ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ರೈತ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ, ಬಿಜೆಪಿಯ ಮುಂದಿನ ನಡೆಯೇನು?

0
608

Kannada News | Karnataka News

ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಇಂದು ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ರೈತ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ. ಪ್ರಧಾನಿಯವರ ಆಗಮನದ ಉದ್ದೇಶವೇನು ಮತ್ತು ಅವರು ಎಲ್ಲೆಲ್ಲಿ ಭಾಷಣಲಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಇಂದು ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ರೈತ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 2.55 ರ ಸುಮಾರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮದ್ಯಾಹ್ನ ಹೊರಟು, ಭಾರತೀಯ ವಾಯುಸೇನೆಯ ವಿಶೇಷ BBJ ಏರ್ ಕ್ರಾಫ್ಟ್ ಮೂಲಕ 3.46 ರ ಸುಮಾರಿಗೆ ದಾವಣಗೆರೆ ನಗರದ GMIT ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ ಅವರ ಕಾರ್ಯಕ್ರಮಗಳು ಶುರುವಾಗಲಿವೆ.

ಭಾರತೀಯ ವಾಯುಸೇನೆಯ ವಿಶೇಷ BBJ ಏರ್ ಕ್ರಾಫ್ಟ್ ಮೂಲಕ ದಾವಣಗೆರೆಗೆ ಆಗಮಿಸಿದ ನಂತರ ಸಂಜೆ 4 ಗಂಟೆಗೆ ದಾವಣಗೆರೆಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯುವ ಬಿಜೆಪಿ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ರಾಜ್ಯದ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದಾವಣಗೆರೆಯ ಕಾರ್ಯಕ್ರಮದ ನಂತರ ಸಂಜೆ 5.05 ಕ್ಕೆ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ಹೋರಾಡಲಿದ್ದಾರೆ. ಹುಬ್ಬಳ್ಳಿಯಿಂದ ಸಂಜೆ ಸುಮಾರು 6.10 ಕ್ಕೆ ವಿಮಾನದ ಮೂಲಕ ದೆಹಲಿಗೆ ಹೋರಾಡಲಿದ್ದಾರೆ. ಮೋದಿಯವರು ಭಾಷಣವನ್ನು ಆಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ದಾವಣಗೆರೆಯಲ್ಲಿ ಕಾದು ಕುಳಿತ್ತಿದ್ದಾರೆ.

Also Read: ಮೋದಿ ಸರ್ಕಾರ ಬಂದಾಗಿನಿಂದ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗ್ತಿದೆ ಅನ್ನೋರಿಗೆ ಇದನ್ನು ತೋರಿಸಿ, 1.5 ಕೋಟಿ ಉದ್ಯೋಗಗಳು ಸೃಷ್ಟಿಯಾಗ್ತಿವೆ..