ಮಲ್ಟಿಪ್ಲೆಕ್ಸ್ -ನ ದುಬಾರಿ ಮತ್ತು ಏಕಸ್ವಾಮ್ಯ ತಿಂಡಿ ತಿನಿಸುಗಳ ಪಿಡುಗಿಗೆ ಬೀಳಲಿದೆಯೇ ಬ್ರೇಕ್??

0
507

ಮಲ್ಟಿಪ್ಲೆಕ್ಸ್ -ನಲ್ಲಿ ಸಿನಿಮಾ ನೋಡುವ ಮುನ್ನ ಸ್ವಲ್ಪ ಈ ವಿಷಯ ನೋಡಿ. ದೊಡ್ಡ ದೊಡ್ಡ ನಗರಗಳಲ್ಲಿ ಸಿನಿಮಾ ವೀಕ್ಷಣೆಗೆಂದು ನೂರಾರು ರೂಪಾಯಿ ಕೋಟು ನೀವು ಹೋಗುವ ಹೈ ಲೆವೆಲ್ ಥೇಟರ್ ಗಳಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡೋಕೆ ಅಂತ ನೀವು ಹೋಗಿರ್ತೀರ. ಸಿನಿಮಾ ಮಾತ್ರ ಹೈ ಲೆವೆಲ್ ಇದ್ರೆ ಸಾಲದು ಕಣ್ರೀ ಅಲ್ಲಿ ಬಾಯಿಚಪ್ಪರಿಸಿ ತಿನೊ Tasty ಫುಡ್ಸ್ ಗಳು ಕೂಡ ಸರಿಯಾಗಿ ಇದ್ಯೋ ಇಲ್ವೋ ನೋಡಿ ತಿನ್ನಬೇಕು ಯಾಕೆಂದ್ರೆ ಅಲ್ಲಿರುವ Cool Drinks, Snacks ವ್ಯೆರಟಿ ಫುಡ್ ಗಳು ವರ್ಣಿಸಲು ಬಾರದಷ್ಟು ಕಳಪೆಮಟ್ಟದಲ್ಲಿರುತ್ತೆ.

Also read: ಮಲ್ಟಿಪ್ಲೆಕ್ಸ್ ಥಿಯೇಟರ್-ನಲ್ಲಿನ ದುಬಾರಿ ತಿಂಡಿ-ತಿನಿಸುಗಳಿಗೆ ಬೀಳಲಿದೆಯೇ ಬ್ರೇಕ್?? ಹೊರಗಿನ ತಿಂಡಿಗಳನ್ನು ಇನ್ಮೇಲೆ ಒಳಗಡೆ ಬಿಡುತ್ತಾರ?

ಅವುಗಳ ಕೊನೆಯ ದಿನಾಂಕ. ಮುಗಿದು ಎಷ್ಟೋ ದಿನಗಳು. ಎಷ್ಟೋ ವರ್ಷಗಳೇ ಆಗಿರುತ್ತೆ ಮಾರಾಟ ಬೆಲೆ ಅಂತ್ರು ಒರಿಜಿನಲ್ ಬೆಲೆಗಿಂತ 2. 3 ರಷ್ಟು ಇರುತ್ತೆ ಆದ್ರೂ ಅದನ್ನು ದೇವರು ಕೊಡೋ ಅಮೃತ ತರ ತಿನ್ನುತ್ತಾರೆ. ಅದು ಯಾಕೆ? ದುಡ್ಡು ಕೊಟ್ಟಿರೋ ಹೊಟ್ಟೆ ಉರಿಗಾ ಅಥವಾ ಇಂತಹ ಫುಡ್ಸ್ ಎಲ್ಲಿ ಸಿಗೋದಿಲ್ಲ ಅಂತನ? ಇದೆಲ್ಲ ಯಾಕೆ ಹೇಳ್ತಿರೋದು ಅಂದ್ರೆ.

Also read: ಥಿಯೇಟರ್ ಒಳಗೆ ವಾಟರ್ ಬಾಟಲ್ ನಿರಾಕರಿಸಿದ್ದಕ್ಕೆ 11 ಸಾವಿರ ಪರಿಹಾರ ತೆತ್ತ ಮಲ್ಟಿಪ್ಲೆಕ್ಸ್

ತೆಲಂಗಾಣದ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಹೈದರಾಬಾದ್ ನ 20 ಥೇಟರ್ ಮತ್ತು ಮಲ್ಟಿಫ್ಲೆಕ್ಸ್ ಮೇಲೆ ವಿಶೇಷ ಪರೀಕ್ಷೆಯನ್ನು ನಡೆಸಿ ಅಲ್ಲಿ ಸಿಗುವ ಆಹಾರ ಪಧಾರ್ಥಗಳು ಮತ್ತು ವಾಟರ್ ಬಾಟಲ್ ಮೇಲಿರುವ mrp ಬೆಲೆ expiry date, weight ಪರೀಕ್ಷೆ ಮಾಡಿದಾಗ ಅವುಗಳ ಗುಣಮಟ್ಟ ಸಂಪೂರ್ಣವಾಗಿ ಕಳಪೆದಾಗಿತ್ತು. ಅಧಿಕಾರಿಗಳು ಪರಿಶೀಲನೆ ಮಾಡಿದ 20 ಥೇಟರ್ಗಳಲ್ಲಿ 18 ಥೇಟರ್ಗಳಲ್ಲಿ ಇತಹ ಕಳೆಪೆಮಟ್ಟದ ವಸ್ತುಗಳು ಕಂಡುಬಂದಿವೆ ಅದರಿಂದ ಈ 18 ಥೇಟರ್ ಗಳ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ನಂತರ ಈ ಪ್ರಕರಣ ವಿರುದ್ದ ಮಾಪನಶಾಸ್ತ್ರ ಇಲಾಖೆಯು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ.

Also read: ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಕ ರೂಪದ ಟಿಕೆಟ್ ದರ ಜಾರಿಗೆ ಬರಲಿದೆ.

ಈ ನಿಯಮಗಳ ಪ್ರಕಾರ ಧಾರಕಗಳಲ್ಲಿ ಮಾರಾಟವಾದ ಆಹಾರ ಪದಾರ್ಥಗಳ ತೂಕ, ಪ್ರಮಾಣ, ಉತ್ಪಾದನಾ ದಿನಾಂಕ, ಕೊನೆಯ ಅವಧಿ ಮತ್ತ್ತು MRP ಯನ್ನು ಮುದ್ರಿಸಬೆಕ್ಕು ಅವುಗಳು ಸ್ಪಷ್ಟವಾಗಿ ಮತ್ತು ಎಲ್ಲರಿಗೂ ಗೋಚರವಾಗುವಂತೆ ಇರಬೇಕ್ಕು ಒಂದುವೇಳೆ ತೂಕ, ಪ್ರಮಾಣ ಅಥವಾ ದರದಲ್ಲಿನ ಯಾವುದೇ ಬದಲಾವಣೆಗಳು ಕಂಡು ಬಂದಲ್ಲಿ ತಕ್ಷಣವೇ ಮಾಲೀಕರು ಇವುಗಳನ್ನು ಪರಿಶಿಲಿಸಿ ಬದಲಿಸಿ ವಿವಿಧ ಬ್ರಾಂಡ್ ಉತ್ಪನ್ನಗಳ ಮಾರ್ಗದರ್ಶಿ ಸೂತ್ರಗಳಂತೆ ಮಾರಾಟ ಮಾಡಲು ಸೂಚನೆ ನೀಡಿಬೇಕು. ಒಂದು ವೇಳೆ ನಮ್ಮ ನಿಯಮವನ್ನು ಉಲ್ಲಂಘನೆಮಾಡಿದಲ್ಲಿ ಮತ್ತೆ ಖೆಸ್ ಜಡಿಯಿವ ಮೂಲಕ 25,000 ದಂಡ ಮತ್ತು ಶಿಕ್ಷೆ, ಎರಡನೆಯ ಬಾರಿ ಕಂಡುಬಂದಲ್ಲಿ 50,000 ರೂಪಾಯಿಗಳಿಗೆ ಏರಿಸಬಹುದು ಮತ್ತು ಮೂರನೆಯ ಬಾರಿಗೆ ಅಪರಾಧವನ್ನು ಪುನರಾವರ್ತಿಸಿದರೆ ದಂಡವು 1 ಲಕ್ಷ ರೂ. ಮತ್ತು 6 ತಿಂಗಳಿಂದ ಒಂದು ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತೆದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಣ ಅಧಿಕಾರಿ ಅಕುನ್ ಸಭರ್ವಾಲ್, ತಿಳಿಸಿದ್ದಾರೆ. ಇತಹ ಪ್ರದಾರ್ಥಗಳು ಗ್ರಾಹಕರರಿಗೆ ಕಂಡು ಬಂದರೆ ತಮ್ಮ ದೂರುಗಳನ್ನು ಟೋಲ್ ಫ್ರೀ ಸಂಖ್ಯೆ, 180042500333 ಅಥವಾ whatsapp no 7330774444 ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಮಲ್ತಿಪ್ಲೆಕ್ಷ್ ಪ್ರಿಯರು ಇದರ ಬಗ್ಗೆ ಖಾಳಜಿ ವಹಿಸುವುದು ಉತ್ತಮ.