ಕಾರಿನ ಸ್ಟೆಪ್ನಿಯಲ್ಲಿ ಸಿಕ್ಕ 2.30 ಕೋಟಿ ಹಣ ಯಾರಿಗೆ ಸೇರಿದ್ದು ಜೆಡಿಎಸ್‌ ಮುಖಂಡ ಎಂ.ಜೆ.ಅಪ್ಪಾಜಿಗೌಡರಿಗೆ ಸೇರಿದ್ದಾಗಿದೆ ಎಂದು ಎಲ್ಲಾ ಕಡೆ ಸುದ್ದಿಯಿದೆ!!

0
272

ಲೋಕಸಭಾ ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಗಳು ಈ ಬಾರಿ ಹೆಚ್ಚಿನ ಕಣ್ಗಾವಲು ಇರಿಸಿದ್ದು ಎಲ್ಲಿವೂ ಹಣ ರವಾನೆಯಾಗದಂತೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಹಲವು ಕಡೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದ್ದು ಅದರಲ್ಲಿ ಸಿಕ್ಕ ಬಹುತೇಕ ಹಣವು ಮತದಾರರಿಗೆ ಹಂಚಲು ರವಾನಿಸುತ್ತಿದ್ದ ಹಣವಾಗಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ಹಣ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರನ್ನು ಪರಿಶೀಲನೆ ನಡೆಸಿದಾಗ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದೆ. ಕಾರಿನ ಸ್ಟೆಪ್ನಿಯಲ್ಲಿ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು.

ಹೌದು ಸ್ಟೆಪ್ನಿಯಲ್ಲಿರುವ ಹಣವನ್ನು ತೆಗೆಯುವ ವಿಡಿಯೋವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿದ್ದು ಕಾರಿನ ಸ್ಟೆಪ್ನಿಯಲ್ಲಿ 2000 ರೂ.ಗಳ ನೋಟಿನ ಕಂತೆ-ಕಂತೆಯನ್ನು ತೆಗೆಯಲಾಗಿದೆ. ಈ ಟೈರ್‌ನಲ್ಲಿ 2.30 ಕೋಟಿ ಹಣವಿತ್ತು ಎಂದು ಐಟಿ ಇಲಾಖೆ ಹೇಳಿದೆ. ಈ ಹಣವು ಯಾರಿಗೆ ಸೇರಿದ್ದು ಎನ್ನುವುದ ವಿಚಾರಣೆಯನ್ನು ನಡೆಸಿದ ಅಧಿಕಾರಿಗಳಿಗೆ ಸತ್ಯಯೊಂದು ತಿಳಿದಿದ್ದು. 2.3 ಕೋಟಿ ಹಣ ಭದ್ರಾವತಿಯ ಜೆಡಿಎಸ್‌ ಮುಖಂಡ ಎಂ.ಜೆ.ಅಪ್ಪಾಜಿಗೌಡರಿಗೆ ಸೇರಿದ್ದಾಗಿ ದೃಢಪಟ್ಟಿದ್ದು, ಐ.ಟಿ ಅಧಿಕಾರಿಗಳು ಅವರನ್ನು ಸೋಮವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಹಣವನ್ನು ಹೊತ್ತ ಕಾರು ಶನಿವಾರ ಬೆಂಗಳೂರಿನಿಂದ ಹೊರಡುತ್ತಿದ್ದಂತೆ ಐ.ಟಿ ಅಧಿಕಾರಿಗಳು ಹಿಂದಿನಿಂದ ಬೆನ್ನುಹತ್ತಿ. ಭಾರಿ ವೇಗದಲ್ಲಿದ್ದ ಕಾರನ್ನು ನೆಲಮಂಗಲ ಬಳಿ ಹಿಡಿದಿದ್ದಾರೆ. ನಂತರ ತಪಾಸಣೆ ಮಾಡಿದಾಗ ಸ್ಟೆಪ್ನಿಯಲ್ಲಿ 2 ಸಾವಿರ ಮುಖಬೆಲೆಯ 2.3 ಕೋಟಿ ಪತ್ತೆಯಾಯಿತು ಎಂದು ಮೂಲಗಳು ಹೇಳಿವೆ. ಅಧಿಕಾರಿಗಳಿಗೆ ಮೊದಲೇ ಸಿಕ್ಕಿದ ಮಾಹಿತಿಯಂತೆ. ‘ಕಾರಿನ ಮಾದರಿ, ಸಂಖ್ಯೆ ಹಾಗೂ ಬಣ್ಣ ಕುರಿತು ನಮಗೆ ಮಾಹಿತಿ ಸಿಕ್ಕಿತು. ತಕ್ಷಣ ಅಧಿಕಾರಿಗಳ ತಂಡ ಎಚ್ಚರವಾಗಿ ನಾಲ್ಕು ಕಾರುಗಳಲ್ಲಿ ಹಿಂಬಾಲಿಸಿದರು ಎಂದೂ ತಿಳಿದಿದ್ದು. ಇಷ್ಟೊಂದು ಹಣ ಯಾರಿಗೆ ಸೇರಿದ್ದು ಎನ್ನುವುದು ಎಲ್ಲರಿಗೂ ಕುತೊಹಲ ಕೆರಳಿಸಿತ್ತು.
ಈ ಹಣವನ್ನು ಪಂಕ್ಚರ್‌ ಹಾಕುವ ಮೆಕಾನಿಕ್‌ಗಳನ್ನು ಕರೆತಂದು ಟೈರ್‌ ಮೇಲ್ಭಾಗವನ್ನು ಕತ್ತರಿಸಿ ನೋಟಿನ ಕಂತೆಗಳನ್ನು ಹೊರ ತೆಗೆಯಲಾಯಿತು. ಕಾರಿನ ಚಾಲಕ ಮತ್ತು ಆತನ ಜೊತೆಯಲ್ಲಿದ್ದವರನ್ನು ಪ್ರಶ್ನಿಸಲಾಯಿತು. ಅವರ ಮಾಹಿತಿ ಆಧರಿಸಿ ಈ ಹಣ ಅಪ್ಪಾಜಿಗೌಡರಿಗೆ ಸೇರಿದ್ದು ಎಂಬ ಮಾಹಿತಿ ದೊರೆಯಿತು. ಇದೆ ವೇಳೆ ಸಿಕ್ಕ ಇಬ್ಬರನ್ನು ವಿಚಾರಿಸಿದ್ದಾಗ ಮಾಯಿ, ಶರಣ್‌, ಇಮ್ರಾನ್‌ ಮತ್ತು ರಾಧಾಕೃಷ್ಣ ಹೆಸರುಗಳು ತಿಳಿದು ಬಂದಿವೆ. ಇವರೆಲ್ಲರನ್ನು ವಿಚಾರಣೆಗೆ ಬರುವಂತೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ..

ಹಣ ನನ್ನದೆಂದ ಅಪ್ಪಾಜಿಗೌಡ
ಹಣಸಿಕ್ಕ ಮಾಹಿತಿಯಂತೆ ಅಪ್ಪಾಜಿಗೌಡರನ್ನು ಸೋಮವಾರ ವಿಚಾರಣೆ ನಡೆಸಲಾಯಿತು. ಹಣ ಸಾಗಿಸುತ್ತಿದ್ದ ಕಾರಿನಲ್ಲಿದ್ದ ಗಿರೀಶ್ ಎಂಬುವರು ನೀಡಿದ ಮಾಹಿತಿ ಆಧರಿಸಿ ಶಿವಮೊಗ್ಗ ಐ.ಟಿ ಕಚೇರಿಗೆ ಅವರನ್ನು ಕರೆಸಲಾಗಿತ್ತು. ಶಿವಮೊಗ್ಗ ಗೋಪಾಲಗೌಡ ಬಡಾವಣೆ ಮುಖ್ಯರಸ್ತೆಯ ಆದಾಯ ತೆರಿಗೆ ಭವನಕ್ಕೆ ಮಧ್ಯಾಹ್ನ 12.20ಕ್ಕೆ ಬಂದ ಅಪ್ಪಾಜಿಗೌಡ ಅವರನ್ನು ಅಧಿಕಾರಿಗಳು ಹಲವು ಸುತ್ತು ವಿಚಾರಣೆ ನಡೆಸಿದರು. ಈ ವೇಳೆ ಒಪ್ಪಿಕೊಂಡ ಅಪ್ಪಾಜಿಗೌಡ ಹಣ ನನ್ನದೆ, ಇದು ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯಲ್ಲಿದ್ದ ನಿವೇಶನ ಮಾರಿದ್ದೆ. ಹತ್ತು ತಿಂಗಳ ಹಿಂದೆ ಮಾರಾಟ ಮಾಡಲಾಗಿತ್ತು. ಅದೇ ಹಣವನ್ನು ಈಗ ತರಿಸಿಕೊಲ್ಲುತ್ತಿದ್ದೆ ಎಂದು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.