ಈ ಖತರ್ನಾಕ್ ಖದೀಮರು ಒಂದು ಬ್ಯಾಂಕ್-ನಿಂದ ಇನ್ನೊಂದು ಬ್ಯಾಂಕ್-ಗೆ 3 ಕೋಟಿ ಕಟ್ಟಲು ಹೋಗಿ ಸಿಕ್ಕಿ ಬಿದ್ದಿದ್ದನ್ನು ನೋಡಿದರೆ, ಹೀಗೂ ಉಂಟೆ ಅಂತ ಹೇಳ್ತಿರ!!

0
365

ಆನ್‍ಲೈನ್ ಮೂಲಕ ಕೋಟಿ ಕೋಟಿ ವಂಚನೆ ಮಾಡಿದ, ಖತರ್ನಾಕ್ ಕಳ್ಳರ ಬಂಧನ; ತಾವೇ ತೋಡಿದ ಹಳ್ಳಕೆ ಬಿದ್ದ ವಂಚಕರ ಬಳಿ ಸಿಕ್ಕಿದ್ದು ಬರೋಬರಿ 3 ಕೋಟಿ. ಭಾರತದಲ್ಲಿ ಡಿಜಿಟಲ್ ಮಯವಾಗಿ ಆನ್ಲೈನ್ ಮೂಲಕ ವ್ಯವಹಾರ ಸುರಕ್ಷಿತವೆಂದು ಕ್ಯಾಶ್ ಲೆಸ್ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಆನ್ಲೈನ್ ವಂಚನೆಗಳು ಜನರನ್ನು ಬೆಚ್ಚಿ ಬೆಳ್ಳಿಸಿವೆ ಏಕೆಂದರೆ ಜನರಿಗೆ ಆನ್ಲೈನ್ ಬ್ಯಾಂಕಿಂಗ್ ವ್ಯವಹಾರ ಹೇಗೆ ಅನುಕೂಲವಾಗಿದೆ ಹಾಗೆಯೇ ವಂಚಕರಿಗೆ ಹೆಚ್ಚಿನ ಅನುಕೂಲವಾಗಿದೆ. ಇದಕ್ಕೆ ಸಾಕ್ಷಿಯಾಗಿ. 3 ಕೋಟಿ ವಂಚನೆ ಮಾಡಿ. ತಮ್ಮ ಅಕೌಂಟ್ -ಗೆ ಜಮೆ ಮಾಡುವ ವೇಳೆ ಸಿಕ್ಕ ಬಿದ್ದಿದ್ದಾರೆ.

Also read: ರಾಜ್ಯದಲ್ಲೇ ಇರುವ ವಿಚಿತ್ರ ಸಂಪ್ರದಾಯ; ಮನೆಯಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಇಡಿ ಕುಟುಂಬದವರಿಗೆ ಬಿಳ್ಳುತ್ತೆ ಬೇಡಿ..

ಏನಿದು ಆನ್ಲೈನ್ ಪ್ರಕರಣ?

ಹೌದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೇಗೆ ಮುಂದುವರೆದು ಗ್ರಾಹಕರಿಗೆ ಅನುಕೂಲ ಮಾಡುತ್ತಿದಿಯೋ ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕಳ್ಳರು ಕೂಡ ಅಪ್‌ಡೇಟ್ ಆಗಿದ್ದಾರೆ, ಯಾವ ಮಾರ್ಗದಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ಹೊಂಚು ಹಾಕಿ ಕುಳಿತಿರುತ್ತಾರೆ. ಆನ್‌ಲೈನ್‌ ಮೂಲಕ ವಂಚಿಸಿ ಬಳಿಕ ಮತ್ತೊಂದು ಬ್ಯಾಂಕಿಗೆ ಕನ್ನ ಹಾಕಲು ಬಂದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬರೋಬ್ಬರಿ 3 ಕೋಟಿ ರೂಪಾಯಿ ಡ್ರಾ ಮಾಡಿದ್ದ ಖದೀಮರು ಬೇರೆ ಬ್ಯಾಂಕ್‍ಗೆ ಹಾಕಲು ಬಂದಾಗ ಸಿಕ್ಕಿ ಹಾಕಿಕೊಂಡಿದ್ದು, ಇದೀಗ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪರಿಶಿತ್ ನಾಯ್ಡು, ಗುರು ಮತ್ತು ರಂಗಸ್ವಾಮಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಮೂವರು ವ್ಯಕ್ತಿಗಳು ಕೋಟಿ ಕೋಟಿ ಹಣವನ್ನು ಬ್ಯಾಂಕ್‍ಗೆ ಕಟ್ಟಲು ನಂಬರ್ ಇಲ್ಲದ ಹೊಸ ಸ್ಕೋಡಾ ಕಾರಿನಲ್ಲಿ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕ್‍ಗೆ ಬಂದಿದ್ದರು. ಹಣ ನೋಡಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಭಯ ಭೀತರಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ನೆಲಮಂಗಲ ಟೌನ್ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಹಣ ಯಾರಿಗೆ ಸೇರಿದ್ದು ಎಂದು ವಿಚಾರಣೆ ಶುರು ಮಾಡಿದ್ದಾರೆ. ಆರೋಪಿಗಳು ಮೂರು ದೊಡ್ಡ ಬ್ಯಾಗಿನಲ್ಲಿ ಹಣವನ್ನು ತಂದಿದ್ದರು. ಈ ಮೂವರು ಆನ್ ಲೈನ್ ಮೂಲಕ ವಂಚನೆ ಮಾಡಿ ಬರೋಬ್ಬರಿ 3 ಕೋಟಿ ಹಣವನ್ನು ಬೆಂಗಳೂರಿನ ರಾಮಮೂರ್ತಿನಗರದ ಐಸಿಐಸಿಐ ಬ್ಯಾಂಕಿನಿಂದ ಡ್ರಾ ಮಾಡಿದ್ದರು. ಡ್ರಾ ಮಾಡಿದ್ದ ಹಣವನ್ನು ಬೇರೆ ಅಕೌಂಟ್‍ಗೆ ಹಾಕಲು ಬಂದಿದ್ದಾಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

Also read: ವ್ಯಕ್ತಿ ಸತ್ತನೆಂದು ಅಂತ್ಯಸಂಸ್ಕಾರ ಮಾಡಿ ತಿಥಿ ನಡೆದು ಎರಡು ದಿನದ ನಂತರ ಮನೆಗೆ ಮರಳಿದ ವ್ಯಕ್ತಿ!!

ಈ ಕಳ್ಳರು ವಂಚಿಸಿದ್ದ ಮೂರು ಕೋಟಿಯಲ್ಲಿ ನೆಲಮಂಗಲದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಿದ್ದರು. ಆರೋಪಿಗಳು ನಕಲಿ ಫೋನ್ ನಂಬರ್ ಉಪಯೋಗಿಸಿ ಹಣವನ್ನು ಡ್ರಾ ಮಾಡಿದ್ದರು. ಸದ್ಯ ಇವರ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದೆ. ಇದೆಲ್ಲವನ್ನು ನೋಡಿದರೆ ಆನ್ಲೈನ್ ಮೂಲಕ ವ್ಯವಹಾರವನ್ನು ಮಾಡುವುದು ಸುರಕ್ಷಿತವಲ್ಲ ಅನಿಸುತ್ತೆ, ಆದಕಾರನಕ್ಕೆ ದೊಡ್ಡ ಮೊತ್ತ ಹೊಂದಿರುವ ಅಕೌಂಟ್-ನ್ನು ಆನ್ಲೈನ್ ಬ್ಯಾಂಕಿಂಗ್ ಮಾಡಲು ಉಪಯೋಗಿಸದೆ ಇರುವುದು ಒಳ್ಳೆಯದು.