ಆಂಬುಲೆನ್ಸ್ ಸಿಗದ ಕಾರಣ ತಾಯಿಯನ್ನ ಹೊತ್ತುಕೊಂಡೇ ಬಂದ ಮಗ ಆದ್ರೆ ತಾಯಿ ಜೀವ ಉಳಿಯಲಿಲ್ಲ..!

0
549

ಹೌದು ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ತುಂಬಾ ಹೆಚ್ಚಾಗಿವೆ. ಕಲಬುರಗಿಯ ಉದನೂರ ಕ್ರಾಸ್ ಬಳಿ ಸಿದ್ದಮ್ಮ ಎಂಬ ಅಜ್ಜಿ ದಾರಿಯಲ್ಲಿ ಬರುತ್ತಿರುವಾಗ ಬೈಕ್ ಡಿಕ್ಕಿ ಹೊಡೆಯುತ್ತದೆ. ಆಗ ಬಂದ ಮಗ ಮಹಾಂತೇಷ 108 ಆಂಬುಲೆನ್ಸ್ ಗೆ ಕರೆ ಮಾಡಿದ್ರು ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬರುವುದಿಲ್ಲ.

 

ನಂತರ ಅಲ್ಲಿದ ಸ್ಥಳೀಯರ ಬಳಿ ನೆರವು ಕೇಳಿದ್ರು ಮಾನವಿಯತೆ ಮರೆತ ಜನ ಯಾರು ಸಹಾಯ ಮಾಡುವುದಿಲ್ಲ. ಕೊನೆಗೆ ಮಗ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ತಾಯಿಯನ್ನು ಹೊತ್ತು 45 ನಿಮಿಷಗಳ ಕಾಲ ಹೊತ್ತು ಸಾಗಿದ್ದರು. ನಂತರ ಇದನ್ನು ಗಮನಿಸಿದ ಪೊಲೀಸರು ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ವಿಧಿಯಾಟ ತಾಯಿ ಬದುಕುವುದಿಲ್ಲ ಯಾಕೆ ಅಂದ್ರೆ ತಾಯಿಗೆ ತುಂಬ ರಕ್ತ ಹೋಗಿದ್ದರಿಂದ ಆ ಅಜ್ಜಿ ಸಾಯುತ್ತಾಳೆ. ಈ ಸುದ್ದಿ  ಮಾಧ್ಯಮಗಳಲ್ಲಿ  ಬಿತ್ತರವಾದಾಗ. ಯುನೈಟೆಡ್ ಆಸ್ಪತ್ರೆಯವರು ಉಚಿತ ಚಿಕಿತ್ಸೆ ಕೊಟ್ಟು ಮಾನವಿಯತೆ ಮೆರೆದಿದ್ದಾರೆ.