ಟ್ವಿಟರ್ ನಲ್ಲಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಗೆ ವ್ಯಾಪಕ ಆಕ್ಷೇಪ!

0
801

ಕೆಲ ದಿನಗಳ ಹಿಂದಷ್ಟೇ ಪತ್ನಿಯೊಂದಿಗಿರುವ ಫೋಟೋವೊಂದನ್ನು ಮೊಹಮ್ಮದ್ ಶಮಿಯವರು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು. ಫೋಟೋದಲ್ಲಿ ಶಮಿ ಅವರ ಪತ್ನಿ ಬುರ್ಖಾ ಧರಿಸಿರಲಿಲ್ಲ. ಈ ಫೋಟೋಗೆ ಕೆಲ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಇದರಂತೆ ಶಮಿ ಅವರ ಬೆಂಬಲಕ್ಕೆ ಕ್ರಿಕೆಟರ್ ಮೊಹಮ್ಮದ್ ಕೈಫ್ ಅವರೂ ಕೂಡ ಬಂದು, ಕಾಮೆಂಟ್ ಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈಗ ಮೊಹಮ್ಮದ್ ಕೈಫ್ ಸೂರ್ಯ ನಮಸ್ಕಾರ ಮಾಡುವ ಚಿತ್ರಗಳನ್ನು ತಮ್ಮ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ ಅವರಿಗೂ ಕೂಡ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.

capture

ಕೈಫ್ ಅವರು ತಮ್ಮ ಟ್ವೀಟ್ ನಲ್ಲಿ 4 ಚಿತ್ರಗಳಿದ್ದು ‘ಸೂರ್ಯ ನಮಸ್ಕಾರ ದೇಹಕ್ಕೆ ಪರಿಪೂರ್ಣ ತಾಲೀಮು, ಯಾವುದೇ ಉಪಕರಣಗಳ ಅಗತ್ಯಲ್ಲವಿದೆ ಮಾಡಬಹುದಾದ ಸಮಗ್ರ ವ್ಯಾಯಾಮ ರೂಪ’ ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೆ ಕೆಲವು ಸ್ವಘೋಷಿತ ‘ಧಾರ್ಮಿಕ ಸಂತರು’ ಸೂರ್ಯ ನಮಸ್ಕಾರ ಮಾಡಲು ಇಸ್ಲಾಂನಲ್ಲಿ ಅವಕಾಶವಿಲ್ಲ ಮತ್ತು ಅದು ಇಸ್ಲಾಂನ ಕಾನೂನಿಗೆ ವಿರೋಧ ಎಂದು ಹಲವರು ಟ್ವೀಟ್‌ ಮಾಡಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

MD iftikhar kazmi ಅವರ ಟ್ವೀಟ್ ಗೆ ಕೈಫ್ ಅವರ ಉತ್ತರ ನೀವೇ ನೋಡಿ

capture1

ಅಂತಹ ಭಾರೀ ಟೀಕೆಗಳಿಗೆ ಶಾಂತವಾಗಿ ಉತ್ತರಿಸಿದ ಕೈಫ್ ‘ಎಲ್ಲಾ 4 ಚಿತ್ರಗಳಲ್ಲಿಯೂ ನನ್ನ ಮನಸ್ಸಿನಲ್ಲಿ ಅಲ್ಲಾ ಇದ್ದು. ಯಾವುದೇ ವ್ಯಾಯಾಮ ಮಾಡುವುದರಿಂದ ಧರ್ಮಕ್ಕೆ ಹೇಗೆ ಅಪಚಾರವಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಸೂರ್ಯ ನಮಸ್ಕಾರ ಅಥವಾ ಜಿಮ್ ಮಾಡುವುದರಿಂದ ಎಲ್ಲರಿಗೂ ಪ್ರಯೋಜನವಿದೆ’ ಎಂದು ಪುನಃ ಟ್ವೀಟ್‌ ಮಾಡಿದ್ದಾರೆ.

capture-2