ಸಭೆಯಲ್ಲಿ ಮೊಬೈಲ್ ಬಳಕೆ ವಿರುದ್ಧ ಸಿಡಿದೆದ್ದ ಮೋದಿ

0
448

ಮೊಬೈಲ್‍ನಲ್ಲಿ ಸದಾ `ಬ್ಯುಸಿ’ ಇರುವ ಅಧಿಕಾರಿಗಳಿಗೆ ಸಭೆಯ ವೇಳೆ ಮೊಬೈಲ್ ಬಳಕೆಯನ್ನು ನಿಷೇಧ: ಪ್ರಧಾನಿ

ಯಾವಾಗ ನೋಡಿದರೂ ಅಧಿಕಾರಿಗಳು ಮೊಬೈಲ್‍ನಲ್ಲಿ ಬ್ಯುಸಿಯಾಗಿರುವುದನ್ನು ನೋಡಿ ರೋಸಿ ಹೋದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಸಭೆಯ ವೇಳೆ ಮೊಬೈಲ್‍ ಬಳಕೆಯನ್ನು ನಿಷೇಧಿಸಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಡೆದ 11ನೇ ನಾಗರಿಕ ಸೇವಾ ದಿನ ಕಾರ್ಯಕ್ರಮದಲ್ಲಿ ಸ್ವತಃ ಮೋದಿ ಅವರೇ ಈ ವಿಷಯ ಬಹಿರಂಗಪಡಿಸಿದರು

ನಾನು ಅಧಿಕಾರ ವಹಿಸಿಕೊಂಡಾಗಿನಿಂದ ನೋಡುತ್ತಿದ್ದೇನೆ. ಪ್ರತಿಯೊಬ್ಬ ಅಧಿಕಾರಿಗಳು ಯಾವಾಗಲೂ ಮೊಬೈಲ್‍ ಫೋನ್‍ನಲ್ಲಿ ಬ್ಯುಸಿಯಾಗಿರುತ್ತಾರೆ. ಕೆಲಸಕ್ಕಿಂತ ಹೆಚ್ಚಾಗಿ ಫೋನ್‍ನಲ್ಲಿಯೇ ಕಾಲ ಕಳೆಯುತ್ತಿರುತ್ತಾರೆ. ಆದ್ದರಿಂದ ಯಾವುದೇ ಸಭೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದೇನೆ ಎಂದರು.

ಮೋದಿ ಇದೇ ಮೊದಲ ಬಾರಿ ಮೊಬೈಲ್‍ ಬಳಕೆ ವಿರುದ್ಧ ಸಿಡಿದೆದ್ದಿರುವುದು. ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲೂ ಸಚಿವರು ಮೊಬೈಲ್‍ ಬಳಸದಂತೆ ಆದೇಶಿಸಿದ್ದಾರೆ.

ಅಧಿಕಾರಿಗಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ. ಸೀಮಿತ ಆಲೋಚನೆ ಬದಲು ಕ್ರಿಯಾಶೀಲವಾಗಿ ಜನರಿಗೆ ಹೇಗೆ ಸರಕಾರ ನೆರವಾಗಬಹುದು ಎಂದು ಚಿಂತಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

ನಾನು ನೋಡುತ್ತಿದ್ದೇನೆ. ಎಷ್ಟೋ ಅಧಿಕಾರಿಗಳು ತಮ್ಮ ಕೆಲಸದ ಸಾಮರ್ಥ್ಯವನ್ನು ಕಡಿಮೆ ತೋರಿಸಿಕೊಳ್ಳಲು ಬಯಸುತ್ತಾರೆ. ಏಕೆಂದರೆ ಎಲ್ಲಿ ನಮ್ಮ ಮೇಲೆ ಹೊರಿಸುತ್ತಾರೆ ಎಂಬ ಆತಂಕ ಅವರದ್ದು. ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.