ಜನವರಿ 31ರ ಚಂದ್ರ ಗ್ರಹಣದಂದು ನಿಮ್ಮ ರಾಶಿಗೆ ಆಗುವ ಶುಭ-ಅಶುಭ ಸಂಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ…

0
22658

ಈ ವರ್ಷದ ಮೊದಲ ಚಂದ್ರಗ್ರಹಣ ಜನವರಿ 31 ನೇ ತಾರೀಖಿನಂದು ಸಂಭವಿಸಲಿದ್ದು ಈ ಗ್ರಹಣದಿಂದ ಕೆಲ ರಾಶಿಯವರಿಗೆ ತುಂಬಾ ಒಳ್ಳೆಯ ದಿನಗಳು ಬರಲಿವೆ ಹಾಗು ಕೆಲವು ರಾಶಿಗಳಿಗೆ ಸ್ವಲ್ಪ ಕಷ್ಟಗಳು ಬರಲಿವೆ.

ಖಂಡಗ್ರಾಸ ಚಂದ್ರಗ್ರಹಣ ಯಾರಿಗೆಲ್ಲ ಶುಭ ಯಾರಿಗೆಲ್ಲ ಅಶುಭ ಮತ್ತು ಅದಕ್ಕೆ ಪರಿಹಾರ ಹೇಗೆ ಎಂದು ತಿಳಿಯೋಣವೇ.

ಮೇಷ:

ಮೇಷ ರಾಶಿಯವರಿಗೆ ಹಲವು ಬಗೆಯಲ್ಲಿ ಸಮಸ್ಯೆಗಳು ಕಾಣುತ್ತಿವೆ. ಕೆಲವು ಪ್ರಸಂಗಗಳಲ್ಲಿ ನೀವೇ ಹುಡುಕಿಕೊಂಡು ಹೋಗಿ, ಸಮಸ್ಯೆಗೆ ಸಿಲುಕುವ ಸಂಭವವೂ ಇದೆ. ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಬಹುದು ಹೊಸ ಸಾಹಸಗಳಿಗೆ ಕೈ ಹಾಕಲೇ ಬೇಡಿ. ಅತಿ ಮುಖ್ಯವಾದ ಕೆಲಸಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡಿರಿ. ದಿಢೀರ್‌ ಪ್ರಯಾಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ವೃಷಭ:

ಈ ಗ್ರಹಣದಿಂದ ವೃಷಭ ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ. ಮತ್ತು ಇವರು ಕೈ ಹಾಕಿದ ಕೆಲಸ ನೆರವೇರುತ್ತದೆ. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಎಂದು ಗೋಚರಿಸುತ್ತಿವೆ. ಅನಿರೀಕ್ಷೆತ ಧನಪ್ರಾಪ್ತಿ. ಅದು ಕೂಡ ನಿಮ್ಮ ಎಂದಿನ ಆದಾಯ ಮೂಲವಲ್ಲ. ಇದು ಹೊಸದಾದ ಆದಾಯ ಮೂಲದಿಂದ ಸಿಗುವ ಧನಲಾಭ.

ಮಿಥುನ:

ಈ ರಾಶಿಯವರಿಗೆ ಚಂದ್ರಗ್ರಹಣದ ಫಲಿತಾಂಶ ದಿಂದ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಸಹ ಲಭಿಸುತ್ತವೆ. ತುಂಬ ಸಾಮಾನ್ಯವಾಗಿ ಕಂಡುಬರುವುದು ಆರ್ಥಿಕ ನಷ್ಟ. ಯಾರಿಗಾದರೂ ಸಾಲ ಕೊಡಲಿಕ್ಕೆ ಹೋಗಬೇಡಿ. ಹಣಕಾಸಿನ ವ್ಯವಹಾರದಲ್ಲಿ ಬಹಳ ಎಚ್ಚರವಾಗಿರಬೇಕು. ಅಂತ್ಯ ಕಾಲದಲ್ಲಿ ಸ್ನಾನ ಮಾಡಿದರೆ ಅನಂತ ಫಲ ಸಿಗುತ್ತದೆ. ಇನ್ನು ಗ್ರಹಣ ಸಂಭವಿಸಿದ ಮೇಲೆ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುತ್ತದೆ.

ಕಟಕ:

ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನ ಪಡೆಯುವುದರಿಂದ ಬಲಬರಲಿದೆ. ಏನಾಗುತ್ತಿದೆ ಅಂತಲೇ ಗೊತ್ತಾಗದಂಥ ಸನ್ನಿವೇಶ ನಿಮ್ಮದು. ಏಕೆ ತೊಂದರೆ ಆಗುತ್ತಿದೆ, ಇಂಥ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ ಎಂದು ಗೊತ್ತಾಗುವಷ್ಟರಲ್ಲಿ ತಲೆ ಹಾರಿ ಹೋಗಿರುತ್ತದೆ. ಲೇವಾದೇವಿ ವಹಿವಾಟುಗಳಲ್ಲಿನ ತೊಂದರೆಯಿಂದ ಪಾರಾಗಲು ಶ್ರಮಿಸಬೇಕಾಗುವುದು. ಮೈ ಮೇಲೆ ಎಚ್ಚರವಿರಲಿ.

ಸಿಂಹ:

ಈ ದಿನ ವೈಯಕ್ತಿಕ ಸಮಸ್ಯೆಗಳ ನಿರ್ವಹಣೆಗೆ ಅಧಿಕ ಪ್ರಯತ್ನ ಬೇಡ ತಾನಾಗಿಯೇ ಪರಿಹಾರಗೊಳ್ಳಲಿದೆ. ಹಣಕಾಸಿನ ವಿಚಾರವಾಗಿ ಎಷ್ಟು ಹುಷಾರಾಗಿರುತ್ತೀರೋ ಅಷ್ಟು ಒಳ್ಳೆಯದು. ದಿಢೀರ್ ನಷ್ಟ ತಂದೊಡ್ಡುವ ಗ್ರಹಣ ಇದು. ತುರ್ತು ಯೋಜನೆಗೆ ಕೈ ಹಾಕಲು ಹೋಗಬೇಡಿ. ಯಾವುದೇ ನ್ಯಾಯಾಂಗ ಮತ್ತು ಹಣ ಕಾಸಿನ ವಿಷಯಕ್ಕೆ ಸಂಬಂಧಿಸಿದ್ದು ಅನ್ನೋವಾಗ ಒಂದಕ್ಕೆ ಎರಡು ಸಲ ಪರಿಶೀಲಿಸಿ, ಸಹಿ ಮಾಡಿ. ಇನ್ನೊಬ್ಬರನ್ನು ಕುರುಡಾಗಿ ನಂಬಬೇಡಿ.

ಕನ್ಯಾ:

ಈ ಗ್ರಹಣದಿಂದ ನಿಮಗೆ ಶುಭ ಫಲಗಳು ಇವೆ. ಅದರ ಸದುಪಯೋಗ ಮಾಡಿಕೊಳ್ಳಬೇಕಷ್ಟೇ. ಕೋರ್ಟು ಕಚೇರಿಗಳಲ್ಲಿನ ಕಾರ್ಯಗಳು ಫಲ ನೀಡಲಿವೆ. ಧೈರ್ಯ ಕಾರ್ಯಗಳ ಬಲದಿಂದ ಹಣ ತರುವ ಅವಕಾಶಗಳು ಬರುವಾಗ ನೀವಾಗಿಯೇ ಅದನ್ನು ನಿರಾಕರಿಸಬೇಡಿ. ಒದಗಿ ಬಂದ ಅವಕಾಶವನ್ನು ಕೈ ಬಿಡಬೇಡಿ.

ತುಲಾ:

ಚಂದ್ರ ಗ್ರಹಣದ ಫಲಿತಾಂಶ ಶುಭವಾಗಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ಕುಟುಂಬದಲ್ಲಿನ ಹಿರಿಯರ ಸಹಕಾರ ಮತ್ತು ಸ್ನೇಹಿತರಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ. ಸಹಾಯ ಅನ್ನೋದರ ಜತೆಗೆ ನಿಮಗೆ ಬೇಕಾದ ಸಹಕಾರ ದೊರೆಯುತ್ತದೆ.

ವೃಶ್ಚಿಕ:

ವೃಶ್ಚಿಕ ರಾಶಿಯವರು ನೀವು ಅಂದುಕೊಂಡಂತೆ ನಿಮಗೆ ಸಮಾಜದಲ್ಲಿ ಮಾನ್ಯತೆ ಲಭಿಸಲಿ ತಮ್ಮ ವರ್ಚಸ್ಸು ಹಾಗೂ ಸಮಾಜದಲ್ಲಿನ ಗೌರವದ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಈ ಗ್ರಹಣವು ನಷ್ಟ ಮತ್ತು ಅವಮಾನವನ್ನು ಸೂಚಿಸುತ್ತಿದೆ. ದುಷ್ಟರ ಕಂಡರೆ ದೂರವಿರಿ. ನೀವು ಋಣಾತ್ಮಕ ಚಿಂತನೆಗಳಿಂದ ಹೊರ ಬರುವ ಅವಕಾಶ ಒದಗಿ ಬರಲಿದ್ದು, ಸ್ವಲ್ಪ ಮಟ್ಟಿಗೆ ನೆಮ್ಮದಿಯೆನಿಸಲಿದೆ.

ಧನಸ್ಸು:

ಈ ಗ್ರಹಣವು ಅತ್ಯಂತ ಕೆಡಕು ತರುವುದು ನಿಮ್ಮ ರಾಶಿಗೆ ಎಚ್ಚರ ಎಚ್ಚರ!. ಆದ್ದರಿಂದ ಈ ತಿಂಗಳಿಡೀ ದೂರ ಪ್ರಯಾಣ ಮಾಡಲೇಬೇಡಿ. ಮನೆಯಲ್ಲಿ ಕೂಡ ವಿದ್ಯುತ್ ಉಪಕರಣ, ಗ್ಯಾಸ್ ಸ್ಟೌ ಇತ್ಯಾದಿಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಅಪಾಯಕ್ಕೆ ನೀವಾಗಿಯೇ ಕೈ ಹಾಕದಿರುವುದು ಉತ್ತಮ. ತಾಳ್ಮೆಯ ವರ್ತನೆಗೆ ನಿಧಾನ ಶುಭ ವೆನಿಸಲಿದೆ.

ಮಕರ:

ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಅಂದರೆ ಅದು ಕಳತ್ರ ಸ್ಥಾನ. ಆದ್ದರಿಂದ ನಿಮ್ಮ ಪ್ರೀತಿ ಪಾತ್ರರ ರೊಂದಿಗೆ ಯಾವುದೇ ವಿಚಾರದಲ್ಲಿ ಜಗಳ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಆ ಮೂಲಕ ಯಾವುದೇ ಬಿಕ್ಕಟ್ಟು ಎದುರಾಗದಂತೆ ಎಚ್ಚರ ವಹಿಸಿ. ಕುಟುಂಬ ಸದಸ್ಯರ ಸಹಕಾರದಿಂದ ಅರ್ಧಕ್ಕೆ ನಿಂತ ಸಮಸ್ಯೆಗಳು ಸುಧಾರಿಸಲಿದೆ.

ಕುಂಭ:

ನಿಮ್ಮ ರಾಶಿಗೆ ಸಂತೋಷದ ಫಲಿತಾಂಶ ಕೊಡುತ್ತದೆ ಚಂದ್ರ ಗ್ರಹಣ. ಹೊಸ ಉದ್ಯೋಗಿಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ. ನಿಮ್ಮ ವಯಕ್ತಿಕ ಸಂಬಂಧಗಳು ವೃದ್ಧಿಯಾಗುತ್ತವೆ. ಎಲ್ಲದರಲ್ಲೂ ಗೌರವ-ಮನ್ನಣೆಗಳು ಹೆಚ್ಚಾಗುತ್ತವೆ. ಸಾಮಾಜಿಕ ಬದುಕಿನಲ್ಲಿ ಮಿಂಚುತ್ತೀರಿ. ಒಟ್ಟಿನಲ್ಲಿ ಈ ಗ್ರಹಣದಿಂದ ನಿಮಗೆ ಶುಭ ಫಲಗಳೇ ಜಾಸ್ತಿ.

ಮೀನ:

ಮೀನ ರಾಶಿಯವರಿಗೆ ಈ ಬಾರಿಯ ಗ್ರಹಣ ಅಂಥ ಶುಭವಲ್ಲ. ಗ್ರಹಣದ ವೇಳೆ ದೇವಿ ಆರಾಧನೆಯಿಂದ ಸುಖವೆನಿಸಲಿದೆ. ಇದರಿಂದ ಆಗುವ ಮುಖ್ಯ ಸಮಸ್ಯೆ ಅಂದರೆ, ಮಾನಸಿಕ ಒತ್ತಡ. ಅದರಲ್ಲೂ ನಾನಾ ಬಗೆಯ ಸಮಸ್ಯೆ ಹಾಗೂ ಸವಾಲುಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿವೆ. ಇನ್ನು ಗ್ರಹಣ ಸಂಭವಿಸಿದ ಮೇಲೆ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುತ್ತದೆ.