ಮಾಂಟೆಸ್ಸರಿ ಶಿಕ್ಷಣ ಪದ್ಧತಿ

0
602

 

ಮಕ್ಕಳ ಶಿಕ್ಷಣದಲ್ಲಿ ಮಾಂಟೆಸ್ಸರಿ ಮದ್ಧತಿಯ ಶಿಕ್ಷಣ ವಿಶ್ವದಲ್ಲೇ ಪ್ರಸಿದ್ಧ. ನರ್ಸರಿ ಶಿಕ್ಷಣದ ಮಟ್ಟಗಂತೂ ಮಾಂಟೆಸ್ಸರಿ ವಿಶ್ಚದಲ್ಲೇ ಜನಪ್ರಿಯ. ಮಗುವಿಗೆ ಯಾವುದನ್ನೂ ಬೋಧಿಸದೇ ಅದೇ ಕಲಿತುಕೊಳ್ಳಲು, ಗುರುತಿಸಲು ಅವಕಾಶ ನೀಡುವ ಕಲಿಕಾ ಪದ್ಧತಿ ಇದು. ಇದನ್ನು ಆರಂಭಿಸಿದವರು ಇಟಲಿಯ ವೈದ್ಯೆ ಮಾರಿಯಾ ಮಾಂಟೆಸ್ಸರಿ.

ಮಾರಿಯಾ ಮಾಂಟೆಸ್ಸರಿ ತಮ್ಮ ಸಮಕಾಲೀನವರಿಗಿಂತ ಸದಾ ಒಂದು ಹೆಜ್ಜೆಮುಂದೇ ಇದ್ದವರು, ತಮ್ಮ 13ನೇ ವಯಸ್ಸಿನಲ್ಲಿ ಅವರ ಬಾಲಕರ ತಾಂತ್ರಿಕ ಶಾಲೆಯನ್ನು ಸೇರಿದರು. ತಂದೆ ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ತಾಯಿಯವರ ಬೆಂಬಲಕ್ಕೆ ನಿಂತರು. ಏಳು ವರ್ಷಗಳ ವರೆಗೆ ಎಂಜಿನಿಯರಿಂಗ್ ಕಲಿಕ ನಂತರ ಅವರು ವೈದ್ಯಕೀಯ ಕಲಿಯಲಾರಂಭಿಸಿದರು. 1896 ರಲ್ಲಿ ಅವರು ವೈದ್ಯೆಯಾದರು. ರೋಮ್ ವಿಶ್ವವಿದ್ಯಾಲಯದ ಮನೋವೈಜ್ಞಾನಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಮಾಂಟೆಸ್ಸರಿ ಅವರು ಮಕ್ಕಳ ಪರವಾಗಿ ಕೆಲಸ ಮಾಡಿದರು. ಅವರಿಗೆ ಧ್ವನಿಯಾದರು. ಅವರ ಪರವಾಗಿ ಹಲವು ಪುಸ್ತಕಗಳನ್ನು ಬರೆದರು.

1907 ರಲ್ಲಿ ಮಕ್ಕಳಕುರಿತು ಅಧ್ಯಾಯನ ನಡೆಸಲು ಅವರಿಗೆ ಅವಕಾಶ ಕಲ್ಪಿಸಲಾಯಿತು. ಮಾಂಟೆಸ್ಸರಿ ಅವರು ಸ್ಯಾನ್ ಲೊರೆಂಜೊ ನಗರದ ಕೊಳೆಗೇಗಿರಿಗಳಲ್ಲಿ 50 ಬಡ ಮಕ್ಕಳನ್ನು ಆಯ್ದುಕೊಂಡರು. ಕಾಸಾ ಡಿ ಬಾಂಬಿನಿ ಅಥವಾ ಮಕ್ಕಳ ಮನೆ ಕುರಿತು ಅವರ ಕೆಲಸಗಳು ಬಹುಬೇಗನೇ ಎಲ್ಲ ಕಡೆ ಹರಡಿತು. ಮಕ್ಕಳನ್ನು ನೋಡಲು ಬಹುದೂರದಿಂದ ಜನರು ಬರಲಾರಂಭಿಸಿದರು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆಯುವ ಮಾಂಟೆಸ್ಸರಿ ಅವರು ಕಲಿಸುವ ಪದ್ಧತಿ ಬಹುಬೇಗನೇ ಜನಪ್ರಿಯವಾಯಿತು.

ಖ್ಯಾತ ವಿಜ್ಞಾನಿಗಳಾದ ಅಲೆಕ್ಸಾಂಡರ್ ಗ್ರಹಾಂಬೆಲ್, ಥಾಮಸ್ ಎಡಿಸನ್ ಇನ್ನಿತರರು ಅಮೆರಿಕಕ್ಕೆ ಬರುವಂತೆ ಮಾಂಟೆಸ್ಸರಿ ಅವರಿಗೆ ಆಹ್ವಾನ ನೀಡಿದರು. ಸಾನ್ ಫ್ರಾನ್ಸಿಸ್ಕೊದಲ್ಲಿ ಪಾನ್ ಪೆಸಿಫಿಕ್ ಪ್ರದರ್ಶನದಲ್ಲಿ ತರಗತಿ ಆರಂಭಿಸುವಂತೆ ಅವರನ್ನು ಕಲಿಸುವುದನ್ನು ಪ್ರೇಕ್ಷಕರು ನೋಡಿದರು. ನಾಲ್ಕುತಿಂಗಳ ವರೆಗೆ ಇದು ಮುಂದುವರಿಯಿತು. ಮಕ್ಕಳ ಶಿಕ್ಷಣವನ್ನು ಮೊದಲ ಬಾರಿಗೆ ಗಂಭೀರವಾಗಿ ಪರಿಗಣಿಸಲಾಯಿತು.

ಎರಡನೇ ಜಾಗತೀಕ ಸಮರದ ವೇಳೆ ತಮ್ಮ ಫ್ಯಾಸಿಸ್ಟ್ ವಿರೋಧಿ ನಿಲುವಿಗಾಗಿ ಮಾಂಟೆಸ್ಸರಿ ಅವರು ಇಟಲಿಯಿಂದ ಗಡಿಪಾರಾದರು. ಅಲ್ಲಿಂದ ಅವರು ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರು, ನೊಬೆಲ್ ಶಾಂತಿ ಪ್ರಶಸ್ತಿ ಅವರ ಹೆಸರು ಎರಡು ಬಾರಿ ನಾಮನಿರ್ದೇಶನಗೊಂಡಿತ್ತು. ಅವರ ಮರಣದ ಬಳಿಕವೂ ಮಾಂಟೆಸ್ಸರಿ ಶಿಕ್ಷಣ ಪದ್ಧತಿ ವಿಶ್ವದಾದ್ಯಂತ ಹರಡಿ ಜನಪ್ರಿಯಗೊಂಡಿತು. ಮಗುವಿನ ಕುರಿತು ಗಮನ ಹರಿಸಬೇಕೆ ಹೊರತು, ಅದನ್ನು ಸೂಚಿಸಿರುವ ಮಾರ್ಗದರ್ಶಿ ಸೂತ್ರಗಳಿಂದಾಗಿ ಡಾ. ಮಾಂಟೆಸ್ಸರಿ ಅವರ ಆಲೋಚನೆಗಳು ಎಂದಿಗೂ ಸವಕಲು ಎನಿಸುವುದೇ ಇಲ್ಲ.