ಪ್ರಧಾನಿ ಮೋದಿಯವರೇ ಹುಷಾರಾಗಿರಿ…

0
1064

ನಮ್ಮ ದೇಶದ ಜನ ಯಾವುದಾದರೂ ಕೆಲಸ ಆಗಬೇಕು ಎಂದರೆ ಎಂತ ಕೀಳು ಮಟ್ಟಕ್ಕಾದರೂ ಇಳಿಯುತ್ತಾರೆ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬೇರೊಬ್ಬರ ಸಹಿಯನ್ನು ನಕಲು ಮಾಡಿ ವಂಚನೆ ಮಾಡುವುದು ಈಗಿನ ಕಾಲದಲ್ಲಿ ಸರ್ವೇ ಸಾಮಾನ್ಯ. ಆದರೆ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವ ಪ್ರಧಾನಿ ಅವರ ಸಹಿಯನ್ನೇ ನಕಲು ಮಾಡುತ್ತಾರೆ ಎಂದರೆ ನೀವು ನಂಬಲೇ ಬೇಕು ಕಣ್ರೀ…

ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ಸಹಿಯನ್ನು ನಕಲಿ ಮಾಡಿದ್ದ ಜಾರ್ಖಂಡ್ ಮೂಲದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಗೀತ ಕಾರ್ಯಕ್ರಮ ಏರ್ಪಡಿಸುವಂತೆ ಬರೆದ ಪತ್ರಕ್ಕೆ ಮೋದಿ ಅವರ ನಕಲಿ ಸಹಿಯನ್ನು ಮಾಡಿ ಕಳುಹಿಸಲಾಗಿತ್ತು. ಈ ಪತ್ರ ಪ್ರಧಾನ ಮಂತ್ರಿಗಳ ಕಚೇರಿಗೆ ತಲುಪಿತ್ತು.ಮೋದಿ ಅವರು ಈ ರೀತಿಯ ಯಾವುದೇ ಸಂವಹನ ನಡೆಸಿಲ್ಲ ಎಂದು ತಿಳಿದು ಬಂದ ಮೇಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಯಿತು. ಪ್ರಾಥಮಿಕ ತನಿಖೆ ನಡೆಸಿದ ಸಿಬಿಐ ಕೇಸು ದಾಖಲಿಸಿತು.

ಈ ಸಂಬಂಧ ಜಾರ್ಖಂಡ್ ನಿವಾಸಿಗಳಾದ ಪಂಡಿತ್ ಸ್ವರಾಜ್ ಕುಮಾರ್ ರಾಯ್ ಮತ್ತು ಸುವೇಂದು ಕುಮಾರ್ ಬರ್ಮಾನ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಜುಲೈ 27 ರವರೆಗೂ ಸಿಬಿಐ ವಶಕ್ಕೆ ನೀಡಲಾಗಿದೆ.ಜಾರ್ಖಂಡ್ ನ ಬೊಕಾರೋ ಸ್ಟೀಲ್ ಸಿಟಿ ಮತ್ತು ಪಶ್ಚಿಮ ಬಂಗಾಳದ ಬಿಶನ್ ಪುರ್ ಜಿಲ್ಲೆಯ ಬಂಪುರ್ ನಲ್ಲಿ ಪರಿಶೀಲನೆ ನಡೆಸಲವಾಯಿತು. ಈ ವೇಳೆ ಆರೋಪಿಗಳ ಬಳಿ ಫೋರ್ಜರಿ ಮಾಡಿದ್ದ ಹಲವು ದಾಖಲೆಗಳು ಹಾಗೂ ಮೋದಿ ಅವರ ನಕಲಿ ಸಹಿ ಮಾಡಿದ್ದ ಕಾಗದ ಪತ್ರಗಳು ಇದ್ದು, ಅವುಗಳನ್ನೆಲ್ಲಾ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ