ನಾಳೆ ಖಗ್ರಾಸ ಚಂದ್ರ ಗ್ರಹಣ..! ಈ ದಿನದಂದು ಈ ಕೆಳಗಿನ ನಿಯಮಗಳನ್ನು ಪಾಲಿಸದಿದ್ದರೆ ನಿಮಗೆ ಗ್ರಹಣ ಹಿಡಿಯುತ್ತದೆ..!

0
1903

ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿಯು ಬಂದಾಗ ಚಂದ್ರ ಗ್ರಹಣವಾಗುವುದು ಎಂಬ ವೈಜ್ಞಾನಿಕ ಕಾರಣಗಳು ಮತ್ತು ಹಿನ್ನೆಲೆಗಳೂ ಸಾಕಷ್ಟಿವೆ. ಆದರೆ ವಿಜ್ಞಾನ ಹುಟ್ಟುವುದಕ್ಕೇ ಮೊದಲೇ ಅನಾದಿ ಕಾಲದಿಂದಲೂ ಗ್ರಹಣಾಚರಣೆ ಮಾಡಿಕೊಂಡು ಬರಲಾಗುತ್ತಿದೆ ಮತ್ತು ಅದನ್ನು ಹಿರೀಕರು ಬರೆದಿಟ್ಟಿದ್ದಾರೆ ಎಂದರೆ ನಮ್ಮ ಹಿಂದೂ ಧರ್ಮ ಎಷ್ಟು ಶ್ರೇಷ್ಠ ಎಂಬುದು ಗೊತ್ತಾಗುತ್ತದೆ.ಅನೇಕ ಭಾಗದಲ್ಲಿ ಗ್ರಹಣ ಎದುರಾದಾಗ ಅನೇಕ ಆಚರಣೆಗಳು ಶುರುವಾಗುತ್ತವೆ. ತಲತಲಾಂತರಗಳಿಂದ ಈ ಆಚರಣೆಗಳು ಚಾಲ್ತಿಯಲ್ಲಿವೆ.

ಈ ವರ್ಷ ಶ್ರೀ ಹೇವಿಳಂಬಿ ನಾಮ ಸಂವತ್ಸರದ ಶ್ರಾವಣ ಶುಕ್ಲ ಹುಣ್ಣಿಮೆ 07-08-2017 ಸೋಮವಾರ ಶ್ರವಣಾ ನಕ್ಷತ್ರ ಮಕರ ರಾಶಿಯಲ್ಲಿ ಚೂಡಾಮಣಿ ಕೇತುಗ್ರಸ್ತ ಪಾರ್ಶ್ವ ಚಂದ್ರ ಗ್ರಹಣ ಸಂಭವಿಸಲಿದೆ. ಇದು ಖಗ್ರಾಸ ಚಂದ್ರಗ್ರಹಣವಾಗಿದೆ. ಇಂದು ಸೂರ್ಯ, ಭೂಮಿ ಮತ್ತು ಚಂದ್ರ, ಈ ಮೂರೂ ಕಾಯಗಳು ಒಂದೇ ರೇಖೆಯ ಮೇಲೆ ಇರುತ್ತವೆ.

ಗ್ರಹಣದ ಅವಧಿ

ಗ್ರಹಣ ಸ್ಪರ್ಶ ಕಾಲ : ರಾತ್ರಿ 10-53 pm
ಗ್ರಹಣ ಮಧ್ಯ ಕಾಲ : ರಾತ್ರಿ 11-50 pm
ಗ್ರಹಣ ಮೋಕ್ಷ ಕಾಲ : ರಾತ್ರಿ 12-48 am(8-8-2017)

ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.

ಗ್ರಹಣದ ದಿನ ಏನು ಮಾಡಬೇಕು?

 1. ಆ ದಿನ ಸೂರ್ಯೋದಯಾದಿ ಹಗಲು 12-28 ಘಂಟೆಯೊಳಗೆ ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಆ ದಿನ ಹಗಲು 3-30 ಗಂಟೆಯವರೆಗೂ ಆಹಾರ ಸೇವಿಸಬಹುದು.
 2. ಆ ದಿನ ಗ್ರಹಣ ಮಧ್ಯಕಾಲಾನಂತರ ಅಂದರೆ ರಾತ್ರಿ 11-50 ಗಂಟೆಯ ನಂತರ ತರ್ಪಣ ಮಾಡುವುದು.
 3. ದಿನಾಂಕ : 07-08-2017 ಸೋಮವಾರ ನಡೆಸತಕ್ಕ ಶ್ರಾವಣ ಶುಕ್ಲ ಪೌರ್ಣಿಮೆ ಶ್ರಾದ್ಧವನ್ನು ಮಾರನೇ ದಿನ
  08-08-2017 ಮಂಗಳವಾರ ನಡೆಸುವುದು.
 4. “ಶ್ರವಣ” ನಕ್ಷತ್ರದವರೂ, “ಮಕರ” ರಾಶಿಯವರೂ ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.
 5. ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು :-
 6. ಗ್ರಹಣ ಆರಂಭಕ್ಕೂ ಮುನ್ನ ಒಂದು ಸಾರಿ ಸ್ನಾನ ಮಾಡಬೇಕು, ನಂತರ ಗ್ರಹಣ ಬಿಟ್ಟ ಮೇಲೆ ಇನ್ನೊಂದು ಸಾರಿ ಸ್ನಾನ ಮಾಡಬೇಕು.
 7. ಗ್ರಹಣ ಕಾಲದಲ್ಲಿ ಆಹಾರ ಸೇವಿಸುವುದು ನಿಷಿದ್ಧ. ಕೆಲವು ಕಡೆ ಮನೆಯ ಪೀಠದಲ್ಲಿರುವ ದೇವರನ್ನು ನೀರಿನಲ್ಲಿ ಮುಳುಗಿಸಿಡುವ ಸಂಪ್ರದಾಯವೂ ಇದೆ. ಇಲ್ಲಾ ಗ್ರಹಣ ಹಿಡಿದಲ್ಲಿಂದ ಬಿಡುವವರೆಗೆ ದೇವರಿಗೆ ನಿರಂತರ ಅಭಿಷೇಕ ಪೂಜೆ ಮಾಡಲಾಗಿತ್ತದೆ.
 8. ದೇವಾಲಯ ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು. ‌
 9. ಗ್ರಹಣ ಕಾಲದಲ್ಲಿ ಲೈಂಗಿಕ ಸಂಪರ್ಕ ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಅಲಂಕಾರ ಮಾಡಿಕೊಳ್ಳಬಾರದು. ‌ ‌
 10. ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು. ‌ ‌ ‌
 11. ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
 12. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.
 13. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. ‌ ‌

ಸೂಚನೆ: ಸೂರ್ಯ ಮುಳುಗಿದ ನಂತರ ಆಹಾರವನ್ನು ಸ್ವೀಕರಿಸಬಾರದು. ರಾತ್ರಿ ವೇಳೆ ಭೋಜನ ಸೇವಿಸಬೇಡಿ. ಅಶಕ್ತರು, ರೋಗಿಗಳು, ಮಕ್ಕಳು ರಾತ್ರಿ ಏಳು ಗಂಟೆಯವರೆಗೆ ಲಘು ಆಹಾರವನ್ನು ಸ್ವೀಕರಿಸಬಹುದು. ಆ ನಂತರ ಅವರೂ ಸಹ ಸ್ವೀಕರಿಸಬಾರದು.