ಜೀವಾವಧಿ ಶಿಕ್ಷೆ ಅನುಭವಿಸಿದ್ದ ಮಗನನ್ನು ಜೈಲಿನಿಂದ ಹೊರತರಲು ಸುರಂಗ ಕೊರೆದ ತಾಯಿಯ ರೋಚಕ ಕಥೆ ಓದಿ!!

0
259

ಉಕ್ರೇನ್ ದೇಶದ ಝಪೋರಿಝಾ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೊಲೆ ಮಾಡಿ ಜೈಲು ಸೇರಿದ್ದ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಗನನ್ನು ಹೇಗಾದರು ಮಾಡಿ ಹೊರ ಕರೆತರಬೇಕೆಂದು ಕೊಡ ಆತನ ತಾಯಿ ಸುರಂಗ ಕೊರೆಯುವ ಬಹುದೊಡ್ಡ ಮಾಸ್ಟರ್ ಪ್ಲಾನ್ ಮಾಡಿದಳು.

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ತನ್ನ ಮಗನನ್ನು ಜೈಲಿನಿಂದ ಕರೆತರಲು 51 ವರ್ಷದ ಮಹಿಳೆ ಬೃಹತ್ ಸುರಂಗವನ್ನು ಒಬ್ಬಳೇ ಕೊರೆದಿದ್ದಾಳೆ. ಸುಮಾರು 35 ಅಡಿ ಸುರಂಗವನ್ನು ಜೈಲಿನತ್ತ ಕೊರೆದಿದ್ದ ಈಕೆ ಈಗ ಮಾಡಿದ ತಪ್ಪಿಗೆ ಮಗನೊಂದಿಗೆ ಜೈಲೂಟ ಉಣ್ಣುತ್ತಿದ್ದಾಳೆ.

ಜೈಲಿಗೆ ಸಮೀಪದ ಮನೆಯೊಂದನ್ನು ಬಾಡಿಗೆಗೆ ಪಡೆದ ಈ ಮಹಿಳೆ ಇಲ್ಲಿಂದಲೇ ಸುರಂಗ ಕೊರೆಯುವ ಕೆಲಸವನ್ನು ಶುರು ಮಾಡಿದ್ದಳು. ನಿಖರ ಲೆಕ್ಕಾಚಾರ ಇಟ್ಟುಕೊಂಡೇ ಈಕೆ ಕಾರ್ಯಪ್ರವೃತ್ತಳಾಗಿದ್ದಳು. ಯಾರಿಗೂ ಗೊತ್ತಾಗಬಾರದು ಮತ್ತು ಯಾವುದೇ ಅನುಮಾನ ಬರಬಾರದೆಂದು ರಾತ್ರಿ ಹೊತ್ತು ಈಕೆ ಸುರಂಗ ಕೊರೆಯುವ ಕೆಲಸವನ್ನು ಮಾಡುತ್ತಿದ್ದಳು.

ಕೆಲವೇ ದಿನಗಳ ಪರಿಶ್ರಮದ ಬಳಿಕ ಈಕೆ 10 ಅಡಿಗಳ ಸುರಂಗವನ್ನು ಕೊರೆಯುವಲ್ಲಿ ಯಶಸ್ವಿಯಾದಳು. ಹೀಗೆ, ಭೂಗತ ಮಾರ್ಗವನ್ನು ಒಬ್ಬಂಟಿಯಾಗಿ ಕೊರೆಯುವ ಕೆಲಸ ಮಾಡಿದ್ದ ಈ ಮಹಿಳೆ ಜೈಲಿನ ಗೋಡೆಯ ಸಮೀಪದ ತನಕ ಸುಮಾರು 35 ಅಡಿ ಸುರಂಗವನ್ನು ಕೊರೆದಿದ್ದಳು. ದಿನದ ಬಹುತೇಕ ಅವಧಿಯನ್ನು ಈಕೆ ತನ್ನ ಬಾಡಿಗೆ ಮನೆಯಲ್ಲೇ ಕಳೆಯುತ್ತಿದ್ದಳು. ಹೀಗಾಗಿ, ತಾನು ಹೊರಗಿನವಳು ಎಂಬ ಅನುಮಾನ ಯಾರಿಗೂ ಬರದಂತೆ ನೋಡಿಕೊಳ್ಳುತ್ತಿದ್ದಳು. ಸೂರ್ಯಾಸ್ತವಾಗುತ್ತಿದ್ದಂತೆಯೇ ಈಕೆ ತನ್ನ ಕೆಲಸವನ್ನು ಶುರು ಮಾಡುತ್ತಿದ್ದಳು. ತನ್ನ ಸ್ಕೂಟರ್ನಲ್ಲಿ ಹೋಗುತ್ತಿದ್ದ ಈಕೆ ಸಣ್ಣ ಟ್ರಾಲಿಯನ್ನು ಬಳಸಿ ಸುರಂಗದ ಮಣ್ಣನ್ನು ಹೊರಗೆ ತರುತ್ತಿದ್ದಳು.

ಪೊಲೀಸ್ ಅಧಿಕಾರಿಗಳಿಗೆ ಸೆರೆ ಸಿಕ್ಕುವ ಮುನ್ನ ಸುಮಾರು ಮೂರು ವಾರಗಳಷ್ಟು ಕಾಲ ಈಕೆ ಯಾರಿಗೂ ಗೊತ್ತಿಲ್ಲದಂತೆ ತನ್ನ ಕೆಲಸದಲ್ಲಿ ತೊಡಗಿದ್ದಳು. ಈ ಅವಧಿಯಲ್ಲಿ ಸುಮಾರು ಮೂರು ಟನ್ಗಳಷ್ಟು ಈಕೆ ಮಣ್ಣನ್ನು ಹೊರತೆಗೆದಿದ್ದಳು. ಈಕೆ ತಪ್ಪೇ ಮಾಡಿರಬಹುದು. ಆದರೆ, ಒಂದಷ್ಟು ಜನ ಈಕೆಯ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಬಹುದೊಡ್ಡ ಸಾಧನಗಳಿಲ್ಲದೆ ಈಕೆ ಇಷ್ಟು ದೊಡ್ಡ ಸುರಂಗ ಕೊರೆದಿರುವುದು ಜನರಿಗೂ ಅಚ್ಚರಿ ತಂದಿದೆ.

ತಾಯಿಯಾಗಿ ಈಕೆ ಈ ಕೆಲಸ ಮಾಡಿರಬಹುದು. ಆದರೆ, ತಾಯಿಯಾದರೂ ಕೊಲೆಗಡುಕ ಪುತ್ರನ ತಪ್ಪಿಗೆ ಬೆಂಬಲವಾಗಿ ನಿಲ್ಲುವುದು ಸರಿಯಲ್ಲ. ಯಾಕೆಂದರೆ, ಕಾನೂನನ್ನು ಮೀರುವ ಹಕ್ಕು ಯಾರಿಗೂ ಇಲ್ಲ. ಹೀಗಾಗಿ, ಪುತ್ರನನ್ನು ಬಿಡಿಸಿಕೊಳ್ಳಲು ಕಳ್ಳದಾರಿ ಹಿಡಿದ ಈಕೆಯ ಪರಿಶ್ರಮ ಶ್ಲಾಘನೀಯವೂ ಅಲ್ಲ, ಅನುಕರಣೀಯವೂ ಅಲ್ಲ. ಸದ್ಯ ಮಾಡಿದ ತಪ್ಪಿಗಾಗಿ ಈಕೆ ಕೂಡಾ ಜೈಲೂಟ ತಿನ್ನುತ್ತಿದ್ದಾಳೆ.
ಆದರೆ ಉಕ್ರೇನ್ ಜನ ಮಾತ್ರ ೀಕೆಯ ನಡೆಯನ್ನು ಮೆಚ್ಚಿದ್ದು, ನಿಜವಾದ ತಾಯಿ ಎಂದರೆ ಅದು ಈಕೆ ಎಂದು ಬಣ್ಣಿಸಿದ್ದಾರೆ.