ಮೋದಿ, ಟ್ರಂಪ್ ಮಹಿಮೆ;ಪಾತಾಳಕ್ಕೆ ಕುಸಿದ ಶೇರುಪೇಟೆ,7ಲಕ್ಷ ಕೋಟಿ ನಷ್ಟ

0
768

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಗಣನೆಯಲ್ಲಿ ಡೆಮೋಕ್ರಾಟಿಕ್‌ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗಿಂತ ರಿಪಬ್ಲಿಕನ್‌ ಅಭ್ಯರ್ಥಿ ಡೋನಾಲ್ಡ್‌ ಟ್ರಂಪ್‌ ಅವರು ಮುಂದಿರುವುದರ ಬಗ್ಗೆ ಕಳವಳ ಹೊಂದಿರುವ ವಿಶ್ವ ಶೇರು ಮಾರುಕಟ್ಟೆಯನ್ನು ಅನುಸರಿಸಿರುವ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿದೆ.

ಶೇರು ಪೇಟೆಯ ಈ ಭಾರೀ ಕುಸಿತದಿಂದಾಗಿ ಒಂದೇ ದಿನದ ಅಂತರದಲ್ಲಿ ಶೇರು ಹೂಡಿಕೆದಾರರು ಏಳು ಲಕ್ಷ ಕೋಟಿ ರೂ.ಗಳ ನಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಮಾರುಕಟ್ಟೆ ಅಂದಾಜು ತಿಳಿಸಿದೆ.

ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌ 1,050.07 ಅಂಕಗಳ ನಷ್ಟದೊಂದಿಗೆ 26,541.07 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 348.70 ಅಂಕಗಳ ನಷ್ಟದೊಂದಿಗೆ 8,199.75 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಸೆನ್ಸೆಕ್ಸ್‌ ಇಂದಿನ ಆರಂಭಿಕ ವಹಿವಾಟಿನಲ್ಲಿ 1,688.69 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಶೇ.6.12ರ ನಷ್ಟಕ್ಕೆ ಗುರಿಯಾಗುವ ಮೂಲಕ ಅದು 25,902.45ರ ತಳ ಮಟ್ಟವನ್ನು ತಲುಪಿತ್ತು. ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳಲ್ಲಿ ಇಂದು ಹೂಡಿಕೆದಾರರು ಮತ್ತು ವಹಿವಾಟುದಾರರು ಮನಬಂದ ದರಕ್ಕೆ ತಮ್ಮಲ್ಲಿನ ಶೇರುಗಳು ಒಂದೇ ಸಮನೆ ಮಾರತೊಡಗಿರುವುದೇ ತೀವ್ರ ಆತಂಕ ಸೃಷ್ಟಿಗೆ ಕಾರಣವಾಗಿತ್ತು.

ಕೇಂದ್ರ ಸರಕಾರ ನಿನ್ನೆ ಮಂಗಳವಾರ ಮಧ್ಯ ರಾತ್ರಿಯಿಂದ ಜಾರಿಗೆ ಬರುವಂತೆ 500 ರೂ. ಹಾಗೂ 1,000 ರೂ.ಗಳ ನೋಟುಗಳನ್ನು ರದ್ದು ಮಾಡಿರುವ ಕಾರಣ ಬ್ಯಾಂಕ್‌ ಶೇರುಗಳು ಇಂದು ತೀವ್ರವಾಗಿ ಕುಸಿದವು.