ಪೋಷಕಾಂಶಭರಿತ ಗೆಡ್ಡೆರೂಪದ ತರಕಾರಿಗಳಲ್ಲಿ ಒಂದಾಗಿರುವ ಮೂಲಂಗಿ ಸೊಪ್ಪಿನ ಪಚಡಿ ಮಾಡುವ ವಿಧಾನ..!!

0
718

ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಅಲ್ಲದೆ ಸಾರಜನಕ, ಪಿಷ್ಟ, ಮೇದಸ್ಸು, ಖನಿಜಾಂಶ, ನಾರಿನಾಂಶ, ರಂಜಕ, ಸೋಡಿಯಂ, ಪೊಟ್ಯಾಷಿಯಂ, ರೈಬೋಪ್ಲೆವಿನ್, ಆಕ್ಸಾನಿಕ್ ಆಮ್ಲ, ಎ-ಸಿ ಜೀವಸತ್ವ, ಸುಣ್ಣ, ಕಬ್ಬಿಣ, ಥಯಾಮಿನ್ ನಂತಹ ಪೋಷಕಾಂಶಗಳಿವೆ. ಮೂಲಂಗಿ ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು. ಹಾಗಾದರೆ ಬನ್ನಿ ಹಸಿ ಮೂಲಂಗಿ ಸೊಪ್ಪಿನ ಪಚಡಿ ಮಾಡುವ ವಿಧಾನ ತಿಳಿಯೋಣ…

ಬೇಕಾಗುವ ಸಾಮಗ್ರಿ:

  • ಮೂಲಂಗಿ ಸೊಪ್ಪು-2 ಕಟ್ಟು,
  • ಮೂಲಂಗಿ ಸಣ್ಣದಾಗಿ ಹೆಚ್ಚಿಕೊಂಡಿರುವ ಹೋಳು
  • ಹಸಿ ಮೆಣಸಿನಕಾಯಿ-4 ತುಂಡು,
  • ಕಡಲೆಕಾಯಿ ಬೀಜದ ಪುಡಿ-ಅರ್ಧ ಕಪ್‌,
  • ಉಪ್ಪು-ರುಚಿಗೆ ತಕ್ಕಷ್ಟು,
  • ನಿಂಬೆ ರಸ-1 ಚಮಚ,
  • ತೆಂಗಿನಕಾಯಿ ತುರಿ-ಕಾಲು ಕಪ್‌.

ಮಾಡುವ ವಿಧಾನ:

ಮೂಲಂಗಿ ಸೊಪ್ಪನ್ನು ಶುಚಿಗೊಳಿಸಿ ಸಣ್ಣದಾಗಿ ಕತ್ತರಿಸಿ ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಮೂಲಂಗಿ ಹೋಳುಗಳನ್ನು ಸೇರಿಸಿ.

 

ನಂತರ ಹಸಿ ಮೆಣಸಿನಕಾಯಿ ತುಂಡುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ಈ ಸೊಪ್ಪಿಗೆ ಸೇರಿಸಿ.

ಈ ಮಿಶ್ರಣಕ್ಕೆ ತೆಂಗಿನಕಾಯಿ ತುರಿ, ಕಡಲೆಕಾಯಿ ಬೀಜದ ಪುಡಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿದರೆ ರುಚಿಯಾದ ಮೂಲಂಗಿ ಸೊಪ್ಪಿನ ಪಚಡಿ ರೆಡಿ.