ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಶಾಸಕನ ವಿರುದ್ಧ ಮೋದಿ ಗರಂ; ಯಾರ ಮಗ ಆಗಿದ್ದರೂ ಸರಿ ಪಕ್ಷದಿಂದ ಹೊರ ಹಾಕಿ..

0
290

ಮೊದಲಿನಿಂದ ದೇಶದಲ್ಲಿ ಒಂದು ಮಾತು ಕೇಳಿ ಬರುತಿತ್ತು. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂ ಭಯೋತ್ಪಾದಕ ದೇಶವಾಗುತ್ತೆ, ಎಂದು ಹಲವರು ಹೇಳಿ ಬಿಜೆಪಿ ಪಕ್ಷದಲ್ಲಿ ಗೂಂಡಾಗಳು ಹೆಚ್ಚಾಗುತ್ತಾರೆ ಎನ್ನುವುದು ಪತ್ರಿಪಕ್ಷದ ವಾದವಾಗಿತ್ತು, ಆದರೆ ಅದಕ್ಕೆಲ್ಲ ಮೋದಿಯವರು ಅವಕಾಶ ಮಾಡುವುದಿಲ್ಲ ಎನ್ನುವುದು ಪ್ರತಿಯೊಬ್ಬರಿಗೆ ತಿಳಿದಿತ್ತು. ಅದಕ್ಕೆ ಸಾಕ್ಷಿಯಾಗಿ ಮೋದಿಯವರು ತಮ್ಮ ಪಕ್ಷದ ಶಾಸಕ ಸರ್ಕಾರಿ ಅಧಿಕಾರಿಗಳ ಮೇಲೆ ತೋರಿದ ಗೂಂಡಾಗಿರಿ ತಿಳಿದು ಗರಂ ಆದ ಮೋದಿ ಕೂಡಲೇ ಪಕ್ಷದಿಂದ ಹೊರಹಾಕುವಂತೆ ಹೇಳಿದ್ದಾರೆ.

Also read: ಮೈತ್ರಿ ಶಾಸಕರ ರಾಜೀನಾಮೆಗೆ ಮೋದಿ, ಅಮಿತ್ ಶಾ ಕೈವಾಡವಿಲ್ಲ; ಬಿಜೆಪಿ ಪರ ಜೆಡಿಎಸ್ ಸಚಿವ ಜಿಟಿಡಿ ಬ್ಯಾಟಿಂಗ್, ಬಿಜೆಪಿಪರ ಹೇಳಿಕೆ ನೀಡಲು ಕಾರಣವೇನು??

ಹೌದು ಕೆಲವು ದಿನಗಳ ಹಿಂದೆ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಅವಮಾನಿಸಿದ್ದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯ್‍ ವರ್ಗಿಯಾ ಅವರ ಮಗ ಹಾಗೂ ಶಾಸಕ ಆಕಾಶ್ ವರ್ಗಿಯಾ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದು, ಯಾರ ಮಗ ಆಗಿದ್ದರೂ ಸರಿ, ಪಕ್ಷದಿಂದ ಹೊರ ಹಾಕಿ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಈ ವಿಷಯ ಕುರಿತು ಕೆಂಡಾಮಂಡಲರಾಗಿದ್ದು, ಈ ರೀತಿ ದುರ್ವರ್ತನೆ ತೋರುವ ನಾಯಕರನ್ನು ಮುಲಾಜಿಲ್ಲದೆ, ಯಾವ ನಾಯಕರ ಮಗನೆಂದೂ ನೋಡದೆ ಪಕ್ಷದಿಂದ ಹೊರ ಹಾಕಿ ಎಂದು ಕಿಡಿಕಾರಿ.

Also read: ದೇಶಾದ್ಯಂತ ಒಂದೇ ಮಾದರಿಯ ಡ್ರೈವಿಂಗ್ ಲೈಸೆನ್ಸ್‌ ಜಾರಿ; ಒನ್ ಎಲೆಕ್ಷನ್, ಒನ್ ರೇಷನ್, ಒನ್ ಡ್ರೈವಿಂಗ್ ಲೈಸೆನ್ಸ್‌, ಕೇಂದ್ರ ಸರ್ಕಾರದ ಚಿಂತನೆ!!

ಈ ರೀತಿಯ ಗೂಂಡಾ ವರ್ತನೆಯನ್ನು ನಾವು ಸಹಿಸುವುದಿಲ್ಲ. ಪಕ್ಷದ ವರ್ಚಸ್ಸಿಗೆ ತೊಂದರೆ ಮಾಡುವ ಯಾರೂ ಪಕ್ಷದಲ್ಲಿ ಮುಂದುವರೆಯುವಂತಿಲ್ಲ. ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿ. ಅಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ, ಯಾರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕೆ ಕೆಟ್ಟ ಹೆಸರು ತರುವುದನ್ನು ಸಹಿಸುವುದಿಲ್ಲ.ಇದು ಎಲ್ಲರಿಗೂ ಅನ್ವಯಿಸುತ್ತದೆ. ಅಲ್ಲದೆ ಅಷ್ಟಕ್ಕೆ ಸುಮ್ಮನಾಗದ ಪ್ರಧಾನಿ ಮೋದಿ, ಆಕಾಶ್ ವಿಜಯ್‍ವರ್ಗಿಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರನ್ನು ಸ್ವಾಗತಿಸಿದವರನ್ನೂ ಪಕ್ಷದಿಂದ ಹೊರಗಡೆ ಹಾಕಿ ಎಂದು ಕಿಡಿ ಕಾರಿದ್ದಾರೆ.

ಏನಿದು ವಿಜಯ್​ವರ್ಗೀಯ ಗೂಂಡಾಗಿರಿ?

ಜೂನ್​ 26ರಂದು ಇಂದೋರ್ ನಗರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಇಂದು ಅಧಿಕಾರಿಗಳು ತೆರವುಗೊಳಿಸುತ್ತಿದ್ದರು. ಆದರೆ ಶಾಸಕರು ತಮ್ಮ ಬೆಂಬಲಿಗನ ಕಟ್ಟಡ ತೆರವುಗೊಳಿಸದಂತೆ ಸೂಚನೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಕಟ್ಟಡ ತೆರವುಗೊಳಿಸುತ್ತಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ಆಕಾಶ್, ಸರ್ಕಾರಿ ನೌಕರರೊಬ್ಬರ ಮೇಲೆ ಕ್ರಿಕೆಟ್​ ಬ್ಯಾಟ್​ನಿಂದ ಹಲ್ಲೆ ಮಾಡಿದ ಮಧ್ಯಪ್ರದೇಶ ಬಿಜೆಪಿ ಶಾಸಕ ಆಕಾಶ್​ ವರ್ಗೀಯ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ವಿಪರೀತ ಚರ್ಚೆಗೆ ಗ್ರಾಸವಾಗಿತ್ತು. ಶಾಸಕ ಆಕಾಶ್ ಹಾಗೂ ಆತನ ಬೆಂಬಲಿಗರು ಪೊಲೀಸರು ಹಾಗೂ ಟಿವಿ ವಾಹಿನಿ ಸಿಬ್ಬಂದಿಯ ಎದುರೇ ಸರ್ಕಾರಿ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್ ಹಿಡಿದು ಬೆನ್ನಟ್ಟಿದ್ದರು.

Also read: LPG ಗ್ರಾಹಕರಿಗೆ ಸಿಹಿ ಸುದ್ದಿ; ಎಲ್‍ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ, ಯಾವ ಸಿಲಿಂಡರ್ ಗೆ ಎಷ್ಟು ಇಳಿಕೆ? ಇಲ್ಲಿದೆ ನೋಡಿ ಮಾಹಿತಿ..

ಇದು ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ನಂತರ ಬಂಧನಕ್ಕೊಳಗಾಗಿದ್ದರು. ಅದಾದ ನಂತರವೂ ತಾವು ಮಾಡಿದ್ದನ್ನು ತಪ್ಪು ಎಂದು ಆಕಾಶ್​ ಒಪ್ಪಿಕೊಂಡಿರಲಿಲ್ಲ. ಅದರ ಬದಲು, ಆತ್ಮರಕ್ಷಣೆಗಾಗಿ ಹಲ್ಲೆ ಮಾಡಿದ್ದಾಗಿ ಆಕಾಶ್​ ಹೇಳಿಕೊಂಡಿದ್ದರು. ಜತೆಗೆ ಬಿಜೆಪಿ ಪಕ್ಷ ತಮಗೆ ಕಲಿಸಿರುವುದೇ ಇದನ್ನು, ಮೊದಲು ನಿವೇದನೆ ನಂತರ ಥಳಿಸುವುದು ಎಂದು ಹೇಳುವ ಮೂಲಕ ಪಕ್ಷದ ವಿರುದ್ಧ ಜನಾಭಿಪ್ರಾಯ ಹುಟ್ಟಲು ಕಾರಣರಾಗಿದ್ದರು. ಇದೆಲ್ಲವನ್ನು ತಿಳಿದ ಮೋದಿಯವರು ಶಾಸಕನನ್ನು ಪಕ್ಷದಿಂದ ಹೊರಹಾಕಿದ್ದಾರೆ.