ಪ್ರಧಾನಿ ಮೋದಿ ೨೪x7 ಕಾರ್ಯನಿರತ: ಆರ್ ಟಿಐಗೆ ಉತ್ತರ

0
902

ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಕಾರ್ಯ ನಿರತರಾಗಿರುತ್ತಾರೆ. ಎಂದೂ ರಜೆ ತೆಗೆದುಕೊಂ ಡಿಲ್ಲ ಎಂದು ಪ್ರಧಾನಿ ಕಚೇರಿ ಆರ್ ಟಿಐಗೆ ಉತ್ತರ ನೀಡಿದೆ.

ಪ್ರಧಾನಿ ಅವರ ರಜೆಯ ವಿವರ, ಕೆಲಸದ ವೈಖರಿ ಹಾಗೂ ರಜೆ ಪಡೆಯುವ ನಿಯಮದ ಕುರಿತು ಆರ್ ಟಿಐ ನಲ್ಲಿ ಕೇಳಲಾದ ಪ್ರಶ್ನೆಗೆ ಪ್ರಧಾನಿ ಕಚೇರಿ ಉತ್ತರ ನೀಡಿದೆ.

ಅರ್ಜಿದಾರರು ಮೋದಿ ಅಲ್ಲದೇ ಈ ಹಿಂದಿನ ಪ್ರಧಾನಿ ಗಳಾದ ಮನಮೋಹನ್ ಸಿಂಗ್, ವಾಜಪೇಯಿ, ದೇವೇ ಗೌಡ ಸೇರಿದಂತೆ ಹಲವರ ರಜೆಯ ವಿವರ ಕೇಳಿದ್ದರು. ಆದರೆ ಈ ಹಿಂದಿನ ಪ್ರಧಾನಿಗಳ ರಜೆ ವಿವರ ಇಲ್ಲ ಎಂದು ಉತ್ತರಿಸಿದೆ.