ಎರಡು ಮಕ್ಕಳ ತಾಯಿ; ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗಲು ಸಿದ್ದಳಾದ ‘ಪವರ್ ಲಿಫ್ಟರ್’ ಕವಿತಾ ದೇವಿ! ದೇಶಕ್ಕೆ ಮಾದರಿ..

0
437

ಮಹಿಳೆಯರು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದಕ್ಕೆ ಸಾಕಷ್ಟು ವನಿತೆಯರ ಸಾಧನೆಗಳೇ ಸಾಕ್ಷಿಯಾಗಿವೆ. ಇನ್ನೂ ಭಾರತೀಯ ಮಹಿಳೆಯರು ಪ್ರವೇಶಿಸದ ಯಾವುದೇ ಕೆಲಸ, ಕ್ರೀಡೆಗಲಿಲ್ಲ. ಆ ಸಾಧನೆಗಳೆ ಇಂದು ದೇಶಕ್ಕೆ ಮಾದರಿಯಾಗುತ್ತಿವೆ. ಇಂತಹವರ ಸಾಲಿನಲ್ಲಿ ಬರುವ ದಿ ಗ್ರೇಟ್ ಡಬ್ಲ್ಯೂಡಬ್ಲ್ಯೂಇ ಕುಸ್ತಿ ಖಲಿ ಶಿಷ್ಯೆ ಹಾಗೂ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್’ಟೈನ್’ಮೆಂಟ್ (WWE)ಯೊಂದಿಗೆ ಸಹಿ ಮಾಡಿಕೊಂಡ ಭಾರತದ ಪ್ರಪ್ರಥಮ ಮಹಿಳೆಯಾಗಿರುವ ಕವಿತಾ ಮತ್ತೊಂದು ಸಾಧನೆ ಮಾಡಲಿದ್ದಾರೆ.


Also read: ಅಂದು ಕುರಿಕಾಯಿತ್ತಿದ ಹುಡುಗಿ ಇಂದು ಫ್ರಾನ್ಸ್​ ದೇಶದ ಶಿಕ್ಷಣ ಮಂತ್ರಿ; ಸಾಧನೆ ಮಾಡುವ ಮನಸ್ಸಿದ್ದರೆ ಒಂದು ಸಾರಿ ಈ ಕಥೆ ಓದಿ..

ಹೌದು ಭಾರತೀಯ ಉಡುಗೆ ಚೂಡಿದಾರ ತೊಟ್ಟು ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡ ಏಕೈಕ ಮಹಿಳೆ ಕವಿತಾ ದೇವಿ. ಇದೀಗ ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಎರಡು ಮಕ್ಕಳ ತಾಯಿ, 32 ವರ್ಷದ ಕವಿತಾ ದೇವಿ ಹಲವು ಅಡೆತಡೆಗಳನ್ನ ಯಶಸ್ವಿಯಾಗಿ ಎದುರಿಸಿ ಇದೀಗ ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ ಹೆಜ್ಜೆ ಇಟ್ಟಿದ್ದಾರೆ. 2019ರಲ್ಲಿ ನಡೆಯಲಿರುವ ಮಹಿಳಾ ವಿಭಾಗದ WWE ರಸ್ಲಮೇನಿಯಾದಲ್ಲಿ ಕವಿತಾ ದೇವಿ ಸ್ಪರ್ಧೆಗಿಳಿಯಲ್ಲಿದ್ದಾರೆ. ಈ ವಿಷಯ ದೇಶಾದ್ಯಂತ ಹರಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.


Also read: ಹಾಕಿಕೊಳ್ಳಲು ಸರಿಯಾದ ಶೂಗಳು ಇಲ್ಲದಿದ್ದರೂ, ಭಾರತಕ್ಕೆ ಚಿನ್ನ ತಂದುಕೊಟ್ಟ ಸ್ವಪ್ನ ಬರ್ಮನ್-ರ ಕಥೆ ಕೇಳಿ; ಅವರ ಸಾಧನೆ ಸ್ಫೂರ್ತಿ ಮೂಡಿಸುತ್ತೆ!

ಕವಿತಾ ದೇವಿ ವೃತಿ ಜೀವನ:

ಮೂಲತಃ ಹರಿಯಾಣದವರಾಗಿರುವ ಕವಿತಾ ದೇವಿಯವರು ದಿ ಗ್ರೇಟ್ ಖಲಿಯವರಿಂದ ವೃತ್ತಿಪರ ರಸ್ಲಿಂಗ್ ತರಬೇತಿಯನ್ನು ಪಡೆದುಕೊಂಡಿದ್ದಾರೆ. ರಸ್ಲರ್ ಬಿ.ಬಿ.ಬುಲ್ ಬುಲ್ ಅವರೊಂದಿಗೆ ಆಕಸ್ಮಿಕವಾಗಿ ಸ್ಪರ್ಧೆ ನಡೆಸಿದೆ ಬಳಿಕ ಕವಿತಾ ಅವರಿಗೆ ಖ್ಯಾತಿ ಪಡೆದುಕೊಂಡಿದ್ದರು. ಬಿ.ಬಿ. ಬುಲ್ ಬುಲ್ ಅವರೊಂದಿಗಿನ ಕವಿತಾ ದೇವಿಯವರ ಕುಸ್ತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಲ್ಲದೆ, 2016ರಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿಯೂ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಈ ಹಿನ್ನೆಲೆಯಾಗಿ ವರ್ಲ್ಟ್ ರಸ್ಲಿಂಗ್ ಎಂಟರ್ಟೈನ್‌ಮೆಂಟ್(WWE)ನಲ್ಲಿ ದಿ ಗ್ರೇಟ್ ಖಲಿ ಎಂಟ್ರಿ ಕೊಟ್ಟ ಮೇಲೆ ಇತರ ಭಾರತೀಯರೂ ಕೂಡ ಅಂತಾರಾಷ್ಟ್ರೀಯ ರಸ್ಲಿಂಗ್‌ನಲ್ಲಿ ಮಿಂಚಬಹುದು ಅನ್ನೋ ಕಲ್ಪನೆ ಎಲ್ಲರಲ್ಲಿ ಮೂಡಿತು. ಆದರೆ ಈ ರಸ್ಲಿಂಗ್‌ನಲ್ಲಿ ಪಾಲ್ಗೊಳ್ಳಲು ಭಾರತೀಯ ಮಹಿಳೆಯರು ಹಿಂದೇಟು ಹಾಕಿದ್ದರು. ಆದರೆ 2018ರಲ್ಲಿ ಹರಿಯಾಣ ಮೂಲದ ಕವಿತಾ ದೇವಿ ಎಂಟ್ರಿ ಕೊಡೋ ಮೂಲಕ ದಾಖಲೆ ಬರೆದಿದ್ದರು.


Also read: ತೆಲುಗಿನ “ಮಹಾನಟಿ” ಸಾವಿತ್ರಿಯವರ ಬಗ್ಗೆ ತಿಳಿದುಕೊಳ್ಳಿ, ಅವರಲ್ಲಿನ ಮಾನವತಾ ವ್ಯಕ್ತಿತ್ವ ನಿಮಗೆ ಸ್ಪೂರ್ತಿಯಾಗುತ್ತೆ!

ಸ್ಪರ್ದೆಗಾಗಿ ಇಂಗ್ಲಿಷ್ ಕಲಿಯುತ್ತಿರುವ ಕವಿತಾ:

ದಿ ಗ್ರೇಟ್ ಖಲಿ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿ WWE ರಸ್ಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕವಿತಾ ದೇವಿ ಆರಂಭದಲ್ಲೇ ಭಾಷೆ ತೊಡಕು ಎದುರಿಸಿದ್ದರು. ಇಂಗ್ಲೀಷ್ ಸಮಸ್ಯೆಯಿಂದ ಕೋಚಿಂಗ್ ಕ್ಲಾಸ್, ಇಂಗ್ಲೀಷ್ ಲರ್ನಿಂಗ್ ಕ್ಲಾಸ್ ಹಾಜರಾದ ಕವಿತಾ ದೇವಿ ಇಂಗ್ಲೀಷ್ ಕಲಿತಿದ್ದಾರೆ. ಹಳ್ಳಿಯಿಂದ ಅಮೇರಿಕಾದಂತ ದೇಶದಲ್ಲಿ ರಸ್ಲಿಂಗ್ ಆಡಲು ಬಂದ ನನ್ನ ಪಾಡು ಹೇಳತೀರದು. ಇದಕ್ಕಾಗಿ ಸಾಕಷ್ಚು ಶ್ರಮ ವಹಿಸಿದ್ದೇನೆ ಎಂದು ಕವಿತಾ ದೇವಿ ತಮ್ಮ ರಸ್ಲಿಂಗ್ ಪಯಣವನ್ನ ಬಿಚ್ಚಿಟ್ಟಿದ್ದಾರೆ.

ಕವಿತಾ ಎರಡು ಮಕ್ಕಳ ತಾಯಿಯಂತೆ:

ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಾಯಿಯಾದ ನಂತರ ಶಕ್ತಿ ಕಳೆದು ಕೊಳ್ಳುತ್ತಾರೆ. ಹಾಗಯೇ ಜೀವನವೇ ಇಷ್ಟಕ್ಕೆ ಮುಗಿಯಿತು ಅಂತ ಗೃಹಿಣಿಯಾಗಿರಲು ಇಷ್ಟ ಪಡುತ್ತಾರೆ. ಆದರೆ ಎರಡು ಮಕ್ಕಳ ತಾಯಿ, 32 ವರ್ಷದ ಕವಿತಾ ದೇವಿ ಹಲವು ಅಡೆತಡೆಗಳನ್ನ ಯಶಸ್ವಿಯಾಗಿ ಎದುರಿಸಿ ಇದೀಗ ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ ಹೆಜ್ಜೆ ಇಟ್ಟಿದ್ದಾರೆ. ಇವರ ಸಾಧನೆಗೆ ಎಷ್ಟೇ ಹೊಗಳಿದರು ಕಡಿಮೆ.

ಈ ಬಗ್ಗೆ ಮಾತನಾಡಿದ ಕವಿತಾ:

ತಮ್ಮ ವೃತ್ತಿ ಜೀವನ ಕುರಿತು ಅಭಿಪ್ರಾಯ ತಿಳಿಸಿದ ಕವಿತಾ ದೇವಿಯವರು 2018 ನನ್ನ ರಸ್ಲಿಂಗ್ ಕರಿಯರ್‌ ಹೆಚ್ಚು ಖುಷಿ ನೀಡಿದ ವರ್ಷ. ಇದೀಗ 2019ರಲ್ಲಿ ಭಾರತದ ಮೊದಲ ಚಾಂಪಿಯನ್ ಅನ್ನೋ ಪಟ್ಟ ಗಿಟ್ಟಿಸಿಕೊಳ್ಳಲು ಅಭ್ಯಾಸ ನಡೆಸಿದ್ದೇನೆ. ಉತ್ತಮ ಹೋರಾಟದ ಮೂಲಕ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳುತ್ತೇನೆ ಎಂದು ಕವಿತಾ ದೇವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.