ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ಧಾರೆ. ಹಾಗೆಯೇ ಎಲ್​.ಕೆ ಅಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ತರಹದ ಧೀಮಂತ ನಾಯಕರೇ ಸ್ಪರ್ಧಿಸಿ ಗೆದ್ದು ಸಂಸದರಾದ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ದೊರೆತಿದ್ದಕ್ಕೆ ಅಮಿತ್​ ಶಾ ಸಂತಸ ವ್ಯಕ್ತಪಡಿಸಿದ್ದಾರೆ.