ಮೋದಿ ಜಪಾನ್ ಭೇಟಿಯ ಹಿಂದೆ ಇದೆ ಈ ಮಾಸ್ಟರ್ ಪ್ಲಾನ್…!!

0
1303

ಮುಂಬೈ-ಅಹಮದಾಬಾದ್ ನಡುವಣ ಅತಿ ವೇಗದ ರೈಲು ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರು ಜಪಾನ್ ನ ಶಿಂಕಾನ್ಸೆನ್ ರೈಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ-ಜಪಾನ್ ದ್ವಿಪಕ್ಷೀಯ ವಾರ್ಷಿಕ ಸಮಾವೇಶಕ್ಕಾಗಿ ಮೂರು ದಿನಗಳ ಜಪಾನ್ ಪ್ರವಾಸ ಕೈಗೊಂಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೊ ಅಬೆ ಜೊತೆ ವಿಶ್ವದ ಅತಿ ವೇಗದ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ. ಭಾರತದ ಅತಿ ವೇಗದ ರೈಲು ಮಾರ್ಗ ಗುತ್ತಿಗೆ ಸಂಬಂಧ ಚೀನಾ ಮತ್ತು ಜಪಾನ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿರುವ ಮಧ್ಯೆ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

12-1478942607-narendra-modi-shinkansen-01

ಜಪಾನ್ ಸಹಾಯದಿಂದ ಭವಿಷ್ಯದಲ್ಲಿ ಮತ್ತಷ್ಟು ರೈಲು ಮಾರ್ಗವನ್ನು ನಿರ್ಮಿಸುವುದು ಕೇಂದ್ರ ಸರಕಾರದ ಇರಾದೆಯಾಗಿದೆ. ಶಿಂಕಾನ್ಸೆನ್ ರೈಲಿನ ತಂತ್ರಜ್ಞಾನ ಅಳವಡಿಸಿಕೊಂಡು ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ರೈಲು ತಲೆಯೆತ್ತಲಿದೆ ಎಂಬುದಿಲ್ಲಿ ಗಮನಾರ್ಹವೆನಿಸುತ್ತದೆ. ಪ್ರಸ್ತುತ ಯೋಜನೆಯು ಮುಂಬೈ ಹಾಗೂ ಅಹಮಾದಾಬಾದ್ ನಡುವಣ ಪ್ರಮುಖ ನಗರಗಳಾದ ಥಾಣೆ, ವಿರಾರ್, ಸೂರತ್, ಭರುಚ್ ಮತ್ತು ವಡೋದರಾ ಸೇರಿದಂತೆ 11 ನಿಲ್ದಾಣಗಳನ್ನು ಸಂಪರ್ಕಿಸಲಿದೆ.

12-1478942638-narendra-modi-shinkansen-06

 

ಶಿಂಕಾನ್ಸೆನ್ ಬುಲೆಟ್ ರೈಲು ಗಂಟೆಗೆ 240 ಕೀ.ಮೀ. ಗಳಿಂದ 320 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.ಕಳೆದೆರಡು ವರ್ಷಗಳಲ್ಲಿ ಎರಡನೇ ಬಾರಿಗೆ ಜಪಾನ್ ಭೇಟಿ ಮಾಡುತ್ತಿರುವ ನರೇಂದ್ರ ಮೋದಿ, ಶಿಂಕಾನ್ಸೆನ್ ಬುಲೆಟ್ ರೈಲಿನ ಬಗ್ಗೆ ಮತ್ತಷ್ಟು ಆಳವಾಗಿ ಅರಿಯಲು ಉತ್ಸುಕತೆ ವ್ಯಕ್ತಪಡಿಸಿದ್ದರು.

ಮುಂಬೈ-ಅಹಮದಾಬಾದ್ ನಡುವಣ ಭಾರತದ ಅತಿ ವೇಗದ ಬುಲೆಟ್ ರೈಲು ಯೋಜನೆ 2018ರಲ್ಲಿ ಆರಂಭವಾಗಲಿದ್ದು, 2023ರಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ಈ ಸಂಬಂಧ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತಾನಾಡಿದ ಮೋದಿ, ವರ್ಷಾಂತ್ಯದೊಳಗೆ ಯೋಜನೆಯ ವಿನ್ಯಾಸಗೊಳಿಸಲಾಗುವುದು ಎಂದಿದ್ದಾರೆ. ಬುಲೆಟ್ ರೈಲಿಗೆ ಸಂಬಂಧಪಟ್ಟ ಎಲ್ಲ ತಾಂತ್ರಿಕ ವಿಜ್ಞಾನ, ಪರಿಣಿತ ಕೆಲಸಗಾರರು, ತಯಾರಕ ಯಂತ್ರ ಮತ್ತು ನಿರ್ವಹಣೆಯನ್ನು ಜಪಾನ್ ಭಾರತದ ಜೊತೆ ಹಂಚಿಕೊಳ್ಳಲಿದೆ. ಇದು ಕೂಡಾ ಮೇಕ್ ಇನ್ ಇಂಡಿಯಾ ಭಾಗವಾಗಿದ್ದು, ಶೇಕಡಾ 20ರಷ್ಟು ಬಿಡಿಭಾಗಗಳನ್ನು ಮಾತ್ರ ಜಪಾನ್ ನಿಂದ ಆಮದು ಮಾಡಿಕೊಳ್ಳಲಾಗುವುದು. .

12-1478942644-narendra-modi-shinkansen-07

ಇದರೊಂದಿಗೆ ಮುಂಬೈ-ಅಹಮದಾಬಾದ್ ನಡುವಣ ಪ್ರಯಾಣ ಅವಧಿ ಏಳು ತಾಸಿನಿಂದ ಬರಿ ಎರಡು ಗಂಟೆಗಳಿಗೆ ಇಳಿಕೆಯಾಗಲಿದೆ. ಈ ಎರಡು ನಗರಗಳ ಅಂತರ 534 ಕೀ.ಮೀ.ಗಳಾಗಿವೆ.

97,636 ಕೋಟಿ ರುಪಾಯಿಗಳ ಈ ಮಹತ್ತರ ಯೋಜನೆಯ ಬಹುಪಾಲು ಅಂದರೆ ಶೇಕಡಾ 81ರಷ್ಟು (ಅಂದಾಜು 79,380 ಕೋಟಿ ರು. ) ಆರ್ಥಿಕ ನೆರವನ್ನು ನೀಡಲಿರುವ ಜಪಾನ್ ಇಂಟರ್ ನ್ಯಾಷನಲ್ ಕಾರ್ಪೋರೇಷನ್ ಏಜೆನ್ಸಿ ‘ಸಾಫ್ಟ್ ಲೋನ್’ ಪ್ರಕಾರ ಶೇಕಡಾ 0.1 ರಷ್ಟು ಬಡ್ಡಿದರವನ್ನು ಈಡು ಮಾಡಲಿದೆ. ಉಳಿದ ಶೇಕಡಾ 20ರಷ್ಟು ಸಾಲವನ್ನು ಕೇಂದ್ರ ಸರಕಾರ (20,000 ಕೋಟಿ ರು.) ಒದಗಿಸಲಿದೆ. ಮೊದಲ 15 ವರ್ಷಗಳಲ್ಲಿ ಸಾಲ ಮರು ಪಾವತಿಗೆ ಜಪಾನ್ ರಿಯಾಯಿತಿ ನೀಡಿರುವುದರಿಂದ 16ನೇ ವರ್ಷದಿಂದ ಭಾರತೀಯ ರೈಲ್ವೆ ನಿಜವಾದ ಸವಾಲು ಎದುರಾಗಲಿದೆ. ಸಾಲ ಮರುಪಾವತಿ ಅವಧಿ 50 ವರ್ಷಗಳಾಗಿದ್ದು, ಯೋಜನೆ ಆರಂಭಗೊಂಡ 16ನೇ ವರ್ಷದಿಂದ ಸಾಲ ಮರುಪಾವತಿಯು ಶೇಕಡಾ 0.1ರಲ್ಲಿ ಆರಂಭಗೊಳ್ಳುತ್ತದೆ.