ಎಟಿಎಂ ಬಳಕೆದಾರರಿಗೆ ಸಿಹಿಸುದ್ದಿ; ಇನ್ಮುಂದೆ’ ಎಲ್ಲ ಎಟಿಎಂಗಳಲ್ಲಿ ಹಣ ಜಮೆ ಮಾಡಬಹುದು.!

0
119

ಬ್ಯಾಂಕಿಂಗ್ ಸೇವೆಯಲ್ಲಿ ಎಟಿಎಂ ಸೇವೆ ಎನ್ನುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ, ಏಕೆಂದರೆ ಬ್ಯಾಂಕಿನ ಅರ್ಧದಷ್ಟು ಕೆಲಸಗಳು ಎಟಿಎಂ-ಗಳಲ್ಲಿ ನಡೆಯುತ್ತಿದ್ದು ಕೇವಲ ಹಣ ಡ್ರಾ ಮಾಡಲು ಮಾತ್ರವಲ್ಲ, ಹಣ ಜಮಾ ಮಾಡಲು ಕೂಡ ಮಷಿನ್ ಬಂದಿದ್ದು, ಜನರಿಗೆ ಮತ್ತಷ್ಟು ಅನುಕೂಲವಾಗಿದೆ. ಈಗ ಈ ಸೇವೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಉನ್ನತ ಬ್ಯಾಂಕುಗಳನ್ನು ತಮ್ಮ ಎಟಿಎಂ ಮತ್ತು ಶಾಖೆಗಳಲ್ಲಿ ನಗದು ಠೇವಣಿ ಮಾಡಲು ಅವಕಾಶ ನೀಡುವುದಕ್ಕೆ ಮುಂದಾಗಿದೆ.

ಎಲ್ಲಾ ಬ್ಯಾಂಕ್-ಗಳಲ್ಲಿ ನಗದು ಠೇವಣಿ?

ಹೌದು ಇನ್ಮುಂದೆ ನಗದು ಹಣ ಜಮೆ ಮಾಡಲು ನಿಮ್ಮದೇ ಬ್ಯಾಂಕಿನ ಶಾಖೆ ಹುಡುಕಿ ಹೋಗಬೇಕಿಲ್ಲ, ಸಮೀಪದ ಯಾವುದೇ ಬ್ಯಾಂಕ್‌ ಶಾಖೆಗಳು ಅಥವಾ ಎಟಿಎಂಗಳಲ್ಲಿ ಯಾವುದೇ ಬ್ಯಾಂಕಿನ ಗ್ರಾಹಕರಾದರೂ ಹಣ ಕಟ್ಟುವ ಅವಕಾಶ ಸದ್ಯದಲ್ಲೇ ದೊರೆಯಲಿದೆ. ಇಂಥ ಅವಕಾಶ ಸೃಷ್ಟಿಸಲು ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ(ಎನ್‌ಪಿಸಿಐ) ಮುಂದಾಗಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರಮುಖ ಖಾಸಗಿ ಮತ್ತು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚಿಸಿದೆ. ಇದಕ್ಕಾಗಿ ಪರಸ್ಪರ ಸಂಪರ್ಕ ಕಲ್ಪಿಸುವ ಜಾಲವನ್ನು ಸೇರುವಂತೆ ಪ್ರಮುಖ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.

ನ್ಯಾಷನಲ್‌ ಫೈನಾನ್ಸ್‌ ಸ್ವಿಚ್‌(ಎನ್‌ಎಫ್‌ಎಸ್‌) ವ್ಯವಸ್ಥೆ ಬಳಸಿ ಉದ್ದೇಶಿತ ಸೇವೆಯನ್ನು ನೀಡಬಹುದಾಗಿದೆ. ಇದರಿಂದ ಬ್ಯಾಂಕಿಂಗ್‌ ಸೇವೆಯಲ್ಲಿ ಕರೆನ್ಸಿ ನಿರ್ವಹಣೆಯ ವೆಚ್ಚವು ಗಣನೀಯವಾಗಿ ತಗ್ಗಲಿದೆ. ಎಟಿಎಂಗಳಿಗೆ ನಗದು ಮರುಪೂರಣ ಮಾಡುವ ವೆಚ್ಚವೂ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಎನ್‌ಎಫ್‌ಎಸ್‌ ಅನ್ನು ಪ್ರಾಥಮಿಕವಾಗಿ ಇನ್‌ಸ್ಟಿಟ್ಯೂಟ್‌ ಫಾರ್‌ ಡೆವಲಪ್‌ಮೆಂಟ್‌ ಆ್ಯಂಡ್‌ ರೀಸರ್ಚ್ ಇನ್‌ ಬ್ಯಾಂಕಿಂಗ್‌ ಟೆಕ್ನಾಲಜಿ(ಐಡಿಬಿಆರ್‌ಟಿ) ಅಭಿವೃದ್ಧಿ ಪಡಿಸಿದೆ. ಇದರಿಂದ ಬ್ಯಾಂಕಿಂಗ್‌ ವ್ಯವಸ್ಥೆಗೆ ಕರೆನ್ಸಿ ನಿರ್ವಹಣೆಯ ವೆಚ್ಚಗಳು ಕಡಿಮೆಯಾಗಲಿವೆ. ಹೊಸ ವ್ಯವಸ್ಥೆಗಾಗಿ ಹಾರ್ಡ್‌ವೇರ್‌ಗಳನ್ನು ಅಪ್‌ಗ್ರೇಡ್‌ ಮಾಡದೆಯೇ 30,000 ಎಟಿಎಂಗಳನ್ನು ಪರಸ್ಪರ ನಗದು ಜಮೆ ಜಾಲಕ್ಕೆ ಜೋಡಣೆ ಮಾಡಲು ಅವಕಾಶವಿದೆ ಎಂದು ಎನ್‌ಪಿಸಿಐ ಅಂದಾಜು ಮಾಡಿದೆ.

ಉನ್ನತ ಬ್ಯಾಂಕುಗಳನ್ನು ತಮ್ಮ ಎಟಿಎಂ ಮತ್ತು ಶಾಖೆಗಳಲ್ಲಿ ನಗದು ಠೇವಣಿ ಮಾಡಲು ಅವಕಾಶ ನೀಡುವುದಕ್ಕೆ ನೀಡಿದೆ. ಇದಕ್ಕಾಗಿ ಪರಸ್ಪರ ಸಂಪರ್ಕ ಕಲ್ಪಿಸುವ ಜಾಲವನ್ನು ಸೇರುವಂತೆ ಪ್ರಮುಖ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಐಡಿಬಿಆರ್ಟಿ ಆರಂಭದಲ್ಲಿ ಅಭಿವೃದ್ಧಿಪಡಿಸಿದ ತನ್ನ ರಾಷ್ಟ್ರೀಯ ಹಣಕಾಸು ಸ್ವಿಚ್ (ಎನ್‌ಎಫ್‌ಎಸ್) ಮೂಲಕ ಇಂಟರ್‌ಆಪರೇಬಲ್ ನಗದು-ಠೇವಣಿ ವ್ಯವಸ್ಥೆಯು ಇಡೀ ಬ್ಯಾಂಕಿಂಗ್ ವ್ಯವಸ್ಥೆಗೆ ಕರೆನ್ಸಿ ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಇನ್ನೂ ಎಟಿಎಂ ಆಪರೇಟರ್‌ಗಳು ಎಟಿಎಂಗಳಲ್ಲಿ ಹಣವನ್ನು ಮರುಪೂರಣಗೊಳಿಸುವ ವೆಚ್ಚವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ ಎನ್ನಲಾಗಿದೆ. 14 ಬ್ಯಾಂಕುಗಳು ಈಗಾಗಲೇ ಇಂಟರ್‌ಆಪರೇಬಲ್ ನಗದು ಠೇವಣಿ ನೆಟ್‌ವರ್ಕ್‌ನಲ್ಲಿ ಹಣವನ್ನು ಠೇವಣಿ ಇಡುವುದಕ್ಕೆ ಅವಕಾಶ ನೀಡಿದ್ದು, 30,000 ಎಟಿಎಂಗಳನ್ನು ತಕ್ಷಣವೇ ಇಂಟರ್ಪೋರೆಬಲ್ ಠೇವಣಿ ಯಂತ್ರಗಳಾಗಿ ಅಪ್‌ಗ್ರೇಡ್ ಮಾಡಬಹುದೆಂದು ಎನ್‌ಪಿಸಿಐ ಅಂದಾಜಿಸಲಾಗಿದೆ.