ಮೋದಿ ಸರ್ಕಾರ ಕೇಂದ್ರದ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ, CBI ಆಯ್ತು ಈಗ RBI-ನಲ್ಲಿ ಉಂಟಾಗಿದ್ದ ಭಿನ್ನಪ್ರಾಯಕ್ಕೆ  ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ಸಾಧ್ಯತೆ..!

0
384

ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಗವರ್ನರ್‌ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಅಂತ್ಯಗೊಂಡಿದೆ.. ಈ ಮಧ್ಯೆಯೇ, ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮವಾಗಿ ಕರೆನ್ಸಿಮಾರುಕಟ್ಟೆಯಲ್ಲಿ  ರೂಪಾಯಿ ಕುಸಿದಿದೆ.


Also read: ಇತ್ತ ಜಗತ್ತಿನ ಅತ್ಯಂತ ದೊಡ್ದದ್ದಾದ ಸರ್ದಾರ್ ಪಟೇಲ್-ರವರ ಪ್ರತಿಮೆ ಅನಾವರಣಗೊಂಡರೆ, ಅತ್ತ ಗುಜರಾತ್-ನ RSS ಕಚೇರಿಯಲ್ಲಿ ಪಟೇಲ್-ರ ವಿರೋಧಿಸುವ ಪುಸ್ತಕ ಮಾರಾಟವಾಗುತ್ತಿದೆ!!

ಆರ್‌ಬಿಐ ಕಾಯ್ದೆಯ ಸೆ.7ರಡಿ ಭಾರತ ಸರ್ಕಾರಕ್ಕೆಸಾರ್ವಜನಿಕ ಹಿತಾಸಕ್ತಿಯಲ್ಲಿ ಮತ್ತು ರೂಪಾಯಿ ಸ್ಥಿರತೆ ಮತ್ತುನಗದು ಲಭ್ಯತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಮೀಸಲುನಿಧಿಯನ್ನು ಬಳಸುವುದಕ್ಕೆ ಆರ್‌ಬಿಐಗೆ ಸೂಚನೆ ನೀಡುವಅಧಿಕಾರ ಇದೆ. ಡಾಲರ್‌ ಎದುರು ಹೊಸ ಹೊಸ ತಳಮಟ್ಟಕಾಣುತ್ತಿರುವ ರೂಪಾಯಿಯನ್ನು ಕರೆನ್ಸಿ ಮಾರುಕಟ್ಟೆಯಲ್ಲಿಆಧರಿಸಲುಕೇಂದ್ರ ಸರ್ಕಾರ ಆರ್‌ಬಿಐ ಕಾಯ್ದೆಯ ಸೆ.7ಪ್ರಯೋಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸರ್ಕಾರ ಇದನ್ನುಪ್ರಯೋಗಿಸಿದಲ್ಲಿ ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡುವಸಾಧ್ಯತೆ ಇದೆ ಎನ್ನಲಾಗಿದೆ.


Also read: ಎಷ್ಟೇ ಪ್ರಯತ್ನ ಪಟ್ಟರು ಮದ್ಯಪಾನ ಬಿಡಲು ಸಾದ್ಯವಾಗುತ್ತಿಲ್ವ? ಹಾಗಾದ್ರೆ ಇದೊಂದು ಮಾಡಿ ನೋಡಿ ಶಾಶ್ವತವಾಗಿ ಮದ್ಯಪಾನ ಮುಕ್ತರಾಗುತ್ತಿರ..
ಕೇಂದ್ರ ಸರ್ಕಾರ ವಾರಗಳಲ್ಲಿ ಆರ್‌ಬಿಐ ಗವರ್ನರ್‌ಗೆಪತ್ರ ಬರೆದು ಆರ್‌ಬಿಐ ಕಾಯಿದೆ ಸೆ.7ನ್ನು ಪ್ರಯೋಗಿಸುವಸೂಚನೆ ನೀಡಿದೆ ಎನ್ನಲಾಗಿದೆ. ತನ್ಮೂಲಕ ಬ್ಯಾಂಕೇತರಹಣಕಾಸು ಕಂಪೆನಿಗಳಿಗೆ ನಗದು ಲಭ್ಯತೆ, ದುರ್ಬಲಬ್ಯಾಂಕುಗಳಿಗೆ ಅಗತ್ಯ ಬಂಡವಾಳದ ಪೂರೈಕೆ ಮತ್ತು ಸಣ್ಣಹಾಗೂ ಮಧ್ಯಮ ಕಂಪೆನಿಗಳಿಗೆ ಸಾಲ ನೀಡುವಿಕೆಯ ನಿಟ್ಟಿನಲ್ಲಿಸೂಚನೆಗಳನ್ನು ನೀಡಿದೆ.


Also read: ನಿಮ್ಮ ವಾಹನಗಳನ್ನು ಕಳವು ಮಾಡ್ತಾರೆ ಎಂಬ ಚಿಂತೆ ಬಿಟ್ಟು ಬಿಡಿ; ಕಳ್ಳರಿಗೆ ಚೆಳ್ಳೆಹಣ್ಣು ತಿನಿಸಲು ಬಂದಿದೆ ಮೊಬೈಲ್ ಸಿಮ್ ತಂತ್ರಜ್ಞಾನ..
ಇತ್ತ ಇಂದು ಹಣಕಾಸು ಸಚಿವಾಲಯ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದರಂತೆ ಆರ್‌ಬಿಐ ಕಾಯ್ದೆಯ ಚೌಕಟ್ಟಿನಲ್ಲಿಸ್ವಾಯತ್ತತೆಯನ್ನು ಸರ್ಕಾರ ಎಂದಿಗೂ ಗೌರವಿಸುತ್ತದೆ, ಅದನ್ನುಈ ವರೆಗೂ ಪಾಲನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಹಲವುವಿಷಯಗಳಲ್ಲಿ  ವ್ಯಾಪಕ ಸಮಾಲೋಚನೆಗಳನ್ನೂನಡೆಸಲಾಗಿದೆ ಎಂದು ಹೇಳಿದೆ.  ಕೇಂದ್ರ ಸರ್ಕಾರ ಹಾಗೂಆರ್‌ಬಿಐ ಎರಡೂ ಸಹ ಸಾರ್ವಜನಿಕ ಹಿತಾಸಕ್ತಿಯನ್ನು,ದೇಶದ ಆರ್ಥಿಕತೆಯನ್ನು ಮುಂದಿಟ್ಟುಕೊಂಡು ನಡೆಯಬೇಕಿದೆಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ.